2015ರ ಕೊನೆಗಳಿಗೆಯಲ್ಲಿ ಕಂಡ ಸೂರ್ಯನ ನಾನಾ ಚಿತ್ತಾರ

Posted By:
Subscribe to Oneindia Kannada

ಬೆಂಗಳೂರು, ಜನವರಿ, 01: ಹಳೆ ವರ್ಷ ಮರೆಯಾಗಿ ಹೊಸವರ್ಷ ಮುನ್ನುಡಿ ಬರೆದಿದೆ. ಜನರ ಮನಸ್ಸಿನಲ್ಲಿ ಹಲವಾರು ಹೊಸ ಸಂಕಲ್ಪ, ಪ್ರತಿಜ್ಞೆಗಳು ಮೂಡಿವೆ. ಪ್ರತಿಯೊಬ್ಬರಿಗೂ ವಿವಿಧ ಉಡುಗೊರೆಗಳ ಮೂಲಕ ಶುಭಾಶಯ ವಿನಿಮಯಗೊಂಡಿದೆ. ಆದರೆ ನಿಸರ್ಗದಲ್ಲಿ ಏನಾದರೂ ಬದಲಾವಣೆ?

ಆಕಾಶವನ್ನು ಸೌಂದರ್ಯ ಮನೋಜ್ಞವಾಗಿ ಗೋಚರಿಸುವಂತೆ ಮಾಡುವಲ್ಲಿ ಬಹುಪಾಲು ಹೆಗ್ಗಳಿಕೆ ಸಿಗುವುದು ಸೂರ್ಯನಿಗೆ. ಇದೇನಿದು ಧಗ ಧಗ ಉರಿಯುವ ಸೂರ್ಯ ಆಕಾಶದ ಅಂದವನ್ನು ಹೇಗೆ ಹೆಚ್ಚಿಸ್ತಾನೆ ಎಂದು ಕೇಳಿಕೊಳ್ಳಬೇಡಿ. ಹೀಗೆ ಕೇಳಿಕೊಂಡರೆ ನಿಮ್ಮ ನಿಸರ್ಗ ಪ್ರೇಮಕ್ಕೆ ಕೊಂಚ ಭಂಗವನ್ನು ನೀವೆ ತಂದುಕೊಳ್ಳುತ್ತೀರಾ.

ಸೂರ್ಯೋದಯ ಮತ್ತು ಸೂರ್ಯಾಸ್ತದ ಅವಧಿಯಲ್ಲಿ ಆಕಾಶಕ್ಕೆ ಮುಖ ಮಾಡಿ ನಿಂತರೆ ನೀವು ವಾಪಾಸು ಬರುವಿರೇನು? ಖಂಡಿತ ಇಲ್ಲ ಅಲ್ವಾ...ಹೌದು ಈ ಸೂರ್ಯನೂ ಸುಂದರಾಗನೇ ಎಂದು ಸೂರ್ಯಾಸ್ತ, ಸೂರ್ಯೋದಯ ನೋಡಿದ ಪ್ರತಿಯೊಬ್ಬರಿಗೂ ತಿಳಿದಿದೆ.[ಹೊಸವರ್ಷ ಬಂಪರ್, ಸ್ಪೈಸ್ ಜೆಟ್ ಪ್ರಯಾಣ ದರ ಕಡಿತ]

ಹೊಸ ವರ್ಷದ ಬಗ್ಗೆ ಮಾತಾಡ್ತಾ ಸೂರ್ಯನ ವಿಚಾರ ಯಾಕೆ ಎಂದುಕೊಳ್ಳಬೇಡಿ. ಏಕೆಂದರೆ 2015ರ ಕೊನೆಗಳಿಗೆಯಲ್ಲಿ ಕಂಡ ಸೂರ್ಯ ತನ್ನ ಅಂದವನ್ನು ಇನ್ನಷ್ಟು ಅನಾವರಣಗೊಳಿಸಿದ್ದಾನೆ. ಕೆಂಪಾದ ಕಿರಣಗಳ ಮೂಲಕ ಹೊಸವರ್ಷ ಎಲ್ಲರ ಬದುಕನ್ನು ಹೊಸ ಹುರುಪು ನೀಡಲಿ ಎಂದು ಆಶಿಸುತ್ತಾ 2015ಕ್ಕೆ ವಿದಾಯ ಹೇಳಿದ್ದಾನೆ. ಬನ್ನಿ 2015ರ ಕೊನೆಯಲ್ಲಿ ಸೂರ್ಯ ಆಕಾಶದಲ್ಲಿ ಹೇಗೆ ಕಂಡಿದ್ದಾನೆ ಎಂದು ನೋಡೋಣ. ಈ ಚಿತ್ರಗಳನ್ನು ನೋಡಿ ನೀವು ಪ್ರತಿಯೊಂದು ಚಿತ್ರಕ್ಕೂ ಮುದ್ದಾದ ಹೆಡ್ ಲೈನ್ ಕೊಡಿ

ಸೂರ್ಯನಿಗೆ ಧರ್ಮದ ಹಂಗಿಲ್ಲ

ಸೂರ್ಯನಿಗೆ ಧರ್ಮದ ಹಂಗಿಲ್ಲ

ಸೂರ್ಯನಿಗೆ ಮನುಷ್ಯರ ರೀತಿ ಧರ್ಮ, ಸಂಸ್ಕೃತಿಯ ಹಂಗಿಲ್ಲ. ಆತನಿಗೆ ಗೊತ್ತಿರುವುದೇ ಒಂದು ಪೂರ್ವದಲ್ಲಿ ಹುಟ್ಟುವುದು ಪಶ್ವಿಮದಲ್ಲಿ ಮುಳುಗುವುದು. ಮಸೀದಿಯ ನಡುವೆ ಸೂರ್ಯ ಕಂಗೊಳಿಸಿದ್ದು ಹೀಗೆ, ಬಂಗಾರಮಯವಾದ ಆಕಾಶದ ನಡುವೆ ಕಾಣುವ ಈ ಚಿತ್ರದ ಬಗ್ಗೆ ಹೇಳಲು ಪದಗಳಿಲ್ಲ.

ಸೂರ್ಯನೊಳಗಣ ಹಕ್ಕಿ

ಸೂರ್ಯನೊಳಗಣ ಹಕ್ಕಿ

ಸೂರ್ಯದೊಳಗಣ ಹಕ್ಕಿಯೋ, ಹಕ್ಕಿಯ ಹಿಂದೆ ಸೂರ್ಯನೋ, ಸೂರ್ಯನಿಗೆ ಪಕ್ಷಿ ಮುತ್ತಿಕ್ಕಿದೆಯೋ ಅಥವಾ ಹಕ್ಕಿಯ ನೋಡಲು ಸೂರ್ಯನೇ ಹಕ್ಕಿ ಬಳಿ ಬಂದಿರುವನೋ. ಒಟ್ಟಿನಲ್ಲಿ ಕಪ್ಪು, ಕೆಂಪಿನ ಸೂರ್ಯ ಮತ್ತು ಹಕ್ಕಿಯ ಪ್ರೇಮತೆ ಕ್ಯಾಮರದ ಕಣ್ಣಿನಲ್ಲಿ ಕಂಡದ್ದು ಹೀಗೆ.

ಸೂರ್ಯನ ಸೌಂದರ್ಯಕ್ಕೆ ನನ್ನದೊಂದು ನಮನ

ಸೂರ್ಯನ ಸೌಂದರ್ಯಕ್ಕೆ ನನ್ನದೊಂದು ನಮನ

ಆಗತಾನೇ ಸೂರ್ಯ ಮುಳುಗುತ್ತಿದ್ದಾನೆ. ವೇಗವಾಗಿ ಬಂದ ಕುದುರೆ ಸೂರ್ಯನ ಅಂದವನ್ನು ನೋಡಿದ ಖುಷಿಯಲ್ಲಿ ಒಂದು ಸಲ ಹೇಂಕರಿಸಿ ಕಾಲನ್ನು ಎತ್ತಿ ನಿನ್ನಲ್ಲಿ ಅಡಗಿರುವ ಸೌಂದರ್ಯಕ್ಕೆ ನಾನು ಸೋತಿದ್ದೇನೆ ಎಂದು ತನ್ನದೇ ಹಾವ ಭಾವದ ಮೂಲಕ ತೋರಿಸಿದ್ದು ಹೀಗೆ

ಸಮುದ್ರದೊಳಗೆ ಇಳಿಯುತ್ತಿರುವ ಸೂರ್ಯ

ಸಮುದ್ರದೊಳಗೆ ಇಳಿಯುತ್ತಿರುವ ಸೂರ್ಯ

ವಿಶಾಲವಾದ ನದಿ, ಅಲ್ಲೊಂದು ಪುಟ್ಟ ದೋಣಿ, ಅದರಲ್ಲಿ ಒಬ್ಬ ನಾವಿಕರು, ಕೆಂಪು, ಹಳದಿ ಬಣ್ಣ ತೋರುತ್ತಾ ಕವಿಗಳಿಗೆ ಉತ್ತೇಜಕನಾಗಿ ಕಾಣುವ ಈ ಸಂಪೂರ್ಣ ಚಿತ್ರವನ್ನು ನಾವು ಸಣ್ಣ ಮಕ್ಕಳಿದ್ದಾಗ ಚಿತ್ರಕಲೆ ಮಾಡುತ್ತಿದ್ದೆವು ನೆನಪಿದೆಯಾ?

2015ರ ಕೊನೆಗಳಿಗೆಯ ಸೂರ್ಯ ಪ್ರವಾಸಿಗರ ಕಣ್ಣಲ್ಲಿ

2015ರ ಕೊನೆಗಳಿಗೆಯ ಸೂರ್ಯ ಪ್ರವಾಸಿಗರ ಕಣ್ಣಲ್ಲಿ

2015ಕ್ಕೆ ವಿದಾಯ ಹೇಳಿ 2016ಕ್ಕೆ ಮುನ್ನುಡಿ ಬರೆಯುವ ಉದ್ದೇಶದಿಂದ ಸೂರ್ಯ ಮುಳುಗುತ್ತಿರುವುದು. ಆತನ ವರ್ಷದ ಕೊನೆ ಹಳಿಹಗೆಯ ಸೌಂದರ್ಯವನ್ನು ಭಾವಾ ತಪ್ತರಾಗಿ ಜನರು ಸಮುದ್ರದ ತಟದಲ್ಲಿ ನಿಂತು ವೀಕ್ಷಿಸುತ್ತಿರುವುದು

ಕತ್ತಲು ಕಳೆದಿದೆ, ಬೆಳಕು ಮೂಡುತ್ತಿದೆ

ಕತ್ತಲು ಕಳೆದಿದೆ, ಬೆಳಕು ಮೂಡುತ್ತಿದೆ

2015ರಲ್ಲಿನ ನೋವು, ದುಃಖದ ಕತ್ತಲು ಮಯವಾಗಲಿದೆ. ಇನ್ನು ಮುಂದೆ 2016 ಆರಂಭವಾಗುತ್ತಿದೆ. ಎಲ್ಲರೂ ಹಿಸ ಕನಸು, ಆಶಯಗಳೊಂದಿಗೆ ಬದುಕಿ ಎಂದು ಹೇಳಲು ಸೂರ್ಯನ ಧೂತನಾಗಿ ಜನರಿಗೆ ಸಂದೇಶ ಮುಟ್ಟಿಸಲು ದೇವರಿಗೆ ನಮಸ್ಕರಿಸಿ ಪಕ್ಷಿ ತೆರಳುತ್ತಿರುವ ದೃಶ್ಯವಿದು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
It is always a treat to watch wonderful Sun set. Photographers have made the last Sun set to 2015 even more beautiful by taking some splendid photos of the Sun. Photos by PTI.
Please Wait while comments are loading...