ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಲಂಚ ಸ್ವೀಕರಿಸುತ್ತಿದ್ದ ಸರ್ಕಾರಿ ಅಧಿಕಾರಿಗಳನ್ನು ಹಿಡಿದ ಎಸಿಬಿ

By Manjunatha
|
Google Oneindia Kannada News

ಬೆಂಗಳೂರು, ಜುಲೈ 24 : ರಾಜ್ಯದಲ್ಲಿ ಎರಡು ಕಡೆ ಎಸಿಬಿ ದಾಳಿ ನಡೆಸಿದ್ದು, ಲಂಚ ಸ್ವೀಕರಿಸುತ್ತಿದ್ದ ವೇಳೆಯೇ ಸರ್ಕಾರಿ ಅಧಿಕಾರಿಗಳನ್ನು ಎಸಿಬಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಮೆಣಸಿ ಗ್ರಾಮದ ನಿವಾಸಿಯಾಗಿರುವ ಸಿವಿಲ್ ಗುತ್ತಿಗೆದಾರರಿಂದ ಹಲಗೆರೆ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಶೈಲೇಶ ಕುಮಾರ ₹ 5,000/- ಲಂಚದ ಹಣವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ಕಾರವಾರ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದಿದ್ದಾರೆ.

ಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕುಮಾರಸ್ವಾಮಿ ಯತ್ನಮಾಧ್ಯಮಗಳ ಮೇಲೆ ನಿಯಂತ್ರಣಕ್ಕೆ ಕುಮಾರಸ್ವಾಮಿ ಯತ್ನ

ಲಂಚ ಸ್ವೀಕರಿಸುತ್ತಿದ್ದ ಶೈಲೇಶ ಕುಮಾರ್ ಅವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ತನಿಖೆ ಮುಂದುವರೆದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ACB detained two governmenr workers for taking bribe

ಮತ್ತೊಂದು ಪ್ರಕರಣದಲ್ಲಿ ಬೆಂಗಳೂರಿನ ಕಗ್ಗಲೀಪುರ ಗ್ರಾಮ ಮಂಚಾಯಿತಿ ಬಿಲ್ ಕಲೆಕ್ಟರ್‌ ಮುನಿಕೃಷ್ಣ ಖಾತಾ ಬದಲಾವಣೆಗಾಗಿ ಅರ್ಜಿದಾರೊಬ್ಬರಿಂದ ರೂ.3,000/- ಲಂಚದ ಹಣಕ್ಕೆ ಬೇಡಿಕೆ ಇಟ್ಟಿದ್ದರು.

ಎಸಿಬಿ ಬಲೆಗೆ ಬಿದ್ದ ಅರಣ್ಯಾಧಿಕಾರಿ ಗಳಿಸಿದ್ದ ಆಸ್ತಿ ಎಷ್ಟು ಗೊತ್ತಾ?ಎಸಿಬಿ ಬಲೆಗೆ ಬಿದ್ದ ಅರಣ್ಯಾಧಿಕಾರಿ ಗಳಿಸಿದ್ದ ಆಸ್ತಿ ಎಷ್ಟು ಗೊತ್ತಾ?

ಇಂದು ಮುನಿಕೃಷ್ಣ ಅವರು ಲಂಚದ ಹಣ 3,000 ವನ್ನು ಸ್ವೀಕರಿಸುತ್ತಿದ್ದ ಸಂದರ್ಭದಲ್ಲಿ ರಾಮನಗರ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ನಡೆಸಿದ ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿರುತ್ತಾರೆ, ಇವರನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ.

English summary
Anti corruption bureau officers raids in two places of state and detained two government workers while taking bribe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X