ಬೀದಿ ಜಗಳಕ್ಕೆ ಆಕ್ಸೆಂಚರ್ ಕಂಪನಿ ಟೆಕ್ಕಿ ಕೊಲೆ, ಆರೋಪಿ ಪೊಲೀಸರ ಬಲೆಗೆ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 11: ಆಕ್ಸೆಂಚರ್ ಕಂಪೆನಿಯ ಸಾಫ್ಟ್ ವೇರ್ ಉದ್ಯೋಗಿ, ಇಪ್ಪತ್ತೆಂಟು ವರ್ಷದ ಪ್ರಣಯ್ ಮಿಶ್ರಾ ಕೊಲೆಗೆ ಬೀದಿ ಜಗಳ ಕಾರಣ ಎಂದು ತಿಳಿದುಬಂದಿದೆ. ಕೊಲೆ ಆರೋಪಿಗಳ ಪೈಕಿ ಒಬ್ಬನಾದ ಕಾರ್ತೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನದ ವೇಳೆ ಕಾರ್ತೀಕ್ ಮೇಲೆ ಗುಂಡು ಹಾರಿಸಿದ್ದು, ಆತನಿಗೆ ಗಾಯಗಳಾಗಿವೆ.

ಚಿಕ್ಕಬಳ್ಳಾಪುರದಲ್ಲಿ ಗ್ಯಾಂಗ್ ವಾರ್, ಓರ್ವ ಸಾವು, ಇಬ್ಬರಿಗೆ ಗಾಯ

ಈ ಸಂದರ್ಭದಲ್ಲಿ ಪೊಲೀಸರಿಗೂ ಗಾಯಗಳಾಗಿವೆ. ಪ್ರಣಯ್ ರಾಯ್ ನನ್ನು ಸೋಮವಾರ ಹಲವು ಬಾರಿ ಇರಿದು ಕೊಲೆ ಮಾಡಲಾಗಿತ್ತು. ಕಾರ್ತೀಕ್ ಹಾಗೂ ಆತನ ಸ್ನೇಹಿತರಿದ್ದ ಬೈಕ್ ಗೆ ಪ್ರಣಯ್ ಬೈಕ್ ತಾಗಿತ್ತು. ಆ ನಂತರ ಹಿಂಬಾಲಿಸಿಕೊಂಡು ಬಂದು, ಪ್ರಣಯ್ ನನ್ನು ಇರಿದು ಕೊಂದಿದ್ದರು.

Accenture Techie Killed In Road Rage, Cops catch suspect

ಕಾರ್ತೀಕ್ ಗೆ ಅಪರಾಧ ಹಿನ್ನೆಲೆಯಿದೆ. ಮಂಗಳವಾರ ಕಾರ್ತೀಕ್ ನನ್ನು ಬೆನ್ನಟ್ಟಿದ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಇಬ್ಬರು ಪೊಲೀಸರಿಗೂ ಸಣ್ಣ-ಪುಟ್ಟ ಗಾಯಗಳಾಗಿವೆ. ಸದ್ಯಕ್ಕೆ ಕಾರ್ತೀಕ್ ಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗುತ್ತಿದೆ. ಆತನ ಸಹಚರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಟೆಕ್ಕಿ ಕೊಲೆ

ಒಡಿಶಾ ಮೂಲದ ಪ್ರಣಯ್ ಮಿಶ್ರಾ ಭಾನುವಾರ ಪಾರ್ಟಿ ಮುಗಿಸಿ ಮನೆಗೆ ಹಿಂತಿರುಗಿದ ನಂತರ ಗೆಳತಿಯೊಬ್ಬರನ್ನು ಭೇಟಿಯಾಗಲು ತೆರಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pranoy Mishra, a 28-year-old techie working with Accenture in Bengaluru, was stabbed multiple times early on Monday morning. Because his two-wheeler had scraped against another in a Bengaluru suburb. Karthik, who has a criminal record, and his friend, who were on the other two-wheeler, followed the techie and stabbed him, the police said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ