'ಅಬ್ ಕೀ ಬಾರ್, ಭಾಜಪಾ ಸರ್ಕಾರ್': ಬೆಂಗಳೂರಿಗೆ ಬಂದ ಅಮಿತ್ ಶಾ ಘೋಷಣೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 12: ಅಬ್ ಕೀ ಬಾರ್, ಬಿಜೆಪಿ ಸರ್ಕಾರ್ - ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ರಾಜ್ಯ ಬಿಜೆಪಿ ಕಾರ್ಯಕರ್ತರ ಸಮ್ಮುಖದಲ್ಲಿ ಮಾಡಿದ ಘೋಷಣೆ. ಮೂರು ದಿನಗಳ ಕಾಲ ರಾಜ್ಯ ಪ್ರವಾಸಕ್ಕಾಗಿ ನವದೆಹಲಿಯಿಂದ ಶನಿವಾರ ಬೆಳಗ್ಗೆ (ಆಗಸ್ಟ್ 12) ಬೆಂಗಳೂರಿಗೆ ಆಗಮಿಸಿದ ಅವರು, ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ಇಲ್ಲಿ ಅಮಿತ್ ಶಾ, ಅಲ್ಲಿ ರಾಹುಲ್ : ಚುನಾವಣೆ ಬಂತಪ್ಪೋ ಚುನಾವಣೆ

ರಾಜ್ಯದಲ್ಲಿ ದುರ್ಬಲ ಆಡಳಿತದಿಂದಾಗಿ ಜನರು ಬೇಸತ್ತಿದ್ದಾರೆ. ಹಾಗಾಗಿ, ಅವರೆಲ್ಲರಿಗೂ ಬದಲಾವಣೆಯನ್ನು ನಿರೀಕ್ಷಿಸುತ್ತಿದ್ದಾರೆ. ಹಾಗಾಗಿ, ಈ ಬಾರಿ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರವೇ ಬರಬೇಕೆಂದು ಅವರು ಆಗ್ರಹಿಸಿದರು.

AB KI BAAR BJP SARKAR SAYS AMIT SHAH ON HIS ARRIVAL TO BENGALURU


ಶನಿವಾರ ಬೆಳಗ್ಗೆ ನವದೆಹಲಿಯಿಂದ ಆಗಮಿಸಿದ ಅಮಿತ್ ಶಾ ಅವರನ್ನು ರಾಜ್ಯದ ಬಹುತೇಕ ಬಿಜೆಪಿ ನಾಯಕರು ಶಾಲು ಹೊದಿಸಿ, ಹಾರ ಹಾಕಿ ಮೈಸೂರು ಪೇಟ ಹಾಕಿ ಸ್ವಾಗತಿಸಿದರು.

In Pics : ಬೆಂಗಳೂರಿನಲ್ಲಿ ಬಿಜೆಪಿ ಚೀಫ್ ಅಮಿತ್ ಶಾಗೆ ಭವ್ಯ ಸ್ವಾಗತ

ಆನಂತರ ತಮ್ಮನ್ನು ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಎಲ್ಲಾ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ ಅಮಿತ್ ಶಾ, ಮೊದಲಿಗೆ ತಮ್ಮನ್ನು ತುಂಬು ಹೃದಯದಿಂದ ಸ್ವಾಗತಿಸಿದ ಎಲ್ಲಾ ಬಿಜೆಪಿ ನಾಯಕರಿಗೆ ಧನ್ಯವಾದ ಅರ್ಪಿಸಿದರು.

AB KI BAAR BJP SARKAR SAYS AMIT SHAH ON HIS ARRIVAL TO BENGALURU

ಆನಂತರ, ತಮ್ಮ ಮಾತುಗಳನ್ನು ಮುಂದುವರಿಸಿದ ಅವರು, ''ಮುಂಬರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಎಲ್ಲಾ ಬಿಜೆಪಿ ಕಾರ್ಯಕರ್ತರನ್ನು ನಾಯಕರನ್ನು ಭೇಟಿ ಮಾಡುವ ಉದ್ದೇಶದಿಂದಲೇ ನಾನು ಬೆಂಗಳೂರಿಗೆ ಬಂದಿದ್ದೇನೆ. ಇಲ್ಲಿನ ಎಲ್ಲಾ ವಿಚಾರಗಳನ್ನೂ ಕೂಲಂಕಷವಾಗಿ ಅಧ್ಯಯನ ಮಾಡಿ, ಮುಂದಿನ ಚುನಾವಣೆಗೆ ಪಕ್ಷವನ್ನು ಹುರಿಗೊಳಿಸುವುದೇ ತಮ್ಮ ಈ ಭೇಟಿಯ ಹಿಂದಿನ ಮುಖ್ಯ ಉದ್ದೇಶವಾಗಿದೆ'' ಎಂದು ತಿಳಿಸಿದರು.

AB KI BAAR BJP SARKAR SAYS AMIT SHAH ON HIS ARRIVAL TO BENGALURU

ಇದೇ ವೇಳೆ, ಮುಂದಿನ ಚುನಾವಣೆಯನ್ನು ಯಡಿಯೂರಪ್ಪ ಅವರ ನೇತೃತ್ವದಲ್ಲೇ ಎದುರಿಸಲಾಗುವುದು ಎಂದ ಅವರು, ಯಡಿಯೂರಪ್ಪನವರೇ ಮುಂದಿನ ಮುಖ್ಯಮಂತ್ರಿ ಎಂದು ಮತ್ತೊಮ್ಮೆ ಘೋಷಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Ab ki baar, BJP ka Sarkar - this is the proclamation by BJP National President Amit Shah, after his arrival to Bengaluru on August 12, 2017.
Please Wait while comments are loading...