8 ನಾಯಿಮರಿ ಕೊಂದ ಮಹಿಳೆಗೆ ಒಂದುದಿನ ಜೈಲುವಾಸ!

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,22: 'ಪ್ರಾಣಿಗಳನ್ನು ತಮ್ಮ ಮಕ್ಕಳಂತೆ ಕಾಣಿರಿ' ಎಂಬ ಮಾತನ್ನು ಪ್ರಾಣಿ ದಯಾ ಸಂಘದವರು ಮೊದಲಿನಿಂದಲೂ ಹೇಳುತ್ತಲೇ ಬರುತ್ತಿದ್ದಾರೆ. ನೋಡಿ ಇದನ್ನು ಪಾಲಿಸದೆ ನಾಯಿ ಮರಿಗಳನ್ನು ಸಾಯಿಸಿದ ಮಹಿಳೆಗೆ ಸಿಕ್ಕಿದ್ದು ಸೆರೆವಾಸ.

ಹೌದು ಬೀದಿ ನಾಯಿಯ ಎಂಟು ಮರಿಗಳನ್ನು ಕೊಂದ ಆರೋಪದಡಿ ಮಹಿಳೆ ಪೊನ್ನಮ್ಮನನ್ನು ಬಂಧಿಸಿದ ಪೀಣ್ಯ ಪೊಲೀಸರು ಬಳಿಕ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಿದ್ದಾರೆ. ಪೊನ್ನಮ್ಮ ತುಮಕೂರು ರಸ್ತೆಯ ಕೃಷ್ಣರಾಜನಗರದಲ್ಲಿ ವಾಸವಾಗಿದ್ದಾರೆ.[ನಾಯಿಯ ಮೇಲೆ ಅತ್ಯಾಚಾರ ಮಾಡಿದ ವಿಕೃತಕಾಮಿ]

A women kills 7 puppies in Bengaluru

ಮಹಿಳೆ ಮಾಡಿದ್ದೇನು?

ಪೊನ್ನಮ್ಮ ತುಮಕೂರು ರಸ್ತೆಯ ಕೃಷ್ಣರಾಜನಗರದವರು. ಈಕೆ ಮಾಜಿ ಸೈನಿಕರ ಪತ್ನಿ. ಇವರ ಮನೆಯ ಮುಂದಿನ ಚರಂಡಿಯಲ್ಲಿ ಬೀದಿ ನಾಯಿಯು ಎಂಟು ಮರಿಗಳಿಗೆ ಜನ್ಮ ನೀಡಿತ್ತು. ಅವುಗಳಿಗೆ 15 ದಿನಗಳು ತುಂಬಿತ್ತು.

ಈ ನಾಯಿ ಮರಿಗಳನ್ನು ಕಂಡ ಪೊನ್ನಮ್ಮ ಏನು ಯೋಚಿಸಿದರೋ ಏನೋ ಮಾರ್ಚ್ 15ರಂದು ಮಳೆ ಬರುತ್ತಿದ್ದ ವೇಳೆ ಆ ಎಂಟು ನಾಯಿ ಮರಿಗಳನ್ನು ಚರಂಡಿಯಿಂದ ಎತ್ತಿ ರಸ್ತೆ ಮೇಲೆ ಬಿಸಾಕಿದ್ದಾಳೆ. ಸುಮಾರು ಗಂಟೆಗಳ ಕಾಲ ಮಳೆಯಲ್ಲಿ ನೆನೆದ ನಾಯಿಮರಿಗಳು ಮಳೆಯ ಹೊಡೆತಕ್ಕೆ, ಚಳಿ ತಾಳಲಾರದೆ ಸತ್ತು ಹೋದವು.[ಬೆಂಗಳೂರಲ್ಲಿ ಮನೆಗೊಂದೇ ಸಾಕು ನಾಯಿ ನಿಯಮ ಜಾರಿಗೆ!]

ಈ ವಿಚಾರ ತಿಳಿದ ಸೇವಾ ಸಂಸ್ಥೆಯೊಂದು ಪೊನ್ನಮ್ಮನ ವಿರುದ್ಧ ಪೀಣ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ನಂತರ ಪೊನ್ನಮ್ಮನನ್ನು ಬಂಧಿಸಿದ ಪೊಲೀಸರು ಅವರನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A women Ponnamma killed 7 puppies at Krishnaraja Nagar, Neart Tumakur Road, Bengaluru. Peenya police have registered a case against a women who killed 7 new born puppies.
Please Wait while comments are loading...