ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕ್ವಾಂಟಮ್‌ ಫಿಸಿಕ್ಸ್‌ ಜಗತ್ತಿನಲ್ಲಿ ಹಾಕೋಣವೇ ಒಂದು ಸುತ್ತು?

By Nayana
|
Google Oneindia Kannada News

ಬೆಂಗಳೂರು, ಜುಲೈ 31: ಲೇಖಕ ವಸಂತ್‌ ಶೆಟ್ಟಿ ಅವರ ಮುನ್ನೋಟ ಪುಸ್ತಕ ಮಳಿಗೆಯಲ್ಲಿ ಕ್ವಾಂಟಮ್‌ ಆಫ್‌ ಫಿಸಿಕ್ಸ್‌ ಕುರಿತು ಅರಿಮೆ ಮಾತುಕತೆಯನ್ನು ಆ.5ರಂದು ಭಾನುವಾರ ಬೆಳಗ್ಗೆ 11.30ಕ್ಕೆ ಮುನ್ನೋಟ ಮಳಿಗೆಯಲ್ಲಿ ಹಮ್ಮಿಕೊಂಡಿದೆ.

ಕ್ವಾಂಟಮ್‌ ಫಿಸಿಕ್ಸ್‌ ಜಗತ್ತಿನಲ್ಲಿ ಹಾಕೋಣವೇ ಒಂದು ಸುತ್ತು ಎನ್ನುವ ಶೀರ್ಷಿಕೆಯಡಿ ಕಾರ್ಯಕ್ರಮ ಆಯೋಜಿಸಲಾಗಿದೆ. ವಸ್ತುಗಳ ಗಾತ್ರ ಕಿರಿದಾದಂತೆ ಅವುಗಳು ನಮ್ಮ 'ಸಾಮಾನ್ಯ' ಅರಿವಿಗಿಂತ ಬೇರೆಯಾಗಿ ನಡೆದುಕೊಳ್ಳುತ್ತವೆ. ಕಿರಿದಾದ ಕಣಗಳ ಗುಣಗಳು ದೊಡ್ಡ ವಸ್ತುಗಳಿಗಿಂತ ಬೇರೆಯಾಗಿರುತ್ತದೆ.

ಏನಿದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ತಿಳಿಯಬೇಕೆ?ಏನಿದು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ತಿಳಿಯಬೇಕೆ?

ಕಣಗಳ ಈ ಕಿರುಜಗತ್ತಿನಲ್ಲಿ ಏನೇನಿದೆ ಅಂತಾ ಅರಕೆ ಮಾಡುವುದೇ ಕ್ವಾಂಟಮ್ ಫಿಸಿಕ್ಸ್. ಹಾಗಿದ್ದರೆ ಏನಿದೆ ಭೌತಶಾಸ್ತ್ರದ ಈ ಕವಲಿನಲ್ಲಿ? ಈ ಹಿಂದಿನ ಕ್ಲಾಸಿಕಲ್ ಫಿಸಿಕ್ಸಿಗೂ ಇದಕ್ಕೂ ಏನಿದೆ ಅಂತರ? ಇದರ ಸುತ್ತ ಜಗತ್ತಿನಲ್ಲಿ ನಡೆಯುತ್ತಿರುವ ಸಂಶೋಧನೆಗಳೇನು? ಆನ್ ಲೈನ್ ಸುರಕ್ಷತೆಯಿಂದ ಹಿಡಿದು ಕಾಯಿಲೆ ಪತ್ತೆ ಮಾಡುವವರೆಗೆ ಹಲವು ರೀತಿಯಲ್ಲಿ ಮನುಕುಲದ ಒಳಿತಿಗೆ ಕೊಡುಗೆ ನೀಡಬಲ್ಲ ಅರಿಮೆಯ ಈ ಕವಲಿನ ಸುತ್ತ ಅರಿಮೆ ಮುನ್ನೋಟ ಮಾತುಕತೆಯನ್ನು ಅಮರ್ ಹೊಳೆಗದ್ದೆ ಅವರು ನಡೆಸಿಕೊಡಲಿದ್ದಾರೆ.

A talk on advantages and importance of Physics in human development

ಏನು-ಅರಿಮೆ ಮಾತುಕತೆ
ಎಲ್ಲಿ-ಮುನ್ನೋಟ ಪುಸ್ತಕ ಮಳಿಗೆ, ಸೌತ್‌ ಅವೆನ್ಯೂ ಕಾಂಪ್ಲೆಕ್ಸ್‌, ಡಿವಿಜಿ ರಸ್ತೆ, ನಾಗಸಂದ್ರ ಸರ್ಕಲ್ ಬಳಿ,ಬಸವನಗುಡಿ
ಯಾವಾಗ-ಆಗಸ್ಟ್ 5, ಬೆಳಗ್ಗೆ 11.30

English summary
Munnota book stall is organizing a talk on advantages and importance of Physics in human development as part of Arime, talk series on August 5 at 11.30am.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X