ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಮಯಪ್ರಜ್ಞೆ ಮೆರೆದ ಬೆಂಗಳೂರು ಟ್ರಾಫಿಕ್ ಪೊಲೀಸ್ ಗೆ ಸಲಾಂ!

By Vanitha
|
Google Oneindia Kannada News

ಬೆಂಗಳೂರು, ನವೆಂಬರ್, 20 : ಹೆರಿಗೆ ನೋವಿನಿಂದ ರಸ್ತೆ ಬದಿಯಲ್ಲಿ ಬಿದ್ದ ಮಹಿಳೆಯನ್ನು ಕಾಪಾಡಿ, ಆಕೆ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಲು ಅನುಕೂಲ ಮಾಡಿಕೊಟ್ಟು ಮಾನವೀಯತೆ ಮೆರೆದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಯಶೋಗಾಥೆ ಇಲ್ಲಿದೆ ನೋಡಿ.

ಹೌದು ಈ ಘಟನೆ ಗುರುವಾರ ಸುಮಾರು 9.15 ಕ್ಕೆ ನಗರದ ಬ್ಯಾಟರಾಯನಪುರ ಬಳಿಯ ಗಾಳಿ ಆಂಜನೇಯ ದೇವಾಸ್ಥಾನದ ಬಳಿ ನಡೆದಿದ್ದು, ಗರ್ಭಿಣಿಯು ಬಿಬಿಎಂಪಿಯ ಮಹಿಳಾ ಪೌರ ಕಾರ್ಮಿಕರು, ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಅವರ ಸಹಾಯದಿಂದ ರಸ್ತೆಯ ಬದಿಯಲ್ಲೇ ಹೆಣ್ಣು ಮಗುವಿಗೆ ಜನ್ಮ ಕೊಟ್ಟಿದ್ದಾಳೆ.[ಗುಂಡಿ ಮುಚ್ಚುವ ಟ್ರಾಫಿಕ್ ಪೊಲೀಸ್ ಪೇದೆಗೆ ಸನ್ಮಾನ]

A pregnancy women delivering baby in roadside help of Bengaluru Traffic Police

ಟ್ರಾಫಿಕ್ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ಗುರುವಾರ ಬ್ಯಾಟರಾಯನಪುರ ಸರ್ಕಲ್ ಬಳಿ ಕೆಲಸಕ್ಕೆ ಹಾಜರಾಗಿದ್ದಾರೆ. ಅಂತಹ ಸಮಯದಲ್ಲಿ ತಮಿಳುನಾಡು ಮೂಲದ ಸೇಲ್ವಿ ಎಂಬ ತುಂಬು ಗರ್ಭಿಣಿ ರಸ್ತೆಯಲ್ಲಿ ಕಷ್ಟಪಟ್ಟು ನಡೆದು ಬರುತ್ತಿರುವುದನ್ನು ಗಮನಿಸಿದ್ದಾರೆ. ಅಷ್ಟರಲ್ಲೇ ಆಕೆ ಹೆರಿಗೆ ನೋವಿನಿಂದ ರಸ್ತೆ ಬದಿಯಲ್ಲೇ ಕುಸಿದು ಬಿದ್ದಿದ್ದಾಳೆ.[ಮಾನವೀಯತೆ ಮೆರೆದ ಪೊಲೀಸ್ ಇನ್ ಸ್ಪಕ್ಟರ್ ಗೆ ಸೆಲ್ಯೂಟ್]

ತಕ್ಷಣಕ್ಕೆ ಸಮಯ ಪ್ರಜ್ಞೆ ಮೆರೆದ ಆತ 108ಕ್ಕೆ ಕರೆ ಮಾಡಿದ್ದಾರೆ. ಆದರೆ ಈಕೆ ಹೆರಿಗೆ ನೋವಿನಿಂದ ನರಳುವುದನ್ನು ಗನಮನಿಸಿದ ಈತ ಈಕೆಯನ್ನು ಈಗ ಆಸ್ಪತ್ರೆಗೆ ಸೇರಿಸಲು ಸಾಧ್ಯವಾಗುವುದಿಲ್ಲ ಎಂದು ಅರ್ಥ ಮಾಡಿಕೊಂಡಿದ್ದಾರೆ. ಆಗ ತಕ್ಷಣ ಅಲ್ಲಿಯೇ ಸುತ್ತಮುತ್ತ ಸ್ವಚ್ಛತೆಯಲ್ಲಿ ತೊಡಗಿದ್ದ ಮಹಿಳಾ ಪೌರಕಾರ್ಮಿಕರು, ಸಾರ್ವಜನಿಕರನ್ನು ಕರೆತಂದು ಅವರ ಬಳಿ ಇದ್ದ ಬಟ್ಟೆಗಳನ್ನು ತೆಗೆದುಕೊಂಡು ಯಾರು ಕಾಣದಂತೆ ಆಕೆಯ ಸುತ್ತ ಕೋಣೆ ಆಕಾರದಲ್ಲಿ ಬಟ್ಟೆ ಕಟ್ಟಿ ಆಕೆಗೆ ಸರಾಗವಾಗಿ ಹೆರಿಗೆ ಆಗುವಂತೆ ಮಾಡಿದ್ದಾರೆ.

ಪೊಲೀಸ್ ಸಬ್ ಇನ್ಸ್ ಪೆಕ್ಟರ್ ಗೋಪಾಲಕೃಷ್ಣ ನೀಡಿದ ಸಹಕಾರದಿಂದ ಹೆಣ್ಣು ಮಗು ಜನಿಸಿದ ಬಳಿಕ 108 ಸ್ಥಳಕ್ಕೆ ಆಗಮಿಸಿದೆ. ಬಳಿಕ ತಾಯಿ ಮತ್ತು ಮಗುವನ್ನು ನಗರದ ವಾಣಿ ವಿಲಾಸ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.

English summary
Gopalakrishna,PSI of Baytarayanapura Traffic,near Gali Anjaneya Junction on Mysore road.He noticed a woman delivering a baby by roadside without any attendants @9.15 AM.He attended to her immediately with the help of staff & public,and he arranged for an ambulance. Both mother Selvi & girl baby are safe.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X