ಅನ್ನದಾತನ ಮೇಲೆ ಲಾಠಿ ಪ್ರಹಾರ: ಎಎಪಿಯಿಂದ ಖಂಡನೆ

Posted By:
Subscribe to Oneindia Kannada

ಬೆಂಗಳೂರು, ಮಾ. 03: ಸ್ವಾತಂತ್ರ್ಯ ಗಳಿಸಿ, 68 ವರ್ಷಗಳಾದರೂ ರಾಜ್ಯದ ಹಲವೆಡೆ ಕುಡಿಯುವ ನೀರಿಗೂ ಜನ ಹೋರಾಟ ನಡೆಸುವ ಪರಿಸ್ಥಿತಿ ನಿರ್ಮಾಣವಾಗಿರುವುದು ಇಡೀ ರಾಜ್ಯಕ್ಕೆ ಅವಮಾನಕರ ಸಂಗತಿ. ಈವರೆಗೂ ರಾಜ್ಯದಲ್ಲಿ ಅಧಿಕಾರದ ಗದ್ದುಗೆ ಹಿಡಿದಿರುವ ಸರ್ಕಾರಗಳ ಬೇಜವಾಬ್ದಾರಿ ಮನೋಭಾವದಿಂದಾಗಿ ಇಂದು ಅನ್ನದಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ.

ಕೋಲಾರ-ಚಿಕ್ಕಬಳ್ಳಾಪುರದ ರೈತರು ಇಂದು ಕೈಗೊಂಡಿರುವ ಹೋರಾಟ ಇದಕ್ಕೆ ಜ್ವಲಂತ ಉದಾಹರಣೆ. ತನ್ನ ಜಮೀನಿನಲ್ಲಿ ತನ್ನ ಪಾಡಿಗೆ ತಾನು ಕೃಷಿ ಮಾಡಬೇಕಿದ್ದ ರೈತ ಇಂದು ಅನಿವಾರ್ಯವಾಗಿ ವಿಧಾನಸೌಧದತ್ತ ಮುಖ ಮಾಡಬೇಕಾಯಿತು.[ವಿಡಿಯೋ: ಸದನದಲ್ಲಿ ಸಿದ್ದು ದುಬಾರಿ 'ವಾಚ್' ಸಮರ್ಪಣೆ]

ರಾಜ್ಯದ 13 ಜಿಲ್ಲೆಗಳಲ್ಲಿ ಭೀಕರ ಬರಗಾಲ ಪರಿಸ್ಥಿತಿಯಿದ್ದರೂ, ಸದನದಲ್ಲಿ ಕ್ರಿಯಾತ್ಮಕವಾಗಿ ಚರ್ಚಿಸಿ ಜನರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವುದನ್ನು ಬಿಟ್ಟು, ಜನರ ತೆರಿಗೆ ಹಣದಲ್ಲಿ ಮೋಜು ಮಾಡುತ್ತಾ ಕಾಲಾಹರಣ ಮಾಡುತ್ತಿದ್ದಾರೆ. ತನ್ನ ಹಕ್ಕುಗಳಗಾಗಿ ಹೋರಾಟ ನಡೆಸುತ್ತಿರುವ ರೈತನ ಮೇಲೆ ಲಾಠಿಪ್ರಹಾರವನ್ನೂ ನಡೆಸಿದ್ದಾರೆ.

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ಜನರಿಗೆ ಕುಡಿಯುವ ನೀರಿಗೂ ಹಾಹಾಕಾರ ಮೂಡಿದೆ. ಈ ಭಾಗದ ರೈತರಿಗೆ ಜಾನುವಾರುಗಳನ್ನು ಸಾಕಲೂ ನೀರಿಲ್ಲ. ಈ ಭಾಗದ ಜನರು ಶಾಶ್ವತ ನೀರಾವರಿ ಯೋಜನೆ ಒದಗಿಸುವಂತೆ ನಡೆಸುತ್ತಿರುವ ಹೋರಾಟಕ್ಕೆ ತಾತ್ವಿಕ ಪರಿಹಾರ ನೀಡುವ ಗೋಜಿಗೆ ಹೋಗದಿರಲು ಸಿದ್ಧರಾಮಯ್ಯ ನೇತ್ರತ್ವದ ಸರ್ಕಾರ ನಿರ್ಧರಿಸಿದಂತಿದೆ. [ಕುಡಿಯುವ ನೀರು ಕೇಳಿದ ರೈತರಿಗೆ ಪೊಲೀಸರ ಲಾಠಿ ಏಟು]

Aam aadmi Party Karnataka has condemned Lathi charge on Farmers

ಇದು ಹಿಂದಿನ ಸರ್ಕಾರಗಳು ಅನುಸರಿಸಿಕೊಂಡು ಬಂದಿರುವ ನಡವಳಿಕೆಯ ಮುಂದುವರಿದ ಭಾಗವೇ ಆಗಿದೆ. ಜನರಿಂದ ಆಯ್ಕೆಯಾಗಿ ಜನರಿಗಾಗಿ ಕೆಲಸ ಮಾಡಬೇಕಿರುವ ಜನಪ್ರತಿನಿಧಿಗಳು, ದುಬಾರಿ ಗಿಫ್ಟ್ ಗಳ ಸ್ವೀಕರಣೆಯಲ್ಲಿ ನಾ ಮುಂದು ತಾ ಮುಂದು ಎನ್ನುವಂತೆ ಜಟಾಪಟಿ ನಡೆಸುತ್ತಿದ್ದಾರೆ. ಈ ಎಲ್ಲಾ ದುರಹಂಕಾರಿ ವರ್ತನೆಗಳನ್ನು ರಾಜ್ಯದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದು ಮುಂದಿನ ಚುನಾವಣೆಯಲ್ಲಿ ನಿಮಗೆ ಮನೆಯ ಹಾದಿ ತೋರಲಿದ್ದಾರೆ ಎಂದು ಆಮ್ ಆದ್ಮಿ ಪಾರ್ಟಿ ಎಚ್ಚರಿಸುತ್ತಿದೆ.


ಇನ್ನು ಮಂಡ್ಯದ ಮೈಷುಗರ್ ಸಕ್ಕರೆ ಕಾರ್ಖಾನೆ ಬೀಗ ತೆರೆಯದೆ, ಮಂಡ್ಯದಲ್ಲಿ ರೈತರು ಆತ್ಮಹತ್ಯೆಗೆ ನೇರವಾಗಿ ಸರ್ಕಾರ ಕಾರಣವಾಗಿದೆ.

ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಪ್ರತಿಭಟನಾ ನಿರತ ಕಬ್ಬು ಬೆಳೆಗಾರನ್ನು ಭೇಟಿ ಮಾಡಿರುವ ಸಕ್ಕರೆ ಸಚಿವ ಮಹದೇವ್ ಪ್ರಸಾದ್‍ರವರು ಅವರ ಕಣ್ಣೊರೆಸುವ ನಾಟಕವಾಡಿದೆ. ಪ್ರತಿಭಟನೆ ತಣ್ಣಗಾಗುತ್ತಲೇ ಕೊಟ್ಟಿರುವ ಮಾತನ್ನು ಮರೆಯುವುದು ಶ್ರೀ ಸಿದ್ಧರಾಮಯ್ಯನವರ ನೇತ್ರತ್ವದ ಸರ್ಕಾರಕ್ಕೆ ಒಂದು ಚಾಳಿಯಾಗಿ ಬಿಟ್ಟಿದೆ. [ಕರ್ನಾಟಕದಲ್ಲಿ ಭೀಕರ ಬರಗಾಲ, ಹೇಳುವವರಿಲ್ಲ ಕೇಳುವವರಿಲ್ಲ]


ಇಂದಿನ ರೈತರ ಹೋರಾಟದಲ್ಲಿ ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ರಾಜ್ಯ ಸಹ-ಸಂಚಾಲಕರಾದ ಕುಂದನ್ ಸಿಂಗ್, ಸಿದ್ಧಾರ್ಥ ಶರ್ಮ ಹಾಗೂ ಚಿಕ್ಕಬಳ್ಳಾಪುರ ಜಿಲ್ಲಾ ಸಂಚಾಲಕರಾದ ಅಭಿಲಾಷ್ ನೇತ್ರತ್ವದಲ್ಲಿ ಹಲವು ಕಾರ್ಯಕರ್ತರು ಚಿಕ್ಕಬಳ್ಳಾಪುರದಿಂದ ಬೆಂಗಳೂರಿನವರೆಗೆ ನಡೆದ ವಿಧಾನಸೌಧ ಚಲೋ ರ್ಯಾಲಿಯಲ್ಲಿ ಭಾಗಿಯಾಗಿ ರೈತರ ಹೋರಾಟಕ್ಕೆ ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ಬೆಂಬಲ ವ್ಯಕ್ತಪಡಿಸಿದ್ದಾರೆ.

ಜನಪರ ಹೋರಾಟಗಳಲ್ಲಿ ಆಮ್ ಆದ್ಮಿ ಪಾರ್ಟಿ ಸದಾ ತನ್ನನ್ನು ಅರ್ಪಿಸಿಕೊಂಡಿದ್ದು, ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ರೈತರ ಸಮಸ್ಯೆಗಳನ್ನು ಶೀಘ್ರ ಇತ್ಯರ್ಥಗೊಳಿಸುವಂತೆ ವಿನಂತಿಸುತ್ತಾ, ಈ ಬಗ್ಗೆ ತತಕ್ಷಣವಾಗಿ ಕ್ರಮ ಕೈಗೊಳ್ಳದಿದ್ದರೆ ಇಡೀ ರಾಜ್ಯಾದ್ಯಂತ ರೈತರನ್ನು ಒಗ್ಗೂಡಿಸಿ ತೀತ್ರತರವಾಗಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದೂ ಎಚ್ಚರಿಸುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Aam aadmi Party Karnataka has condemned Lathi charge on Farmers by Siddaramaiah led Congress government,
Please Wait while comments are loading...