ಬೆಳ್ಳಂಬೆಳಗ್ಗೆ 5 ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 16 : ಶುಕ್ರವಾರ ಬೆಳ್ಳಂಬೆಳಗ್ಗೆ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ರಾಜ್ಯದ ವಿವಿಧೆಡೆ ಐವರು ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ.

ಹೊಸ ನೋಟು ಬದಲಾವಣೆ ಸಂಬಂಧ ಅಕ್ರಮದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ವಿಶೇಷ ಭೂ ಸ್ವಾಧೀನಾಧಿಕಾರಿ ಭೀಮಾನಾಯ್ಕ್ ಅವರ ಬಳ್ಳಾರಿಯ ಹಗರಿ ಬೊಮ್ಮನಹಳ್ಳಿ ಸಮೀಪ ಮರಿಯಮ್ಮನ ಹಳ್ಳಿಯಲ್ಲಿರುವ ನಿವಾಸದ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು ಕೋಟ್ಯಂತರ ಹಣ ಮತ್ತು ಚಿನ್ನಾಭರಣವನ್ನು ವಶಪಡಿಸಿಕೊಂಡಿಡರು.[ಚಿಕ್ಕರಾಯಪ್ಪ ಸಂಬಂಧಿಗಳ ಮನೆ ಮೇಲೆ ಎಸಿಬಿ ದಾಳಿ]

ACB sleuths raid on 5 officials in various parts of Karnataka

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಕಾರ್ಯನಿರ್ವಾಹಕ ಎಂಜಿನಿಯರ್‌ ಟಿ.ಆರ್‌. ಶಿವರಾಮು, ಕಲಬುರಗಿ ಜಿಲ್ಲಾ ಪಂಚಾಯ್ತಿಯ ಸಹಾಯಕ ಎಂಜಿನಿಯರ್‌ ಶಿವಲಿಂಗಪ್ಪ, ತುಮಕೂರು ಜಿಲ್ಲೆ ಕೊರಟಗೆರೆ ವಲಯದ ಅರಣ್ಯಾಧಿಕಾರಿ ಡಿ. ನರಸಿಂಹಮೂರ್ತಿ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಪಶುವೈದ್ಯಾಧಿಕಾರಿ ಎಚ್‌.ಎಂ. ಶಿವಪ್ರಸಾದ್ ಅವರ ಮನೆಗಳ ಮೇಲೆ ಹಾಗೂ ಕಚೇರಿಗಳ ಮೇಲೆ ಎಸಿಬಿ ದಾಳಿ ನಡೆಸಿದರು.

ದಾಳಿ ಮಾಡಿರುವ ಅಧಿಕಾರಿಗಳು ಯಾರ ಮನೆಯಲ್ಲಿ ಎಷ್ಟು ಹಣ, ವಡವೆ ಇತ್ಯಾದಿ ದೊರಕಿರುವ ಬಗ್ಗೆ ಮಾಹಿತಿ ನೀಡಿಲ್ಲ. ಆದರೆ ಅಪಾರ ಪ್ರಮಾಣದ ಆಸ್ತಿ ದಾಖಲೆಯನ್ನು ಪರಿಶೀಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
5 officers of the ACB raid on house. ACB officials raid at five places in Karnataka to investigate house of officials
Please Wait while comments are loading...