• search

ಕುಟುಂಬ ಯೋಜನೆ ಕುರಿತು ಬೆಂಗಳೂರಲ್ಲೊಂದು ಉಪಯುಕ್ತ ಕಾರ್ಯಕ್ರಮ

By Manjunatha
Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಜೂನ್ 29: ಕುಟುಂಬ ಯೋಜನೆ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಮತ್ತು ಕುಟುಂಬ ಯೋಜನೆಯ ಮಹತ್ವ ಮತ್ತು ಸಾಗುತ್ತಿರುವ ದಾರಿಗಳ ಕುರಿತು ಚರ್ಚೆಯ ಮೌಲ್ಯಯುತ ಕಾರ್ಯಕ್ರಮವನ್ನು ಗ್ಲೋಬಲ್ ಹೆಲ್ತ್ ಸ್ಟ್ರಾಟಜೀಸ್ ಸಂಸ್ಥೆ ಹಮ್ಮಿಕೊಂಡಿತ್ತು.

  ನಗರದ ದಿ ಲೀಲಾ ಪ್ಯಾಲೆಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಫ್‌ಓಜಿಎಸ್‌ಐನ ಅಧ್ಯಕ್ಷೆ ವೈದ್ಯೆ ಹೇಮಾ ದಿವಾಕರ್ ಮಾತನಾಡಿ, ವೈದ್ಯರು, ಆಶಾ ಕಾರ್ಯತರ್ತೆಯರು, ಸರ್ಕಾರ ಕುಟುಂಬ ಯೋಜನೆಯನ್ನು ಪರಿಣಾಮಕಾರಿ ರೀತಿಯಲ್ಲಿ ಸಮುದಾಯಕ್ಕೆ ವಿಶೇಷವಾಗಿ ಮಹಿಳೆಯರಿಗೆ ತಲುಪಿಸುವಲ್ಲಿ ಸೋಲುತ್ತಿರುವ ಬಗ್ಗೆ ಮಾತನಾಡಿದರು.

  ವಿಶ್ವ ತೊನ್ನು ದಿನ: ಭಯಬೇಡ, ತೊನ್ನು ಸಾಂಕ್ರಾಮಿಕ ರೋಗವಲ್

  ಇಂಡಿಯಾ ಸ್ಪೆಂಡ್ ನ ಸಂಪಾದಕ ಸಮರ್ ಹಲರಂಕರ್ ಮಾತನಾಡಿ, ಕರ್ನಾಟಕ ಹಾಗೂ ಭಾರತದಲ್ಲಿ ಕುಟುಂಬ ಯೋಜನೆ ಏಕೆ ಅವಶ್ಯಕ ಎಂಬುದನ್ನು ವಿವಿಧ ದೇಶಗಳ ಅಂಕಿ-ಸಂಖೆಗಳನ್ನು ಮುಂದೆ ಇಟ್ಟು ಮನದಟ್ಟು ಮಾಡಿದರು.

  A useful program in Bengaluru about family planing

  ಮಹಿಳೆ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ.ಲಕ್ಷ್ಮಿಪತಿ ಮಾತನಾಡಿ, ವ್ಯಾಸಕ್ಟಮಿ (ಪುರುಷ ಸಂತಾನ ಹರಣ ಶಸ್ತ್ರಚಿಕಿತ್ಸೆ) ಯ ಹಲವು ಯಶಸ್ವಿ ಉದಾಹರಣೆಗಳನ್ನು ನೀಡಿದರು. ಪುರುಷರ ಗರ್ಭನಿರೋಧಕ ಶಸ್ತ್ರಚಿಕಿತ್ಸೆಯ ಪ್ರಮಾಣ ಹೆಚ್ಚಾಗಲೇ ಬೇಕಿದೆ ಎಂಬುದನ್ನು ಒತ್ತಿ ಹೇಳಿದರು.

  ವಿವಿಧ ಪತ್ರಿಕೆಗಳ ಮುಖ್ಯ ವರದಿಗಾರರು, ಸಂಪಾದಕೀಯ ಮಂಡಳಿ ಸದಸ್ಯರು ಭಾಗವಹಿಸಿ ಕುಟುಂಬ ಯೋಜನೆ ಪ್ರಸರಣದಲ್ಲಿ ಮಾಧ್ಯಮಗಳ ಪಾತ್ರದ ಬಗ್ಗೆ ಹಾಗೂ ಕುಟುಂಬ ಯೋಜನೆಯ ಮಹತ್ವವನ್ನು ಅವಶ್ಯಕತೆಯನ್ನು ಸಮುದಾಯಕ್ಕೆ ತಲುಪಿಸುವ ದಾರಿಗಳ ಬಗ್ಗೆ ಚರ್ಚೆ ಮಾಡಿದರು.

  ಉಪರಾಷ್ಟ್ರಪತಿಗಳಿಂದ ಜೂ. 28ರಂದು ಕಿದ್ವಾಯಿ ಸಂಕೀರ್ಣ ಲೋಕಾರ್ಪಣೆ

  ವ್ಯಾಸಕ್ಟಮಿ ಮಾಡಿಸಿಕೊಂಡವರು, ಆಶಾ ಕಾರ್ಯತರ್ತೆಯರ ಮುಖ್ಯಸ್ಥೆ ಇನ್ನೂ ಹಲವರು ತಮ್ಮ-ತಮ್ಮ ಅಭಿಪ್ರಾಯಗಳನ್ನು ಕಾರ್ಯಕ್ರಮದಲ್ಲಿ ಹಂಚಿಕೊಂಡರು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  Global health strategies organized a program to discuss about family planing. many resource people share their view about family planing and how media should raising the discourse on family planing.

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more