ರೆಡ್ಡಿ ನೈಜ ಬಣ್ಣ ಬಯಲು ಮಾಡಲಿರುವ ಟಪಾಲ್ !

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 22: ಬಳ್ಳಾರಿಯ ಅಕ್ರಮ ಗಣಿಗಾರಿಕೆಯ ಹಾಗೂ ಗಣಿ ಮಾಫಿಯಾದ ರೆಡ್ಡಿ ಸಹೋದರರ ವಿರುದ್ಧ ಮುಂಚೂಣಿಯಾಗಿ ಎದ್ದು ನಿಂತು ಸತತವಾಗಿ ಹೋರಾಡುತ್ತಾ ಬಂದಿರುವ ಟಪಾಲ್ ಗಣೇಶ್ ಅವರನ್ನು ಅಮ್ ಆದ್ಮಿ ಪಾರ್ಟಿ-ಕರ್ನಾಟಕ ಸಂತಸದಿಂದ ಬರಮಾಡಿಕೊಂಡಿದೆ.

ಟಪಾಲ್ ಗಣೇಶ್ ಅವರು ಮುಂದಿನ ದಿನಗಳಲ್ಲಿ ಆಪ್ ಕರ್ನಾಟಕದ ನಾಯಕರೊಡನೆ ರಾಜ್ಯಾದ್ಯಂತ ಪ್ರವಾಸ ಮಾಡಲಿದ್ದು, ಪರಂಪರಾಗತ ಭ್ರಷ್ಟ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಹಾಗೂ ಜನಾರ್ದನ ರೆಡ್ಡಿಯಂತಹ ಭ್ರಷ್ಟ ನಾಯಕರ ನೈಜ ಮುಖವನ್ನು ರಾಜ್ಯದ ಜನರಿಗೆ ನಿರೂಪಿಸಲಿದೆ ಎಂದು ಎಎಪಿ ಕರ್ನಾಟಕ ತನ್ನ ಪ್ರಕಟಣೆಯಲ್ಲಿ ಹೇಳಿದೆ. [ಗಾಲಿ ರೆಡ್ಡಿ ಬದ್ಧವೈರಿ ಟಪಾಲ್ ಗಣೇಶ್ ಈಗ 'ಆಮ್ ಆದ್ಮಿ' ]

ಬಳ್ಳಾರಿಯಲ್ಲಿ ನಡೆದ ಕಬ್ಬಿಣದ ಅದಿರು ಗಣಿಗಾರಿಕೆ ಅವ್ಯವಹಾರಗಳಿಗೆ ಜನಾರ್ದನ ರೆಡ್ಡಿಯೇ ಕಿಂಗ್ ಪಿನ್ ಎಂಬುದು ಇಡೀ ರಾಜ್ಯದ ಜನರಿಗೇ ತಿಳಿದಿರುವ ಸಂಗತಿ. ಆಪರೇಷನ್ ಕಮಲದ ಹೆಸರಲ್ಲಿ ಅನೈತಿಕ ರಾಜಕೀಯಕ್ಕೆ ನಾಂದಿ ಹಾಡಿ, ಬಿಜೆಪಿಯ ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್ ಅವರ ಮಾನಸ ಪುತ್ರ ಎಂದು ಕರೆಸಿಕೊಂಡರು. [ಗಾಲಿ ರೆಡ್ಡಿಗೆ ಐಟಿ ಅಧಿಕಾರಿಗಳು ಕೇಳಿದ ಪ್ರಶ್ನೆಗಳೇನು?]

2004ರ ವರೆಗೂ ತೆರಿಗೆಯನ್ನೇ ಕಟ್ಟದ ವ್ಯಕ್ತಿ ತನ್ನ ರಾಜಕೀಯ ಅಧಿಕಾರದ ಮದದಿಂದ ರಾಜ್ಯದ ನೈಸರ್ಗಿಕ ಸಂಪತ್ತನ್ನು ಎಗ್ಗಿಲ್ಲದೆ ಲೂಟಿ ಮಾಡಿ ಹತ್ತಾರು ಸಾವಿರ ಕೋಟಿ ಹಣವನ್ನು ಅಕ್ರಮವಾಗಿ ಸಂಪಾದಿಸಿ ಸಿಬಿಐ ಹಾಗೂ ಲೋಕಾಯುಕ್ತದ ಕೈಗೆ ಸಿಕ್ಕಿಬಿದ್ದ ವ್ಯಕ್ತಿಯನ್ನು ಇನ್ನೂ ಬಿಜೆಪಿ ತನ್ನ ಕಬಂಧಬಾಹುಗಳಿಂದ ರಕ್ಷಿಸುತ್ತಾ, ಬೆಂಬಲಿಸುತ್ತಾ ಬಂದಿದೆ.

AAP Karnataka heartily welcomes Tapal Ganesh


ಹಣದ ಮೂಲ ಯಾವುದು? : ಮಾನ್ಯ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಆತುರದ ನಿರ್ಧಾರದಿಂದಾಗಿ ಇಡೀ ದೇಶದಲ್ಲಿ ಜನ ಸಾಮಾನ್ಯರ ಮದುವೆಗಳು ಮುಂದಕ್ಕೆ ಹೋಗುತ್ತಿದ್ದು, ಕೆಲವು ನಿಂತೇ ಹೋಗಿವೆ.

ಇಂತಹ ಸಂದರ್ಭದಲ್ಲಿ ರಾಜ್ಯದ ಸಂಪತ್ತು ಲೂಟಿಮಾಡಿ ಗಳಿಸಿದ್ದ ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡಿ ತನ್ನ ಮಗಳ ಮದುವೆ ಮಾಡಿ ಮುಗಿಸಿರುವ ರೆಡ್ಡಿ, ಈ ಪ್ರಮಾಣದಲ್ಲಿ ಹಣವನ್ನು ಸಂಪಾದಿಸಿದ್ದಾದರೂ ಹೇಗೆ? ಈ ಮಟ್ಟದಲ್ಲಿ ಹಣವನ್ನು ಹೊಸ ನೋಟುಗಳಿಗೆ ಬದಲಾಯಿಸಿದ್ದು ಹೇಗೆ? ಅವರ ಬ್ಯಾಂಕ್ ಖಾತೆಗಳನ್ನೆಲ್ಲಾ ಸಿಬಿಐ ತಡೆ ಹಿಡಿದಿರುವಾಗ ಈ ಹಣದ ಮೂಲ ಯಾವುದು?

ಇಡೀ ದೇಶದ ಜನಸಾಮಾನ್ಯರನ್ನು ಬೀದಿಯಲ್ಲಿ ನಿಲ್ಲಿಸಿರುವ ನರೇಂದ್ರ ಮೋದಿಯವರ ಆತುರದ ನಿರ್ಧಾರ, ಜರ್ನಾರ್ದನ ರೆಡ್ಡಿ ತನ್ನ ಮಗಳ ಮದುವೆ ಮಾಡಲು ಯಾವುದೆ ಪರಿಣಾಮ ಬೀರಿಲ್ಲವೇ? ನರೇಂದ್ರ ಮೋದಿಯವರು ದೇಶಕ್ಕೆ ತಿಳಿಸುವ ಮುನ್ನವೇ ತಮ್ಮ ನಿರ್ಧಾರವನ್ನು ರೆಡ್ಡಿಗೆ ತಿಳಿಸಿ ಅವರ ಹಣ ಬದಲಾಯಿಸಿಲು ಅವಕಾಶ ಮಾಡಿ ಕೊಟ್ಟಿದ್ದರೇ? ಎಂಬ ಪ್ರಶ್ನೆಗಳು ಜನ ಸಾಮಾನ್ಯರಲ್ಲಿ ಮೂಡುತ್ತಿದೆ.

ಕಪ್ಪು ಹಣದ ವಿರುದ್ಧ ಹೋರಾಟವೆಂದು ರೂಪಾಯಿ 500 ಹಾಗೂ 1000 ನೋಟುಗಳನ್ನು ಅನೂರ್ಜಿತಗೊಳಿಸಿ ಇಡೀ ದೇಶದ ಜನರನ್ನು ಭಿಕ್ಷುಕರಂತೆ ಬೀದಿ ನಿಲ್ಲಿಸಿರುವ ನರೇಂದ್ರ ಮೋದಿ ತಮ್ಮದೇ ಪಕ್ಷದ ಪ್ರಭಾವಿ ನಾಯಕನ ಕಪ್ಪುಹಣದ ಸ್ವೇಚ್ಛಾಚಾರದ ಪ್ರದರ್ಶನವನ್ನು ತಡೆಹಿಡಿಯಲು ವಿಫಲರಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
AAP Karnataka in press release said party is happy to welcome Tapal Ganesh, one of the first persons who stood up in the fight against the mafia of the Gali Reddy brothers and their illegal mining.
Please Wait while comments are loading...