ಆಟೋ ಲೈಸೆನ್ಸ್ ಗೆ ಆಧಾರ್ ಲಿಂಕ್ ಕಡ್ಡಾಯ: ಸಾರಿಗೆ ಇಲಾಖೆ ಆದೇಶ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 02 : ಇನ್ನುಮುಂದೆ ಆಟೋ ಚಾಲನೆ ಮಾಡಬೇಕಿದ್ದರೆ , ಆಟೋ ಪರವಾನಗಿಗೆ ಆಧಾರ್ ನಂಬರ್ ನ್ನು ಕಡ್ಡಾಯವಾಗಿ ಲಿಂಕ್ ಮಾಡಲೇ ಬೇಕು. ಇಲ್ಲವಾದಲ್ಲಿ ಪರವಾನಗಿಯನ್ನು ರದ್ದುಮಾಡಲಾಗುತ್ತದೆ ಎಂದು ಸಾರಿಗೆ ಇಲಾಖೆ ಆದೇಶಿಸಿದೆ.

ಫ್ಲೈಟ್ ಟಿಕೆಟ್ ಜತೆ ಆಧಾರ್ ಜೋಡಣೆ ಹೇಗೆ? ಏಕೆ?

ಆಟೋ ಪರವಾನಗಿಯಲ್ಲಿ ನಡೆಯುತ್ತಿರುವ ಅಕ್ರಮವನ್ನು ತಡೆಹಿಡಿಯಲು ಸಾರಿಗೆ ಇಲಾಖೆ ಆಟೋ ಲೈಸೆನ್ಸ್ ಗೂ ಆಧಾರ್ ಜೋಡಣೆ ಮಾಡಲು ಮುಂದಾಗಿದೆ.ಕೆಲ ಆಟೋ ಚಾಲಕರು ಹಾಗೂ ಮಾಲೀಕರು ಒಂದೇ ಪರವಾನಗಿಯಲ್ಲಿ ನಾಲ್ಕೈದು ಆಟೋಗಳನ್ನು ಓಡಿಸುತ್ತಿದ್ದು, ಇದರಿಂದ ಪ್ರಾಮಾಣಿಕ ಆಟೋ ಚಾಲಕರಿಗೆ ತೊಂದರೆಯಾಗುತ್ತಿದೆ.

Adhar Mandatory for Auto rickshaw registration

ಇದರ ಬಗ್ಗೆ ಹಲವು ಬಾರಿ ಆಟೋ ಸಂಘಟನೆಗಳು ದೂರು ನೀಡಿದ್ದು ಇದನ್ನು ಗಂಭೀರವಾಗಿ ಪರಿಗಣಿಸಿ ಪರವಾನಗಿ ನೀಡಿದ 1.25ಲಕ್ಷ ಆಟೋಗಳಿಗಿಂತ 30ಸಾವಿರಕ್ಕೂ ಹೆಚ್ಚು ಆಟೋಗಳು ಸಂಚರಿಸುತ್ತಿರುವುದು ಬೆಳಕಿಗೆ ಬಂದಿದೆ.

ಆಧಾರ್ ಜತೆ ಸಿಮ್ ಜೋಡಣೆ, ಟೆಲಿಕಾಂ ಸಂಸ್ಥೆಗಳು ಸಿದ್ಧ

ಒಂದೇ ಪರವಾನಗಿಯಲ್ಲಿ ನಾಲ್ಕೈದು ಆಟೋಗಳು ಸಂಚರಿಸುತ್ತಿರುವುದಕ್ಕೆ ಕಡಿವಾಣ ಹಾಕಲು ನೂತನ ಸಾಫ್ಟ್ ವೇರನ್ನು ಸಿದ್ಧಪಡಿಸಲಾಗುತ್ತಿದೆ. ಜನವರಿ ತಿಂಗಳೊಳಗೆ ಎಲ್ಲಾ ಆಟೋ ಚಾಲಕರು ತಮ್ಮ ಪರವಾನಗಿಗೆ ಆಧಾರ್ ಲಿಂಕ್ ಮಾಡಬೇಕೆಂದು ಸಾರಿಗೆ ಆಯುಕ್ತ ದಯಾನಂದ್ ತಿಳಿಸಿದ್ದಾರೆ. ಈಗಾಗಲೇ ಆಟೋ ಲೈಸೆನ್ಸ್ ಗೆ ಆಧಾರ್ ಕಾರ್ಡ್ ನೋಂದಣಿ ಕಾರ್ಯ ಪ್ರಗತಿಯಲ್ಲಿದ್ದು, ಜನವರಿಯೊಳಗೆ ಆಧಾರ್ ನೋಂದಣಿ ಮಾಡದಿದ್ದರೆ ಪರಾವನಗಿಯನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of transport issued a notification that the Aadhar number will be mandatory for auto rickshaw registration to avoid many auto rickshaws registration in one name.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ