ಗಾರ್ಮೆಂಟ್ಸ್ ಕಾರ್ಮಿಕರ ಬಂಧನ ಖಂಡಿಸಿದ ಎಎಪಿ

Posted By:
Subscribe to Oneindia Kannada

ಬೆಂಗಳೂರು, ಮೇ 02: ಶೋಷಣೆ ತಡೆದುಕೊಳ್ಳಲಾಗದ ಗಾರ್ಮೆಂಟ್ಸ್ ಕಾರ್ಮಿಕರು ಇತ್ತೀಚೆಗಷ್ಟೆ ಬೆಂಗಳೂರಿನಲ್ಲಿ ಹಠಾತ್ ಪ್ರತಿಭಟನೆ ನಡೆಸಿ ಎಲ್ಲರ ಗಮನ ಸೆಳೆದಿದ್ದರು. ಈ ಮುಷ್ಕರ ಸರ್ವೋಚ್ಛ ನ್ಯಾಯಾಲಯದ ವ್ಯಾಖ್ಯಾನದ ಪ್ರಕಾರ ಕಾನೂನುಬದ್ದವಾಗಿದೆ. ಆದರೆ, ಬೆಂಗಳೂರಿನ ಪೋಲಿಸರು ಈ ಅಸಹಾಯಕ ಕಾರ್ಮಿಕರ ಮೇಲೆ ತಮ್ಮ ಶಕ್ತಿ ಪ್ರದರ್ಶನ ಮಾಡಿರುವುದನ್ನು ಆಮ್ ಆದ್ಮಿ ಪಕ್ಷ ಖಂಡಿಸಿದೆ.

ಸರಿಯಾದ ಯೋಜನೆ ಅಥವಾ ಸೂಕ್ಷ್ಮತೆ ಇಲ್ಲದ ಭಾರತ ಸರಕಾರ ಕಾರ್ಮಿಕರ ಭವಿಷ್ಯ ನಿಧಿಯ ಜೊತೆಗೆ ಚೆಲ್ಲಾಟವಾಡಲು ಪ್ರಯತ್ನಿಸಿದ್ದು, ಕಾರ್ಮಿಕರು ತಮಗೆ ಅಗತ್ಯ ಬಿದ್ದಾಗ ತಮ್ಮ ಹಣವನ್ನು ನಿವೃತ್ತಿಯವರೆಗೆ ತೆಗೆಯಲಾಗದೆಂಬ ನಿಯಮ, ಒಂಟೆಯ ಗೂನು ಬೆನ್ನಿನ ಮೇಲೆ ಹೇರಿದ ಕಡೆಯ ಹುಲ್ಲುಕಡ್ಡಿಯಾಗಿದೆ. [ಬೆಂಗಳೂರು ಪೊಲೀಸರ ಮೂರ್ಖತನ ಇದೇ ಮೊದಲಲ್ಲ]

ಈ ಮುಷ್ಕರ ಸರ್ವೋಚ್ಛ ನ್ಯಾಯಾಲಯದ ವ್ಯಾಖ್ಯಾನದ ಪ್ರಕಾರ ಕಾನೂನುಬದ್ದವಾಗಿದ್ದರೂ ಸಹ ಅಸಾಮಾಜಿಕ ತತ್ವಗಳು ಕಾರ್ಮಿಕರ ಗುಂಪಿನಲ್ಲಿ ಸೇರಿಕೊಂಡು ಹಿಂಸಾಚಾರ ನಡೆಸಿ ಕಾರ್ಮಿಕರ ಹೋರಾಟವನ್ನು ದಾರಿತಪ್ಪಿಸಿತು.

ಬೆಂಗಳೂರಿನ ಪೋಲಿಸರು ಈ ಅಸಹಾಯಕ ಕಾರ್ಮಿಕರ ಮೇಲೆ ತಮ್ಮ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಭಾರತೀಯ ದಂಡ ಸಂಹಿತೆಯ ಕಲಂಗಳನ್ನು ದುರುಪಯೋಗ ಪಡಿಸಿಕೊಂಡು ಈ ಮುಷ್ಕರಕ್ಕೆ ಮುಂದಾದ ಕಾರ್ಮಿಕರ ಮೇಲೆ ಸೇಡಿನ ಕ್ರಮ ಜರುಗಿಸಲಾಗುತ್ತಿದೆ. ಇತ್ತೀಚೆಗಷ್ಟೆ ಸುಮಾರು 230ಕ್ಕೂ ಹೆಚ್ಚು ಕಾರ್ಮಿಕರನ್ನು ಬಂಧಿಸಲಾಗಿದೆ.[ನೀರು ಕೇಳಿದ್ದವರ ರಕ್ತ ಬಸೆದಿದ್ದ ಸರ್ಕಾರ]

AAP Karnataka condemn Siddaramaiah Government anti-labour policy & imprisoning innocent Garment Workers

ಗಾರ್ಮೆಂಟ್ಸ್ ಕಾರ್ಮಿಕರು ತಮ್ಮ ಪಾಳಿಯ ಸಮಯಕ್ಕಿಂತಲೂ ಹೆಚ್ಚು ದುಡಿಯಬೇಕಾಗುತ್ತದೆ. ಇಂದಿನ ಏರುತ್ತಿರುವ ಬೆಲೆಗಳ ನಡುವೆ ಅವರಿಗೆ ಸಿಗುವ ಸಂಬಳ ದಿನನಿತ್ಯದ ಜೀವನಕ್ಕೆ ಸಾಲುತ್ತಿಲ್ಲ. ಅದರ ಮೇಲೆ ಮನೆ ಬಾಡಿಗೆ, ಮಕ್ಕಳ ಶಾಲಾ ಫೀ, ರೋಗ-ರುಜಿನದ ಖರ್ಚು, ಜೀವನಾವಶ್ಯಕ ವಸ್ತುಗಳ ಬೆಲೆಯನ್ನು ನಿಯಂತ್ರಿಸಲಾಗದ ಸರಕಾರದ ನೀತಿಯಿಂದ ತತ್ತರಿಸಿರುವ ಕಾರ್ಮಿಕರು ನಿಸ್ಸಹಾಯಕರಾಗಿದ್ದಾರೆ.

ಹಿಂಸೆಗೆ ತಿರುಗಿದ ಪ್ರತಿಭಟನೆ: ಕಾರ್ಮಿಕರ ಪ್ರತಿಭಟನೆ ಶಾಂತಿಯುತವಾಗಿಯೇ ಇತ್ತು. ಆದರೆ ಇದರಲ್ಲಿ ಕೆಲವು ಅಸಾಮಾಜಿಕ ಕೈಗಳು ಸೇರಿಕೊಂಡು, ಸಮಯದ ಮತ್ತು ಅವಕಾಶದ ದುರುಪಯೋಗ ಪಡಿಸಿಕೊಂಡು ಹಿಂಸಾಚಾರ ನಡೆಸಿದ್ದು ದೌರ್ಭಾಗ್ಯ. ಇದರ ಸಾಧ್ಯತೆಯನ್ನು ಪೋಲಿಸರು ಮತ್ತು ಬೇಹುಗಾರಿಕೆ ದಳ ಮೊದಲೇ ಎಚ್ಚರಿಕೆವಹಿಸಿ ತಡೆಯಬಹುದಿತ್ತು. ಆದರೆ ಅವರ ಕಾರ್ಯ ವೈಫಲ್ಯತೆಯನ್ನು ಮುಚ್ಚಿ ಹಾಕಲು ಕಾರ್ಮಿಕರನ್ನು ಬಲಿಪಶುಗಳನ್ನಾಗಿ ಮಾಡಲಾಗುತ್ತಿದೆ.[ಗಾರ್ಮೆಂಟ್ಸ್ ನೌಕರರ ಪ್ರತಿಭಟನೆಯ ಸಚಿತ್ರ ವಿವರ]

ಹಿಂಸಾಚಾರದಲ್ಲಿ ತೊಡಗಿದ್ದವರನ್ನು ಗುರುತು ಹಚ್ಚಿ ಅವರ ವಿರುದ್ಧವಷ್ಟೆ ಕಾನೂನು ಕ್ರಮ ಜರುಗಿಸುವ ಬದಲಿಗೆ ಎಲ್ಲಾ ಕಾರ್ಮಿಕರನ್ನು ತಪ್ಪಿತಸ್ಥರನ್ನಾಗಿ ಮಾಡಲು ಪ್ರಯತ್ನ ನಡೆಯುತ್ತಿದೆ. ಭವಿಷ್ಯ ನಿಧಿಯ ತಪ್ಪು ನೀತಿಯ ವಿರುದ್ಧ ಕಾರ್ಮಿಕರ ಹೋರಾಟ ಸಂಪೂರ್ಣವಾಗಿ ಕಾನೂನುಬದ್ಧವಾಗಿತ್ತು.

ಈ ಹೋರಾಟದಲ್ಲಿ ಸಾರ್ವಜನಿಕ ಆಸ್ತಿ-ಪಾಸ್ತಿಗೆ ಆಗಿರುವ ಹಾನಿ ದುರ್ಭಾಗ್ಯಪೂರ್ಣ. ಆಮ್ ಆದ್ಮಿ ಪಾರ್ಟಿ ಹಿಂಸಾಚಾರವನ್ನು ಒಪ್ಪುವುದಿಲ್ಲ. ಆದರೆ ಹಿಂಸಾಚಾರದಲ್ಲಿ ಭಾಗಿಯಾವರನ್ನು ಸರಿಯಾಗಿ ಗುರುತಿಸಿ ಅವರನ್ನು ಮಾತ್ರ ಶಿಕ್ಷಿಸಬೇಕು. ಈ ಹೋರಾಟದಲ್ಲಿ ಲಕ್ಷದಷ್ಟು ಮಹಿಳೆಯರು ಭಾಗಿಯಾಗಿದ್ದು ನ್ಯಾಯಯುತವಾಗಿ ಶಾಂತಿಯಿಂದ ಘೋಷಣೆ ಕೂಗುತ್ತ ತಮಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಪ್ರತಿಭಟಿಸುತ್ತಿದ್ದರು.

ಗುಂಪಿನಲ್ಲಿ ಘೋಷಣೆ ಕೂಗುತ್ತ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದವರನ್ನು ಹಿಂಸಾಚಾರದಲ್ಲಿ ತೊಡಗಿದ್ದ ವ್ಯಕ್ತಿಯ ಪಕ್ಕದಲ್ಲಿ ನಿಂತಿದ್ದ ಮಾತ್ರಕ್ಕೆ ಬಂಧಿಸುವುದು ಎಲ್ಲಿಯ ನ್ಯಾಯ? ಮಾಧ್ಯಮಗಳು ಮತ್ತು ಜನರು ಸೆರೆಹಿಡಿದಿರುವ ದೃಶ್ಯ ಮಾಧ್ಯಮದ ತುಣುಕುಗಳಲ್ಲಿ ಪ್ರತಿಭಟಿಸುತ್ತಿದ್ದ ಹೆಂಗಸರ ಮೇಲೆ ಪೋಲಿಸರು ನಡೆಸಿದ ಪ್ರಹಾರ ಆಘಾತಕಾರಿ. ಜನರ ಸಂವಿಧಾನ ದತ್ತ ಅಧಿಕಾರವಾದ
ಪ್ರತಿಭಟನೆಯ ಹಕ್ಕನ್ನು ರಕ್ಷಿಸದೆ, ಅದನ್ನು ಕಿತ್ತುಕೊಳ್ಳುವ ಕೆಲಸ ಪೋಲಿಸರು ಮಾಡಿರುತ್ತಾರೆ.

ಹಿಂಸಾಚಾರ ತಡೆಯುವ ಬದಲಿಗೆ ತಾವೇ ಹಿಂಸಾಚಾರಿಗಳಾಗಿದ್ದಾರೆ. ಸ್ತ್ರೀಯರ ಮೇಲೆ ಬಲ ಪ್ರಯೋಗ ಮಾಡಿರುವುದು ಪೋಲಿಸ್ ಮತ್ತು ರಾಜಕೀಯ ನಾಯಕತ್ವದ ಸಂಪೂರ್ಣ ವೈಫಲ್ಯವಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
AAP Karnataka condemn Siddaramaiah Government anti-labour policy & imprisoning innocent Garment Workers. Withdraw charges for the protesters who have been booked for having participated in the protest and for shouting slogans and for whom there is no other evidence of having directly engaged in violence.
Please Wait while comments are loading...