ಅತ್ಯಾಚಾರ ಮಾಡಿ ಅಶ್ಲೀಲ ವೆಬ್ ಸೈಟ್ ಗೆ ವಿಡಿಯೋ ಹಾಕಿದ ಬೆಂಗಳೂರಿನ ಟೆಕ್ಕಿ!

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 12: ತನ್ನ ಸಿಬ್ಬಂದಿಯ ಮೇಲೆ ಅತ್ಯಾಚಾರ ನಡೆಸಿ ಆ ವಿಡಿಯೋವನ್ನು ಅಶ್ಲೀಲ ವೆಬ್ ಸೈಟ್ ಗಳಲ್ಲಿ ಅಪ್ ಲೋಡ್ ಮಾಡಿದ ಸಾಫ್ಟ್ ವೇರ್ ಉದ್ಯೋಗಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ.

60ರ ವೃದ್ಧನಿಂದ 6 ವರ್ಷದ ಬಾಲಕಿ ಮೇಲೆ ಅತ್ಯಾಚಾರ

ಬೆಂಗಳೂರಿನ ಈಜಿಪುರದಲ್ಲಿ ವಾಸವಿದ್ದ ಪಶ್ಚಿಮ ಬಂಗಾಳದ 28 ವರ್ಷದ ಅರಿಂದಮ್ ನಾಥ್ ಎಂಬ ಸಾಫ್ ವೇರ್ ಉದ್ಯೋಗಿ ತನ್ನೊಂದಿಗೆ ಕೆಲಸ ಮಾಡುತ್ತಿದ್ದ ಒಡಿಶಾ ಮೂಲದ 26 ವರ್ಷದ ಯುವತಿಯನ್ನು ಪ್ರೀತಿಸುತ್ತಿರುವುದಾಗಿ ನಂಬಿಸಿ, ಆಕೆಯನ್ನು ತನ್ನ ಮನೆಗೆ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಲ್ಲದೆ, ಆಕೆಗೆ ತಿಳಿಯದಂತೆ ಅವನ್ನೆಲ್ಲ ತನ್ನ ಮೊಬೈಲ್ ಫೋನಿನಲ್ಲಿ ವಿಡಿಯೋ ಮಾಡಿದ್ದಾನೆ.

A software employee held for raping his colleague and uploading video to vulgar site.

ತಾನು ಮನೆಗೆ ಕರೆದಾಗಲೆಲ್ಲ ಆಕೆ ಬರಬೇಕೆಂದೂ, ಬಾರದಿದ್ದಲ್ಲಿ ಆ ವಿಡಿಯೋವನ್ನು ಅಶ್ಲೀಲ ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾನೆ. ಭಯಗೊಂಡ ಯುವತಿ ಆತ ಹೇಳಿದಂತೇ ಕೇಳಿದ್ದಾಳೆ. ಆದರೆ ಕ್ರಮೇಣ ಆತ ಹಣಕ್ಕೂ ಬೇಡಿಕೆ ಇಡುವುದಕ್ಕೆ ಶುರುಮಾಡಿದಾಗ ತಾನು ಹಣ ನೀಡುವುದಿಲ್ಲ ಎಂದಿದ್ದಾಳೆ. ಆಗಲೂ ವಿಡಿಯೋ ಅಪ್ ಲೋಡ್ ಮಾಡುವುದಾಗಿ ಆತ ಹೆದರಿಸಿದ್ದಾನೆ. ಆಕೆ ಈ ಬೆದರಿಕೆಗೆ ಬಗ್ಗದಿದ್ದಾಗ, ಸೆ.4 ರಂದು ಅಶ್ಲೀಲ ವೆಬ್ ಸೈಟ್ ನಲ್ಲಿ ಆ ವಿಡಿಯೋವನ್ನು ಅಪ್ ಲೋಡ್ ಮಾಡಿದ್ದಾನೆ.

ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾಳೆ. ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಆಕೆಯನ್ನು ಆಕೆಯ ಸ್ನೇಹಿತೆ ಕಾಪಾಡಿದ್ದಾಳೆ. ನಂತರ ಇಬ್ಬರೂ ಒಟ್ಟಾಗಿ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನನ್ವಯ ಸಾಫ್ಟ್ ವೇರ್ ಉದ್ಯೋಗಿಯನ್ನು ಪೊಲೀಸರು ವಶಕ್ಕೆ ಪಡೆದು, ವಿಚಾರಣೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A senior software engineer from West Bengal resides in Bengaluru raped his colleague from Odisha in Bengaluru. Police arrested him after he uploaded a obscene video of her in some vulgar site.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ