2ನೇ ಬಾರಿ ಚಟ್ನಿ ಕೊಡದ ಹೋಟೆಲ್ ಮಾಲೀಕನಿಗೆ ಚಾಕು ಇರಿತ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಬೆಂಗಳೂರು,ಮಾರ್ಚ್,19: ಇಡ್ಲಿ ತಿನ್ನಲು ಎರಡನೇ ಬಾರಿ ಚಟ್ನಿ ಹಾಕಲಿಲ್ಲ ಎಂದು ಕುಪಿತಗೊಂಡ ಗ್ರಾಹಕನೊಬ್ಬ ಮಾಲೀಕನಿಗೆ ಚೂರಿಯಿಂದ ಇರಿದ ಘಟನೆ ನಗರದ ರೋಸ್ ಗಾರ್ಡ್ ಹೋಟೆಲಿನಲ್ಲಿ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮಾಲೀಕ ಸೋಮಶೇಖರ್ ಗೆ ಚೂರಿಯಿಂದ ಇರಿದ ವ್ಯಕ್ತಿಯೇ ಡೇವಿಡ್. ಈತ ವಿವೇಕನಗರದಲ್ಲಿ ವಾಸವಾಗಿದ್ದು, ಬೆಳಗಿನ ಉಪಹಾರಕ್ಕಾಗಿ ರೋಸ್ ಗಾರ್ಡನ್ ಹೋಟೆಲಿಗೆ ಹೋದ ಸಂದರ್ಭದಲ್ಲಿ ಈ ಕೃತ್ಯ ಎಸಗಿದ್ದಾನೆ.[ಗಂಡನ ವಿಕೃತ ಕಾಮಕ್ಕೆ ಬೇಸತ್ತು ಮಕ್ಕಳನ್ನೇ ಕೊಂದ ತಾಯಿ!]

A person stabbed hotel owner for delayed serving chutney in Bengaluru

ಹೋಟೆಲಿನಲ್ಲಿ ನಡೆದದ್ದೇನು?

ಬೆಳಗಿನ ತಿಂಡಿಗಾಗಿ ರೋಸ್ ಗಾರ್ಡನ್ ಹೋಟೆಲಿಗೆ ಹೋದ ಡೇವಿಡ್ ಒಂದು ಪ್ಲೇಟ್ ಇಡ್ಲಿ ಚಟ್ನಿ ತೆಗೆದುಕೊಂಡಿದ್ದಾನೆ. ಆಗ ಆತನ ಬಳಿ ಚಟ್ನಿ ಖಾಲಿಯಾಗಿದ್ದರಿಂದ ಇನ್ನೊಂದು ಬಟ್ಟಲು ಚಟ್ನಿ ಕೇಳಿದ್ದಾನೆ.[ಮದುವೆಗೆ ಒಪ್ಪದ ತಂದೆ-ತಾಯಿಯನ್ನು ಕೊಲ್ಲಿಸಿದ ಮಗ!]

ಚಟ್ನಿಯ ವಿಷಯದಲ್ಲಿ ಹೋಟೆಲ್ ಮಾಲೀಕ ಸೋಮಶೇಖರ್ ಹಾಗೂ ಡೇವಿಡ್ ನಡುವೆ ಜಗಳವಾಗಿದೆ. ಇದರಿಂದ ಕುಪಿತಗೊಂಡ ಡೇವಿಡ್ ತನ್ನ ಬಳಿ ಇದ್ದ ಚಾಕುವಿನಿಂದ ಮಾಲೀಕ ಸುರೇಶ್ ಗೆ ಇರಿದಿದ್ದಾನೆ.[ಎಂ.ಎಂ.ಕಲಬುರ್ಗಿ ಹತ್ಯೆ ತನಿಖೆಗೆ ವಿಶೇಷ ತಂಡ ರಚನೆ]

ತಕ್ಷಣ ಮಾಲೀಕನನ್ನು ಹೋಟೆಲ್ ಕೆಲಸಗಾರರು ಹತ್ತಿರದ ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಿದ್ದು, ಸೋಮಶೇಖರ್ ಪ್ರಾಣಪಾಯದಿಂದ ಪಾರಾಗಿದ್ದಾರೆ. ವಿಲ್ಸನ್ ಗಾರ್ಡನ್ ಪೊಲೀಸರು ಈತನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A person David stabbed to hotel owner Somashekar for delayed serving chutney in Rose Garden, on Friday.
Please Wait while comments are loading...