ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮುನ್ನೋಟದಲ್ಲಿ ಕಿರಣ್ : ನಿಮ್ಮ ಬಿಳಿ ಹಣ ನಿಜಕ್ಕೂ ಎಷ್ಟು ಬಿಳಿ?

ಮುನ್ನೋಟ ಮೊದಲ ಮಾತುಕತೆ@ಮುನ್ನೋಟ ಕಾರ್ಯಕ್ರಮವನ್ನು ಇದೇ ಭಾನುವಾರ ನವೆಂಬರ್ 20ರ ಬೆಳಿಗ್ಗೆ ಹನ್ನೊಂದುವರೆಗೆ ಮುನ್ನೋಟ ಮಳಿಗೆಯಲ್ಲಿ ಏರ್ಪಡಿಸಲಾಗಿದೆ.

By Mahesh
|
Google Oneindia Kannada News

ಬೆಂಗಳೂರು, ನವೆಂಬರ್ 15: ಕನ್ನಡ ನಾಡು ನುಡಿಯ ಚಿಂತನೆಗೆ ಮೀಸಲಾದ ಅಂಗಡಿಯಾಗಿ ಮುನ್ನೋಟ ಪುಸ್ತಕ ಮಳಿಗೆ ಶುರುವಾಗಿದ್ದನ್ನು ನೀವು ಬಲ್ಲೀರಿ. ಮುನ್ನೋಟದಲ್ಲಿ ನಿಯಮಿತವಾಗಿ ನಾಡು-ನುಡಿಯ ಚಿಂತನೆಯ ಸುತ್ತ ಇತಿಹಾಸ, ಪ್ರಚಲಿತ ವಿದ್ಯಮಾನಗಳನ್ನು ಸೇರಿದಂತೆ ಕನ್ನಡ, ಕನ್ನಡಿಗ ಮತ್ತು ಕರ್ನಾಟಕವನ್ನು ತಟ್ಟುವ ವಿಷಯಗಳ ಮೇಲೆ ಚರ್ಚೆ, ಉಪನ್ಯಾಸದಂತಹ ಕಾರ್ಯಕ್ರಮಗಳನ್ನು ನಡೆಸುವ ಯೋಜನೆ ಹೊಂದಲಾಗಿದೆ.

ಅದರಂತೆ ಮೊದಲ ಮಾತುಕತೆ@ಮುನ್ನೋಟ ಕಾರ್ಯಕ್ರಮವನ್ನು ಇದೇ ಭಾನುವಾರ ನವೆಂಬರ್ 20ರ ಬೆಳಿಗ್ಗೆ ಹನ್ನೊಂದುವರೆಗೆ ಮುನ್ನೋಟ ಮಳಿಗೆಯಲ್ಲಿ ಏರ್ಪಡಿಸಲಾಗಿದೆ.

ಮೊದಲ ಮಾತುಕತೆಯನ್ನು "ದಿ ಪಿರಮಿಡ್ ಆಫ್ ಕರಪ್ಷನ್" ಅನ್ನುವ ಇಂಗ್ಲಿಷ್ ಪುಸ್ತಕ ಬರೆದಿರುವ ಕನ್ನಡಿಗರಾದ ಕಿರಣ್ ಬಾಟ್ನಿಯವರು ನಡೆಸಿಕೊಡಲಿದ್ದಾರೆ.

A talk on Black Money Corruption Currency Notes by Kiran Batni

500, 1000 ರೂಪಾಯಿ ನೋಟುಗಳ ಚಲಾವಣೆ ನಿಲ್ಲಿಸುವುದರೊಂದಿಗೆ ಕಪ್ಪು ಹಣ ತೊಡೆಯುವ ಮತ್ತು ಆ ಮೂಲಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಬಗೆಗಿನ ಚರ್ಚೆಗಳು ಮತ್ತೆ ಎಲ್ಲೆಡೆ ಕಾಣುತ್ತಿದೆ. ಹಾಗಿದ್ದರೆ ಭ್ರಷ್ಟಾಚಾರವೆಂದರೇನು? ಅದು ವೈಯಕ್ತಿಕ ಲಾಭಕ್ಕೆ ವ್ಯವಸ್ಥೆಯ ದುರ್ಬಳಕೆ ಮಾತ್ರವೇ? ವ್ಯವಸ್ಥೆಯ ಅಡಿಪಾಯವೇ ಇನ್ನೂ ಆಳವಾದ ಮತ್ತು ಮೂಲಭೂತವಾದ ಭ್ರಷ್ಟಾಚಾರವೊಂದರ ಮೇಲೆ ನಿಂತಿದ್ದರೆ ಅದನ್ನು ಯಾವ ರೀತಿಯ ಭ್ರಷ್ಟಾಚಾರವೆಂದು ಕರೆಯಬಹುದು?

ಕಪ್ಪು ಹಣ, ಭ್ರಷ್ಟಾಚಾರದ ಕುರಿತ ಚರ್ಚೆ ತಾರಕಕ್ಕೇರಿರುವ ಹೊತ್ತಲ್ಲಿ ಈ ಬಗ್ಗೆ ಹೊಸ ಆಯಾಮವೊಂದನ್ನು ನೀಡುವ "ನಿಮ್ಮ ಬಿಳಿ ಹಣ ನಿಜಕ್ಕೂ ಎಷ್ಟು ಬಿಳಿ?" ಅನ್ನುವ ವಿಷಯದ ಕುರಿತು ಕಿರಣ್ ಬಾಟ್ನಿಯವರು ಮಾತನಾಡಲಿದ್ದಾರೆ.

ವಿಳಾಸ:

ಮುನ್ನೋಟ
ನಂಬರ್ 67, ಸೌತ್ ಅವೆನ್ಯೂ ಕಾಂಪ್ಲೆಕ್ಸ್
ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ
ಬಸವನಗುಡಿ, ಬೆಂಗಳೂರು - 560004
[email protected]
ಫೋನ್ : 080 26603000
www.munnota.com

(ಒನ್ಇಂಡಿಯಾ ಸುದ್ದಿ)

English summary
PM Modi's Currency Ban will solve smaller problem temporarily. I want to talk about the bigger problem which nobody wants to talk about: primitive corruption. This is the corruption built into the system says Author Kiran Batni. To know more about this topic do visit Munnota on November 20
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X