ಮುಂಬೈ ಮಾದರಿಯಲ್ಲಿ ಬೆಂಗಳೂರಿಗೆ ಸಬ್ ಅರ್ಬನ್ ರೈಲು: ಪಿಯೂಷ್ ಗೋಯಲ್

Subscribe to Oneindia Kannada

ನವದೆಹಲಿ, ಅಕ್ಟೋಬರ್ 27: ಮುಂಬೈ ಮಾದರಿಯಲ್ಲಿ ಬೆಂಗಳೂರಿನಲ್ಲೂ ಸಬ್ ಅರ್ಬನ್ ರೈಲು ಆರಂಭಿಸುವ ಸಂಬಂಧ ರೈಲ್ವೇ ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ರೈಲ್ವೇ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

ಎಲ್ಲಾ ರೈಲುಗಳಲ್ಲಿ ಆಕ್ಸಿಜನ್ ಸಿಲಿಂಡರ್ ಕಡ್ಡಾಯ : ಸುಪ್ರಿಂ ಕೋರ್ಟ್

ನಗರದ ಜನದಟ್ಟಣೆ ಕಡಿಮೆ ಮಾಡಲು ಮತ್ತು ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವ ಉದ್ದೇಶವೂ ಇದಕ್ಕಿದೆ ಎಂದು ಅವರು ಹೇಳಿದ್ದಾರೆ.

A suburban railway network for Bengaluru on cards: Goyal

ನವದೆಹಲಿಯಲ್ಲಿ ವಿಚಾರ ಸಂಕಿರಣವೊಂದರಲ್ಲಿ ಮಾತನಾಡಿದ ಅವರು, ಬೆಂಗಳೂರಿಗೆ ಸಬ್ ಅರ್ಬಲ್ ರೈಲು ಬರಬೇಕು ಎಂಬ ಪ್ರಸ್ತಾಪವನ್ನು ಅನಂತ್ ಕುಮಾರ್ 1996ರಿಂದಲೇ ಮಾಡುತ್ತಾ ಬಂದಿದ್ದಾರೆ. ನಾನು ಈ ಇಲಾಖೆಗೆ ಬರುವ ಮುಂಚೆಯೇ ಈ ಪ್ರಸ್ತಾಪ ಇತ್ತು. ಇತ್ತೀಚೆಗೆ ನಡೆದ ನೈರುತ್ಯ ರೈಲ್ವೇ ಪ್ರಗತಿ ಪರಿಶೀಲನಾ ಸಭೆಯಲ್ಲೂ ಈ ವಿಚಾರ ಚರ್ಚೆಗೆ ಬಂದಿದೆ ಎಂದು ಅವರು ಹೇಳಿದ್ದಾರೆ.

ರೈಲ್ವೆ ಸುರಕ್ಷತೆಗೆ ಸಚಿವ ಗೋಯೆಲ್ ಸುದೀರ್ಘ ಸಭೆ, ಐದು ಸೂಚನೆಗಳು

ನೈರುತ್ಯ ರೈಲ್ವೇ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸಂಬಂಧ ಅಧಿಕಾರಿಗಳಿಗೆ ಅವರು ಸೂಚನೆ ನೀಡಿದ್ದು, ರೈಲ್ವೇ ಜಾಲಕ್ಕೆ ಸಂಬಂಧಿಸಿ ನಗರದ ಸರ್ವೇ ನಡೆಸಿ ಪ್ರಾಥಮಿಕ ವರದಿ ನೀಡಲು ಹೇಳಿದ್ದಾರೆ. ಪ್ರಾಥಮಿಕ ವರದಿ ನೀಡಲು ಗೋಯಲ್ ಅಧಿಕಾರಿಗಳಿಗೆ 30 ದಿನಗಳ ಸಮಯ ನೀಡಿದ್ದಾರೆ.

ಜತೆಗೆ ರೈಲ್ವೇ ನಿಲ್ದಾಣದಿಂದ ವಿಮಾನ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ಕೈಗಾರಿಕೆಗಳು ಇರುವ ಸ್ಥಳಗಳಿಗೆ ಸಂಪರ್ಕ ಕಲ್ಪಿಸುವಂತಿರಬೇಕು ಎಂದು ಗೋಯಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Railways is working on a proposal to create a suburban railway network for Bengaluru, much like the one in Mumbai, to decongest the city and link it to the airport, Railway Minister Piyush Goyal said today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ