ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಮಚಂದ್ರಾಪುರ ಮಠದ ಗೋ ರಕ್ಷಣೆಯ 'ಅಭಯಾಕ್ಷರ'ಕ್ಕೆ ಗಣ್ಯರ ಬೆಂಬಲ

|
Google Oneindia Kannada News

ಬೆಂಗಳೂರು, ನವೆಂಬರ್ 21: ಗೋಹತ್ಯೆ ನಿಷೇಧಕ್ಕ ಆಗ್ರಹಿಸಿ ರಾಮಚಂದ್ರಾಪುರ ಮಠ ಆರಂಭಿಸಿರುವ 'ಅಭಯಾಕ್ಷರ' ಅಭಿಯಾನಕ್ಕೆ ಹತ್ತು ಹಲವು ಗಣ್ಯರು ತಮ್ಮ ಕೈಜೋಡಿಸಿದ್ದಾರೆ. ಗೋ ರಕ್ಷಣೆಗೆ ಬೆಂಬಲ ನೀಡುವವರ ಸಹಿ ಸಂಗ್ರಹಿಸಿ, ಅದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿ, ಗೋಹತ್ಯೆ ನಿಷೇಧದ ಬೇಡಿಕೆ ಇಡುವುದು ಅಭಯಾಕ್ಷರದ ಮುಖ್ಯ ಉದ್ದೇಶ.

#ProtectWithPen: ಗೋರಕ್ಷಣೆಗಾಗಿ ಟ್ವಿಟ್ಟರ್ ನಲ್ಲಿ ಚಳವಳಿ#ProtectWithPen: ಗೋರಕ್ಷಣೆಗಾಗಿ ಟ್ವಿಟ್ಟರ್ ನಲ್ಲಿ ಚಳವಳಿ

ಈ ಅಭಿಯಾನಕ್ಕೆ ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಶಾಸಕ ಸಿಟಿ ರವಿ, ಗೃಹಮಂತ್ರಿ ರಾಮಲಿಂಗಾ ರೆಡ್ಡಿ, ಧರ್ಮಸ್ಥಳದ ವೀರೇಮದ್ರ ಹೆಗ್ಗಡೆ, ಬ್ಯಾಡ್ಮಿಂಟನ್ ತಾರೆ ಗೋಪಿಚಂದ್ ಸೇರಿದಂತೆ ಹಲವು ಗಣ್ಯರು ಸಹಿ ಮಾಡಿದ್ದಾರೆ.

ಪುಣ್ಯಕೋಟಿಯ ಉಳಿಸಿ ಕೋಟಿ ಪುಣ್ಯವ ಗಳಿಸಿದ ಮೋದಿ ಸರ್ಕಾರ ಪುಣ್ಯಕೋಟಿಯ ಉಳಿಸಿ ಕೋಟಿ ಪುಣ್ಯವ ಗಳಿಸಿದ ಮೋದಿ ಸರ್ಕಾರ

ಈಗಾಗಲೇ ಸುಮಾರು 11 ಲಕ್ಷಕ್ಕೂ ಹೆಚ್ಚು ಸಹಿ ಸಂಗ್ರಹ ಮಾಡಲಾಗಿದ್ದು, ಮಠದ ಅನುಯಾಯಿಗಳು ಊರೂರಿಗೆ ತೆರಳಿ ಸಹಿ ಗೋವಿನ ಮಹತ್ವ ತಿಳಿಹೇಳಿ, ಅವುಗಳ ರಕ್ಷಣೆ ನಮ್ಮ ಕರ್ತವ್ಯವೆನ್ನುತ್ತ ಸಹಿ ಸಂಗ್ರಹಿಸುತ್ತಿದ್ದಾರೆ. ಸಾಮಾಜಿಕ ಮಾದ್ಯಮಗಳಲ್ಲೂ ಅಭಯಾಕ್ಷರ "ಗೋಹತ್ಯೆ ನಿಷೆಧ"ದ ಕುರಿತು ಧ್ವನಿ ಎತ್ತಿದೆ. #ProtectWithPen ಎಂಬ ಹ್ಯಾಶ್ ಟ್ಯಾಗ್ ನಲ್ಲಿ ಟ್ವಿಟ್ಟರ್ ನಲ್ಲೂ ಈ ಅಭಿಯಾನ ಸಾಕಷ್ಟು ಪ್ರಸಿದ್ಧಿ ಪಡೆದಿದೆ.

'ಮಾಂಸಕ್ಕಾಗಿ ಗೋವುಗಳ ಮಾರಾಟ' ನಿಷೇಧಕ್ಕೆ ರಾಮಚಂದ್ರಾಪುರ ಮಠದ ಸ್ವಾಗತ 'ಮಾಂಸಕ್ಕಾಗಿ ಗೋವುಗಳ ಮಾರಾಟ' ನಿಷೇಧಕ್ಕೆ ರಾಮಚಂದ್ರಾಪುರ ಮಠದ ಸ್ವಾಗತ

ಗೋಹತ್ಯೆ ನಿಷೇಧಕ್ಕೆ ಬೆಂಬಲ ನೀಡುವವರೆಲ್ಲ ತಮ್ಮ ಅಮೂಲ್ಯ ಸಹಿಯನ್ನು ನೀಡಿ, ಸರ್ಕಾರದ ಮೇಲೆ ಗೋ ಹತ್ಯೆ ನಿಷೇದದ ಒತ್ತಡ ಹೇರುವಂತೆ ಮಾಡಲು ಮಠ ಕೋರಿದೆ.

ಯಡಿಯೂರಪ್ಪ ಬೆಂಬಲ

ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ, ಅಭಯಾಕ್ಷರಕ್ಕೆ ತಮ್ಮ ಸಹಿಯನ್ನೂ ನೀಡುವ ಜೊತೆಗೆ, ತಮ್ಮ ಕ್ಷೇತ್ರದ ಜನರಲ್ಲಿಯೂ ಅಭಯಾಕ್ಷರಕ್ಕೆ ಸಹಿ ನೀಡಲು ಕೋರುವುದಾಗಿ ಅಭಯ ನೀಡಿದರು.

ಸಿಟಿ ರವಿ ಅಭಯಾಕ್ಷರ

ಚಿಕ್ಕಮಗಳೂರು ಶಾಸಕ ಸಿ ಟಿ ರವಿ ಅವರು ಅಭಯಾಕ್ಷರಕ್ಕೆ ಸಹಿ ನೀಡಿದರು. ಜೊತೆಗೆ ತಮ್ಮ ಕ್ಷೇತ್ರದ ಜನರಲ್ಲಿರ ಸಹಿಯನ್ನೂ ಕಾರ್ಯಕರ್ತರ ಮೂಲಕ ಸಂಗ್ರಹಿಸುವುದಾಗಿ ಹೇಳಿದರು.

ಕೈಜೋಡಿಸಿದ ಗೋಪಿಚಂದ್

ಬ್ಯಾಡ್ಮಿಂಟನ್ ತಾರೆ ಗೋಪಿಚಂದ್ ಅವರು ಸ್ವ ಇಚ್ಛೆಯಿಂದ ಅಭಯಾಕ್ಷರಕ್ಕೆ ಸಹಿ ಮಾಡಿದ್ದಾರೆ. ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತೀ ಸ್ವಾಮಿಗಳ ಆಶೀರ್ವಾದ ಪಡೆದ ಅವರು, ಅಭಯಾಕ್ಷರಅಭಿಯಾನಕ್ಕೆ ತಾವೂ ಕೈಜೋಡಿಸುವುದಾಗಿ ಹೇಳಿದ್ದಾರೆ.

ದೇವಾಲಯಗಳಲ್ಲಿ ಅಭಯಾಕ್ಷರ

ರಾಮಚಂದ್ರಾಪುರ ಮಠದ ಭಕ್ತರು ಬೇರೆ ಬೇರೆ ಊರು, ದೇವಾಲಯಗಳಿಗೆ ತೆರಳಿ ಅಭಯಾಕ್ಷರಕ್ಕೆ ಸಹಿ ಸಂಗ್ರಹಿಸುತ್ತಿದ್ದಾರೆ. ಪ್ರತಿದಿನವೂ ಬೇರೆ ಬೇರೆ ದೇವಾಲಯಕ್ಕೆ ತೆರಳಿ ಅಲ್ಲಿಗೆ ಬರುವ ಭಕ್ತರ ಬಳಿ ಅಭಯಅಕ್ಷರದ ಮಹತ್ವ ತಿಳಿಸಿ, ಸಹಿಸಂಗ್ರಹಿಸುತ್ತಿದ್ದಾರೆ.

ಮುಸ್ಲಿಮರಿಂದಲೂ ಪ್ರೋತ್ಸಾಹ!

ಅಭಯಾಕ್ಷರ ಅಭಿಯಾನಕ್ಕೆ ಮುಸ್ಲಿಂ, ಕ್ರೈಸ್ತ ಎನ್ನದೆ ಹಲವರು ಮತಭೇದ ಮರೆತು ಬೆಂಬಲ ನೀಡಿದ್ದಾರೆ. ದೇಶೀ ಹಸುಗಳ ರಕ್ಷಣೆಗಾಗಿ ಅಭಯಾಕ್ಷರ ಅಭಿಯಾನ ಎನ್ನುತ್ತಿದ್ದಂತೆಯೇ ತುಂಬುಹೃದಯದಿಂದ ಬೆಂಬಲ ನೀಡಿ, ತಮ್ಮ ಸಹಿಯನ್ನೂ ನೀಡಿದ್ದಾರೆ.

English summary
Abhayakshara is a campaign of collecting signature by various people, to impose ban on cow slaughter. The campaign is initiated by devotees of Ramachandrapura math, and collected more than 11 lakh signatures till now. Political leaders like BS Yeddyurappa, Ramalinga Reddy, CT Ravi etc have given their signature as support to the campaign.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X