ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಾರಿಗೆ ಇಲಾಖೆಯ ಕಾರ್ಯವನ್ನು ಶ್ಲಾಘಿಸಿದ ಆಮ್ ಆದ್ಮಿ ಪಕ್ಷ

By Vanitha
|
Google Oneindia Kannada News

ಬೆಂಗಳೂರು,ಮಾರ್ಚ್,22: ಸಾರಿಗೆ ಇಲಾಖೆಯನ್ನು ಲಂಚಮುಕ್ತವಾಗಿಸಲು ಕೆಲವು ವಿವರಣೆ ನೀಡಬೇಕೆಂದು ಕೇಳಿ ಆಮ್ ಆದ್ಮಿ ಪಕ್ಷ ಬರೆದ ಪತ್ರಕ್ಕೆ ಸಾರಿಗೆ ಇಲಾಖೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ಈಗಾಗಲೇ ನೆರವೇರಿರುವ ಕಾರ್ಯ ಹಾಗೂ ಭವಿಷ್ಯದಲ್ಲಿ ನಡೆಯಬೇಕಿರುವ ಕಾರ್ಯದ ವಿವರಣೆ ನೀಡಿದೆ.

ಆಮ್ ಆದ್ಮಿ ಪಕ್ಷ ಕೆಲವು ತಿಂಗಳಿಂದ ಕರ್ನಾಟಕವನ್ನು ಲಂಚಮುಕ್ತಗೊಳಿಸಬೇಕೆಂದು ಪಣತೊಟ್ಟು ಲಂಚ ಮುಕ್ತ ಕರ್ನಾಟಕ ಅಭಿಯಾನ ಪ್ರಾರಂಭಿಸಿದೆ. ಈ ಪಕ್ಷವು 12 ಡಿಸೆಂಬರ್ 2015ರಂದು ಸಾರಿಗೆ ಇಲಾಖೆಗೆ ಕಾರ್ಯಗಳ ಬಗ್ಗೆ ವಿವರ ನೀಡಬೇಕೆಂದು ಪತ್ರ ಬರೆದಿತ್ತು. ಇದೀಗ ಉತ್ತರ ದೊರೆತಿದೆ.

ಸಾರಿಗೆ ಇಲಾಖೆಯನ್ನು ಲಂಚಮುಕ್ತವನ್ನಾಗಿಸಲು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ತನ್ನ ಲಂಚಮುಕ್ತ ಕರ್ನಾಟಕ ಅಭಿಯಾನವನ್ನು ಎಲ್ಲಾ ಆರ್.ಟಿ.ಒ ಕಛೇರಿಗಳಲ್ಲಿ ಮುಂದುವರೆಸಲು ಇಚ್ಛಿಸಿದ್ದು, ಈ ಎಲ್ಲಾ ಪ್ರಸ್ತಾವ ಹಾಗೂ ವಿವರಣೆಗಳನ್ನು ಆದಷ್ಟು ಬೇಗ ಜಾರಿಗೆ ತರುವಂತೆ ಆಮ್ ಆದ್ಮಿ ಪಾರ್ಟಿ ಆಗ್ರಹಿಸಿದೆ.[ಮಧ್ಯಮ ವರ್ಗಕ್ಕೆ ಪೆಟ್ಟು, ಇದು ಹಳೇ ವೈನು ಹೊಸ ಬಾಟ್ಲು!]

Aam aadmi party appreciates transport department

ಸಾರಿಗೆ ಇಲಾಖೆ ನೀಡಿರುವ ವಿವರಣೆಗಳು ಇಂತಿವೆ:

1. ಬೆಂಗಳೂರು (ಪಶ್ಚಿಮ) ಸಾರಿಗೆ ಕಛೇರಿಗೆ ನಿವೇಶನವಿದ್ದು, ಕಟ್ಟಡ ನಿರ್ಮಾಣ ವಿನ್ಯಾಸವನ್ನು ಸಿದ್ದಪಡಿಸಲಾಗುತ್ತಿದೆ. ಬೆಂಗಳೂರು (ದಕ್ಷಿಣ ಹಾಗೂ ಉತ್ತರ) ಪ್ರಾದೇಶಿಕ ಸಾರಿಗೆ ಕಛೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸುವ ಸಂಬಂಧ ಸೂಕ್ತ ನಿವೇಶನ ಪಡೆಯಲು ಕ್ರಮ ಜಾರಿಯಲ್ಲಿದೆ.[ಅವನು ಕಣ್ಣು ಹೊಡೆದ, ಆಪ್ ಶಾಸಕಿ ಕಪಾಳಕ್ಕೆ ಹೊಡೆದ್ರು]

2. ಡ್ರೈವಿಂಗ್ ಲೈಸೆನ್ಸ್ ನೀಡುವ ಪ್ರಕ್ರಿಯೆಯನ್ನು ಸುಧಾರಣೆಗೊಳಿಸುವುದಕ್ಕಾಗಿ ಜ್ಞಾನಭಾರತಿಯಲ್ಲಿ ಗಣಕೀಕೃತ ಚಾಲನಾ ಪಥವನ್ನು ನಿರ್ಮಿಸಲಾಗಿದೆ. ಖಾಸಗಿ ಡ್ರೈವಿಂಗ್ ಶಾಲೆಗಳ ಅಕ್ರಮವನ್ನು ತಡೆಗಟ್ಟಲು, ಬೆಂಗಳೂರಿನ ಯಲಹಂಕ ಹಾಗೂ ಧಾರವಾಡದಲ್ಲಿ ಭಾರಿವಾಹನ ಚಾಲಕರ ತರಬೇತಿ ಸಂಸ್ಥೆಗಳನ್ನು ಸ್ಥಾಪಿಸಲಾಗಿದ್ದು, ಮಂಗಳೂರು, ಕಲಬುರ್ಗಿಯಲ್ಲೂ ಸ್ಥಾಪಿಸಲು ಉದ್ದೇಶಿಸಲಾಗಿದೆ.

3. ರಾಜ್ಯದ ಎಲ್ಲಾ ಪ್ರಾದೇಶಿಕ ಸಾರಿಗೆ ಕಛೇರಿಗಳ ಮುಂಭಾಗದಲ್ಲಿ ಸ್ವಾಗತಕಾರರ ಹಾಗೂ ಸಾರ್ವಜನಿಕ ಸಂಪರ್ಕಾಧಿಕಾರಿಗಳನ್ನು ನೇಮಕ ಮಾಡುವಂತೆ ಎಲ್ಲಾ ಕಛೇರಿಗಳಿಗೆ ನಿರ್ದೇಶಿಸಲಾಗಿದೆ.[ನರೇಂದ್ರ ಮೋದಿ ಸರಕಾರದ ವಿರುದ್ದ ವಿಷ ಕಕ್ಕಿದ ಆಮ್ ಆದ್ಮಿ ಶಾಸಕ]

4. ಕಛೇರಿಗಳನ್ನು ಕಾಗದ ರಹಿತ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ.

5. ಎಲ್ಲಾ ಸಾರಿಗೆ ಕಚೇರಿಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದ್ದು, ಕಛೇರಿಯ ಮುಖ್ಯಸ್ಥರು, ಕಛೇರಿಯ ಆಗುಹೋಗುಗಳ ನಿಗಾವಹಿಸಿದ್ದಾರೆ.

English summary
Aam Aadmi Party leaders and member appreciated transport department work. AAP wrote letter to the transportat deparment and asked many more details of future work. Transport department replied to letter on March 22nd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X