ಸ್ಟೀಲ್ ಫ್ಲೈ ಓವರ್ ವಿರುದ್ದದ ಪ್ರತಿಭಟನೆಗೆ ಆಮ್ ಆದ್ಮಿ ಪಾರ್ಟಿ ಬೆಂಬಲ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 16 : ಸ್ಟೀಲ್ ಫ್ಲೈ ಓವರ್ ವಿರುದ್ಧದ ಚಾಲುಕ್ಯ ವೃತ್ತ, ಕಾವೇರಿ ವೃತ್ತ, ಮೇಕ್ರಿ ವೃತ್ತ ಹಾಗೂ ಹೆಬ್ಬಾಳದಲ್ಲಿ ನಡೆದಿರುವ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಬೆಂಗಳೂರಿನ ಘಟಕ ತನ್ನ ಸಂಪೂರ್ಣ ಬೆಂಬಲ ನೀಡುತ್ತಿದೆ.

ಜನ ಸಾಮಾನ್ಯರು ಸ್ಟೀಲ್ ಫ್ಲೈ ಓವರ್ ನಿರ್ಮಾಣವನ್ನು ವಿರೋಧಿಸಿ ಆಮ್ ಆದ್ಮಿ ಪಾರ್ಟಿ- ಬೆಂಗಳೂರಿನ ಕಾರ್ಯಕರ್ತರೂ ಕೂಡ ಜನ ಸಾಮಾನ್ಯರ ಈ ಹೋರಾಟದಲ್ಲಿ ಜೊತೆಯಾಗಿದ್ದಾರೆ. ಬೆಳಗ್ಗೆ 8 ಗಂಟೆಯಿಂದಲೇ ಚಾಲುಕ್ಯ ವೃತ್ತದಿಂದ ಮಾನವ ಸರಪಳಿ ಆರಂಭವಾಗಿದ್ದು, ಆಮ್ ಆದ್ಮಿ ಪಾರ್ಟಿ-ಬೆಂಗಳೂರಿನ ಕಾರ್ಯಕರ್ತರು ಈ ಮಾನವ ಸರಪಳಿಯಲ್ಲಿ ಭಾಗಿಯಾಗಿದ್ದಾರೆ.[ಉಕ್ಕಿನ ಮೇಲ್ಸೇತುವೆ ವಿರುದ್ಧ ಮಾನವ ಸರಪಳಿ ಪ್ರತಿಭಟನೆ]

ಬೆಂಗಳೂರಿನಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಏರುತ್ತಲೇ ಹೋಗುತ್ತಿದೆ. ಇಂಥ ಸಮಯದಲ್ಲಿ ನಗರಾಭಿವೃದ್ಧಿ ತಜ್ಞರ ಅಭಿಪ್ರಾಯ ಪಡೆದು ಟ್ರಾಫಿಕ್ ಸಮಸ್ಯೆಯನ್ನು ಸಮರ್ಥವಾಗಿ ಎದುರಿಸಲು ಕಾರ್ಯತಂತ್ರಗಳನ್ನು ರೂಪಿಸುವುದು ಬೆಂಗಳೂರು ಮಾಹಾನಗರ ಪಾಲಿಕೆ ಹಾಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕೆಲಸವಾಗಬೇಕಿತ್ತು. ಆದರೆ ಇಲ್ಲಿ ಇದ್ದಕ್ಕಿದ್ದಂತೆ ಮಧ್ಯ ಪ್ರವೇಶಿಸಿರುವ ರಾಜ್ಯ ಸರ್ಕಾರ ಇದೀಗ ಹೆಬ್ಬಾಳದಿಂದ ಚಾಲುಕ್ಯ ವೃತ್ತ (ಬಸವೇಶ್ವರ ವೃತ್ತ) ದವರೆಗೂ ಸ್ಟೀಲ್ ಫ್ಲೈಓವರ್ ಅನ್ನು ನಿರ್ಮಿಸಲು ಹೊರಟಿದೆ. [ಸ್ಟೀಲ್ ಬ್ರಿಡ್ಜ್ ವಿರುದ್ಧ ಮಾನವ ಸರಪಳಿ]

AAP Karnataka support protest against Construction of Steel Flyover

ಸುಮಾರು 6 ಕಿ.ಮೀ ಉದ್ದ ಈ ಸ್ಟೀಲ್ ಫ್ಲೈಓವರ್ ಗಾಗಿ ರಾಜ್ಯ ಸರ್ಕಾರ 1,800 ಕೋಟಿ ರುಪಾಯಿ ಸಾರ್ವಜನಿಕರ ತೆರಿಗೆ ಹಣವನ್ನು ವ್ಯಯ ಮಾಡಲು ಹೊರಟಿದೆ. ನಗರಾಭಿವೃದ್ಧಿ ತಜ್ಞರಿಂದ ಈ ಕಾಮಗಾರಿಗೆ ಭಾರೀ ವಿರೋಧ ವ್ಯಕ್ತವಾಗಿದ್ದರೂ, ಇದೇ ಕಾಮಗಾರಿಯನ್ನು ನಿರ್ಮಿಸಿಯೇ ತೀರುವಂತೆ ಹೊರಟು ಟೆಂಡರ್ ಪ್ರಕ್ರಿಯೆಯನ್ನೂ ಪೂರ್ಣಗೊಳಿಸಿರುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು, ಭಾರಿ ಪ್ರಮಾಣದ ಲಪಟಾಯಿಸಲೆಂದೇ ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿರುವಂತೆ ಕಾಣುತ್ತಿದೆ.

ಯಾವುದೇ ಸಾರಿಗೆ ಸಂಬಂಧಿತ ಕಾಮಗಾರಿಗಳು ಸದಾ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತೇಜಿಸುವಂತೆ ರೂಪಿತವಾಗಿರಬೇಕು. ಆದರೆ ಸುಮಾರು 1,800 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಹೊರಟಿರುವ ಸ್ಟೀಲ್ ಫ್ಲೈಓವರ್ ನಿಂದ ಇಂತಹ ಯಾವುದೇ ಉದ್ದೇಶ ಸಾಕಾರಗೊಳ್ಳುವುದಿಲ್ಲ.

ಅದಲ್ಲದೆ, ನಗರಾಭಿವೃದ್ಧಿ ತಜ್ಞರೇ ಹೇಳುತ್ತಿರುವಂತೆ ಈ ಸ್ಟೀಲ್ ಫ್ಲೈಓವರ್‍ನಿಂದಾಗಿ ಇದು ಆರಂಭ ಹಾಗೂ ಕೊನೆಗೊಳ್ಳುವ ಸ್ಥಳಗಳಾದ ಹೆಬ್ಬಾಳ ಹಾಗೂ ಚಾಲುಕ್ಯ ವೃತ್ತ(ಬಸವೇಶ್ವರ ವೃತ್ತ)ದಲ್ಲಿ ಟ್ರಾಫಿಕ್ ಪ್ರಮಾಣ ನಿಯಂತ್ರಿಸಲಾಗದಷ್ಟು ಹೆಚ್ಚಲಿದೆ. ಇಂತಹ ಕಾರ್ಯಸಾಧುವಲ್ಲದೆ, ನಿಷ್ಟ್ರಯೋಜಕ ಕಾಮಗಾರಿಯನ್ನು, ಸಾರ್ವಜನಿಕ ಹಣವನ್ನು ದುಂದು ವೆಚ್ಚ ಮಾಡಿ ನಿರ್ಮಿಸಲು ಹೊರಟಿರುವುದನ್ನು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ತೀವ್ರವಾಗಿ ಖಂಡಿಸುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
While the traffic woes of Bengaluru is worsening by the day, it should have been a priority of BBMP and BDA to consult expert Town Planners to find a solution to the vexed problem. Instead the state Government, has suddenly interfered and decided to build a steel flyover from Hebbal to Chalukya Circle (Basaveshwara Circle) says AAP, Bengaluru
Please Wait while comments are loading...