ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರಗೆ ಬಿಗ್ ರಿಲೀಫ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 02: ಸಿಎಂ ಸಿದ್ದರಾಮಯ್ಯ ಪುತ್ರ ಡಾ. ಯತೀಂದ್ರ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಯೂನಿಟ್ ಆರಂಭಕ್ಕೆ ನಿಯಮ ಬಾಹಿರವಾಗಿ ಟೆಂಡರ್ ಪಡೆದುಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಕ್ಲೀನ್ ಚೀಟ್ ನೀಡಿದೆ.

ಸಿಎಂ ಪುತ್ರ ಡಾ.ಯತೀಂದ್ರ ಮೇಲೆ ಅವ್ಯವಹಾರದ ತೂಗುಕತ್ತಿ!

ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಡಯಾಗ್ನೋಸ್ಟಿಕ್ ಕೇಂದ್ರ ತೆರೆಯಲು ನಿಯಮ ಬಾಹಿರವಾಗಿ ಟೆಂಡರ್ ನ್ನು ಯತೀಂದ್ರ ಅವರು ಪಡೆದಿದ್ದಾರೆ ಎಂದು ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರ್ ಎನ್ನುವರು 2016 ಮೇನಲ್ಲಿ ಭ್ರಷ್ಟಾಚಾರನಿಗ್ರಹ ದಳಕ್ಕೆ ದೂರು ನೀಡಿದ್ದರು. ಇದನ್ನು ವಿಚಾರಣೆ ನಡೆಸಿದ ಎಸಿಬಿ, ದೂರುದಾರ ಭಾಸ್ಕರ್ ಮಾಡಿರುವ ಆಪಾದನೆಗಳಿಗೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಹೇಳಿದೆ.

ಸಿದ್ದರಾಮಯ್ಯ ಪುತ್ರ ಯತೀಂದ್ರರ 'ಮ್ಯಾಟ್ರಿಕ್ಸ್' ಹಿನ್ನಲೆ ಏನು?

ACB gives clean chit to CM Siddaramaiah son dr Yathindra in diagnostic centre case

ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರಧಾನಮಂತ್ರಿ ಸ್ವಸ್ತ ಸುರಕ್ಷಾ ಯೋಜನೆ ಅಡಿಯಲ್ಲಿ ಡಯಾಗ್ನೋಸ್ಟಿಕ್ ಸರ್ವೀಸಸ್ ಅನ್ನು ಪ್ರಾರಂಭಿಸಿಲು ಟೆಂಡರ್ ನ್ನು ನಿಯಮಬಾಹಿರವಾಗಿ ಪಡೆದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಎಸ್. ಭಾಸ್ಕರ್ ಅವರು 23.05.2016 ರಂದು ಎಸಿಬಿಗೆ ದೂರು ನೀಡಿದ್ದರು.

ಸಿದ್ದರಾಮಯ್ಯ ಮಗನಿಗೆ ಸಿಕ್ಕಿದ್ದು ಇದೊಂದೇ ಪ್ರಾಜೆಕ್ಟಾ?

ಎಸಿಬಿ ನೀಡಿರುವ ಕ್ಲೀನ್ ಚೀಟ್ ಗೆ ದೂರುದಾರ ಭಾಸ್ಕರ್ ಆಕ್ರೋಶ ವ್ಯಕ್ತಪಡಿಸಿದ್ದು, ಹೈಕೋರ್ಟ್ ನಲ್ಲಿ ಕಾನೂನು ಸಮರ ಆರಂಭಿಸಲು ನಿರ್ಧಾರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Anti-Corruption Bureau (ACB) has given a clean chit to Chief Minister Siddaramaiah son Dr Yathindra in private diagnostic centre in Victoria Hospital case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ