ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೀರು ಸಂಪರ್ಕ ಕೇಳಿದ್ದಕ್ಕೆ 'ಹೊಲಸು' ತಿಂದು ಸಿಕ್ಕಿಬಿದ್ದ ಭ್ರಷ್ಟ

By Ananthanag
|
Google Oneindia Kannada News

ಬೆಂಗಳೂರು, ಜನವರಿ 18: ಖಾಸಗಿ ವಾಣಿಜ್ಯ ಕಟ್ಟಡಕ್ಕೆ ನೀರು ಮತ್ತು ಒಳಚರಂಡಿ ಸಂಪರ್ಕಕ್ಕಾಗಿ ಸಲ್ಲಿಸಿದ್ದ ಅರ್ಜಿಯ ಕಡತ ಬಾಕಿ ಉಳಿಕೊಂಡು ಅನುಮತಿ ನೀಡಲು ಲಂಚಕ್ಕೆ ಒತ್ತಾಯಿಸುತ್ತಿದ್ದ ನಾಗರಬಾವಿಯ ಉಪ ವಲಯ ಜೂನಿಯರ್ ಎಂಜಿನಿಯರ್ ಭ್ರಷ್ಟಾಚಾರ ನಿಗ್ರಹ ದಳದ ಅತಿಥಿಯಾಗಿದ್ದಾರೆ.

ನಗರದ ಟಿ. ದಾಸರಹಳ್ಳಿಯ ಗುತ್ತಿಗೆದಾರರೊಬ್ಬರು ಖಾಸಗಿ ವಾಣಿಜ್ಯ ಕಟ್ಟಡದಕ್ಕೆ ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸಲು ಕೋರಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಲಿಯ ನಾಗರಭಾವಿ ಉಪವಲಯ ಕಚೇರಿಯಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು.[ನಮ್ಮ ಸರ್ಕಾರಿ ಕಚೇರಿಗಳಲ್ಲಿ ಚಿಕ್ಕಪುಟ್ಟ ಲಂಚ, ಇಬ್ಬರು ಒಳಗೆ]

Acb arrested for chenneshappa taking bribe in Nagarabavi

ಉಪವಲಯ ಕಚೇರಿಯ ಜೂನಿಯರ್ ಎಂಜಿನಿಯರ್ ಚನ್ನೇಶ್ವರ ಅವರು ಅರ್ಜಿ ಸಂಬಂಧ ಅನುಮತಿ ನೀಡಲು ಕಡತವನ್ನು ಬಾಕಿ ಉಳಿಸಿಕೊಂಡಿದ್ದು, 25.000 ಲಂಚವನ್ನು ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದಾರೆ. ಮನನೊಂದ ಅರ್ಜಿದಾರರು ಭ್ರಷ್ಟಾಚಾರ ನಿಗ್ರಹ ದಳಕ್ಕೆ ದೂರನ್ನು ಸಲ್ಲಿಸಿದ್ದಾರೆ.[ಲಂಚ ನೀಡಲು ಹೋಗಿ ಎಸಿಬಿಗೆ ಸಿಕ್ಕಿಬಿದ್ದ ಶಿರಸ್ತೇದಾರ]

ಬುಧವಾರ ದೂರುದಾರರು ಚನ್ನೇಶಪ್ಪ ಅವರಿಗೆ ರು.10,000 ಲಂಚ ನೀಡುತ್ತಿದ್ದ ವೇಳೆ ಎಸಿಬಿ ದಾಳಿ ನಡೆಸಿ ಜೂನಿಯರ್ ಎಂಜಿನಿಯರ್ ಅವರನ್ನು ಭ್ರಷ್ಟಾಚಾರ ತಡೆ ಕಾಯ್ದೆಯನ್ವಯ ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ. ಎಸಿಬಿ ಬೆಂಗಳೂರು ನಗರ ಪೊಲೀಸ್ ಠಾಣೆಯಲ್ಲಿ ತನಿಖೆ ಮುಂದುವರೆಸಲಾಗಿದೆ.

English summary
A team of Karnataka Anti-Corruption Bureau officers trapped BWSSB junior engineer Chenneshappa for taking a bribe to person Rs 25.000 in Nagarabavi, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X