ಅಪರಾಧ ತಡೆ ಜಾಗೃತಿಗೆ ಬೀದಿ ನಾಟಕ ಪ್ರದರ್ಶನ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ನಗರ ಪೊಲೀಸರ ಉದ್ದೇಶಕ್ಕೆ ಜನಾಗ್ರಹದವರ ಸಾಥ್ ಸಿಕ್ಕರೆ ಇಂಥ ಜಾಗೃತಿ ಕಾರ್ಯಕ್ರಮ ಆಗುವುದರಲ್ಲಿ ಯಾವ ಅನುಮಾನವೂ ಇಲ್ಲ. ಅಪರಾಧ ತಡೆಯುವುದಕ್ಕೆ ಸಾರ್ವಜನಿಕರಲ್ಲಿ ಮೊದಲಿಗೆ ಜಾಗೃತಿ ಮೂಡಬೇಕು. ಅಪರಾಧ ಕೃತ್ಯಗಳಲ್ಲಿ ತೊಡಗುವವರ ಎಣಿಕೆ ಹೇಗಿರುತ್ತವೆ. ಅವರು ಹೆಣೆಯುವ ಬಲೆ ಎಷ್ಟು ಗಟ್ಟಿ ಇತ್ಯಾದಿಯನ್ನು ಬೀದಿ ನಾಟಕದ ಮೂಲಕ ಪ್ರದರ್ಶಿಸಲಾಯಿತು.

ತಿಲಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ತಡೆ ಜಾಗೃತಿ ಭಾಗವಾಗಿ ಬೀದಿ ನಾಟಕದ ಪ್ರದರ್ಶನವಿತ್ತು. ಯುವಜನರ ಮೇಲೆ ಮಾದಕ ವಸ್ತು ಸೇವನೆಯ ಪರಿಣಾಮಗಳು, ಬೈಕ್-ಸರ-ಮೊಬೈಲ್ ಕಳವು ಸನ್ನಿವೇಶಗಳನ್ನು ಬೀದಿ ನಾಟಕದ ಮೂಲಕ ಪುನರ್ ಸೃಷ್ಟಿಸಿ, ಜಾಗೃತಿ ಮೂಡಿಸಲಾಯಿತು.[ಪ್ರಿಯಕರನನ್ನು ಪೆಟ್ರೋಲಿನಿಂದ ಸುಟ್ಟು ಕೊಂದ ಪ್ರೇಯಸಿ]

A Street Play for awareness about Crime

ಮೋದಲಿಗೆ ಇಂಥ ಬೀದಿ ನಾಟಕಗಳನ್ನು ಏಳು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಆಡುವುದಕ್ಕೆ ಅರಂಭಿಸಲಾಯಿತು. ಅದೀಗ ಹದಿನಾಲ್ಕು ಪೊಲೀಸ್ ಠಾಣೆವರೆಗೆ ವಿಸ್ತರಿಸಿದೆ. ಸಾರ್ವಜನಿಕರು ಹಾಗೂ ಪೊಲೀಸರ ಮಧ್ಯೆ ಇರುವ ಕಂದಕವನ್ನು ಇಲ್ಲದಂತಾಗಿಸಲು ಇಂಥ ಣಾಟಕ ಪ್ರದರ್ಶನಗಳು ಸಹಕಾರಿ. ತುಂಬ ಪರಿಣಾಮಕಾರಿಯಾಗಿ ಮೂಡಿಬಂದ ನಾಟಕವು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಯಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Community Policing project is a Bangalore City Police initiative supported by Janaagraha. Crime Prevention programs are conducted frequenting with the aid of Area Suraksha Mithras appointed for each Station. A Street Play under Tilaknagar Police Station limits was conducted regarding awareness about Crime and how to fill the gap between police and public.
Please Wait while comments are loading...