ಬೆಂಗಳೂರು: ಮಹಿಳೆಯರ ಒಳ ಉಡುಪು ಧರಿಸಿ ರೂಪದರ್ಶಿಗೆ ಕಿರುಕುಳ

By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಆಗಸ್ಟ್ 9: ಬೆಂಗಳೂರಿನ ನೈಸ್ ರೋಡ್ ಬಳಿ ಮಹಿಳೆಯರ ಒಳ ಉಡುಪು ಧರಿಸಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬ ರೂಪದರ್ಶಿಯೊಬ್ಬರಿಗೆ ಕಿರುಕುಳ ನೀದಲು ಪ್ರಯತ್ನಿಸಿದ ಘಟನೆ ಆಗಸ್ಟ್ 6ರ ಭಾನುವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಮಂಗಳೂರಲ್ಲಿ ವಿಕೃತ ನಡವಳಿಕೆಯ ಕಾಮುಕನ ಬಂಧನ

ಮಿಸೆಸ್ ಇಂಡಿಯಾ ಪಟ್ಟ ಅಲಂಕರಿಸಿದ್ದ ರೂಪದರ್ಶಿ ರಾಜ್ಯಶ್ರೀ ಅವರು ಪತಿಗೆ ಕಾಯುತ್ತ ಒಂಟಿಯಾಗಿ ರಸ್ತೆಯಲ್ಲಿ ನಿಂತಿದ್ದ ಸಮಯದಲ್ಲಿ ಬಳಿ ಬಂದ ವ್ಯಕ್ತಿಯೊಬ್ಬ ಮಹಿಳೆಯರ ಒಳ ಉಡುಪು ಧರಿಸಿ, ಲಿಪ್ ಸ್ಟಿಕ್ ಧರಿಸಿ ವಿಚಿತ್ರವಾಗಿ ಓಡಾಡುತ್ತಿದ್ದ. ಆದರೆ ಈತ ತೃತಿಯಲಿಂಗಿಯಲ್ಲ ಎಂಬುದು ರಾಜ್ಯಶ್ರೀ ಅವರ ಮಾತು.

A psycho man harassed a model in Bengaluru's nice road

ಒಂಟಿಯಾಗಿ ನಿಂತಿದ್ದ ರಾಜ್ಯಶ್ರೀ ಅವರ ಕೈ ಹಿಡಿದು ಎಳೆಯಲು ಪ್ರಯತ್ನಿಸಿದ ಈತನ ವರ್ತನೆಗೆ ಭಯಗೊಂಡ ರಾಜ್ಯಶ್ರೀ ಅವರು ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಆ ಸಮಯದಲ್ಲಿ ರಸ್ತೆಯಲ್ಲಿ ಯಾರೂ ಇಲ್ಲದ ಕಾರಣ ಮತ್ತು ವಾಹನಗಳು ಓಡಾಡುತ್ತಿರಲಿಲಲ್ಲವಾದ್ದರಿಂದ ಅವರ ಕೂಗು ಯಾರಿಗೂ ಕೇಳಿಲ್ಲ.

ಆತನ ಉಪಟಳ ಹೆಚ್ಚಾದಾಗ, ಪೊಲೀಸರಿಗೆ ದೂರು ನೀಡುವುದಾಗಿ ಹೆದರಿಸಿದ್ದಾರೆ. ಭಯಗೊಂಡ ವ್ಯಕ್ತಿ ದೂರ ಸರಿದಿದ್ದಾನಾದರೂ ವಿಚಿತ್ರವಾಗಿ ವರ್ತಿಸುತ್ತಲೇ ಇದ್ದಾಗ ತಮ್ಮ ಫೋನಿನಿಂದ ವಿಡಿಯೋ ಮಾಡಲು ರಾಜ್ಯಶ್ರೀ ಮುಂದಾಗಿದ್ದಾರೆ. ಇದರಿಂದ ಭಯಗೊಂಡ ಆತ ಅಲ್ಲಿಂದ ಕಾಲ್ಕಿತ್ತಿದ್ದಾನೆ.

Mysuru :Drunk Advocate Beats His Wife On Road | Oneindia Kannada

ಈ ವಿಚಿತ್ರ ಘಟನೆಯಿಂದ ಆತಂಕಗೊಂಡ ರಾಜ್ಯಶ್ರೀ ಸಾಮಾಜಿಕ ಜಾಲತಾಣಗಳಲ್ಲಿಯೂ ತಮ್ಮ ಕಹಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A psycho man harassed a model in Bengaluru's nice road. Man wearing woman's intimate cloths and tryed to harass a model.
Please Wait while comments are loading...