ಪ್ರೇಯಸಿಯ ಮನೆಗೆ ಬೆಂಕಿ ಹಚ್ಚಿದ ಹುಚ್ಚು ಪ್ರೇಮಿ

Posted By:
Subscribe to Oneindia Kannada

ಬೆಂಗಳೂರು,ಮಾರ್ಚ್,12: ಪ್ರೇಯಸಿ ಕೈ ತಪ್ಪಿಹೋಗುತ್ತಾಳೆ ಎಂಬ ಭಯಕ್ಕೆ ಒಳಗಾದ ಪ್ರೇಮಿಯೊಬ್ಬ ಪ್ರೇಯಸಿಯ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದು, ಈ ಹುಚ್ಚು ಪ್ರೇಮಿಯನ್ನು ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಪ್ರೇಮಿ ದೀಪಕ್ (22) ಹುಚ್ಚಾಟದಿಂದ ಪ್ರೇಯಸಿ ಮೇಘನಾ (21) ಸೇರಿದಂತೆ ತಂಗಿ ಸಂಜನಾಳಿಗೆ ಗಂಭೀರ ಗಾಯಗಳಾಗಿದ್ದು, ಆಕೆಯ ತಂದೆ ನಟರಾಜ್, ತಾಯಿ ಅನುಪಮಾ ಇವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ. ಇವರೆಲ್ಲರನ್ನು ನಗರದ ಸೇಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.[ಇಬ್ಬರು ಮಕ್ಕಳ ಬಾಳಿಗೆ ಬೆಳಕಾದ ವಿಜಯಪುರದ 'ಜ್ಯೋತಿ']

A lover fired his girl friend house in Bengaluru

ಏನಿದು ಘಟನೆ?

ದೀಪಕ್ ಮತ್ತು ಮೇಘನಾ ಕಳೆದ ನಾಲ್ಕು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮೇಘನಾ ಇಂಜಿನಿಯರಿಂಗ್ ಓದುತ್ತಿದ್ದರೆ, ದೀಪಕ್ ಪಿಯುಸಿ ಮುಗಿಸಿದ್ದನು. ಇವರಿಬ್ಬರ ಪ್ರೇಮದ ವಿಚಾರ ಇತ್ತೀಚೆಗೆ ಕುಟುಂಬದವರಿಗೆ ತಿಳಿದಿತ್ತು.

ಪ್ರೇಮಿಸುತ್ತಿರುವುದು ಮೇಘನಾಳ ಮನೆಯವರಿಗೆ ತಿಳಿದ ಕಾರಣ 'ಈಗ ಲವ್ ಬೇಡ ಮುಂದೆ ಓದು' ಎಂದು ದೀಪಕ್ ಗೆ ಸಲಹೆ ನೀಡಿದ್ದರು. ಅಲ್ಲದೇ ಮೇಘನಾ ಕೂಡ ಡಿಗ್ರಿ ಓದುವಂತೆ ಹೇಳಿದ್ದಳು. ಇವರಿಬ್ಬರ ಮಾತುಗಳನ್ನು ಆಲಿಸಿದ ಈತ ಪ್ರೇಯಸಿ ಕೈ ತಪ್ಪಿ ಹೋಗಬಹುದೆಂದು ಆತಂಕಕ್ಕೆ ಒಳಗಾಗಿದ್ದನು.[ಪ್ರೀತಿ ನಿರಾಕರಿಸಿದವಳಿಗೆ ಚೂರಿ ಹಾಕಿದ ಭಗ್ನ ಪ್ರೇಮಿ]

ಬಹಳ ಖಿನ್ನತೆ ಒಳಗಾದ ದೀಪಕ್ ಶುಕ್ರವಾರ ರಾತ್ರಿ ಎರಡು ಲೀಟರ್ ಪೆಟ್ರೋಲ್ ತೆಗೆದುಕೊಂಡು ಹೋಗಿದ್ದನು. ಸುತ್ತಮುತ್ತ ಯಾರು ಇಲ್ಲದಿರುವುದನ್ನು ಗಮನಿಸಿದ ಈತ ಮನೆಯ ಸುತ್ತ ಸುರಿದು ಬೆಂಕಿ ಹಂಚಿ ಪರಾರಿಯಾಗುತ್ತಿದ್ದನು. ಮನೆಯಲ್ಲಿ ಬೆಂಕಿ ಕಂಡ ಅಕ್ಕಪಕ್ಕದವರು ಹೊರಗೆ ಬಂದಿದ್ದಾರೆ.

ಮನೆಯಿಂದ ಹೊರಗೆ ಬಂದು ಓಡಿಹೋಗುತ್ತಿದ್ದ ಈತನನ್ನು ಮೇಘನಾಳ ಎದುರು ಮನೆಯವರು ತಡೆದು ನಿಲ್ಲಿಸಿ ವಿಚಾರಿಸಿದ್ದಾರೆ. ಈತನ ಮೈಯಿಂದ ಪೆಟ್ರೋಲ್ ವಾಸನೆ ಬರುತ್ತಿರುವುದನ್ನು ಗಮನಿಸಿದ ಎದುರು ಮನೆಯವರು ಆತನನ್ನು ಪ್ರಶ್ನಿಸಿದ್ದಾರೆ. ಅಷ್ಟರಲ್ಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರಿಗೆ ದೀಪಕ್ ನನ್ನು ಒಪ್ಪಿಸಿದ್ದಾರೆ.[ನಿನ್ನ ಗುಳಿ ಕೆನ್ನೆಯ ನಗು ಜೊತೆಗಿರಲು ನಾ ಬಡವನಲ್ಲ]

ಈ ಘಟನೆಯಲ್ಲಿ ಮನೆ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಮೇಘನಾ ಹಾಗೂ ತಂಗಿ ಸಂಜನಾಳಿಗೆ ಗಂಭೀರ ಗಾಯಗಳಾಗಿದ್ದು, ತಂದೆ ತಾಯಿಯರು ಪ್ರಾಣಪಾಯದಿಂದ ಪಾರಾಗಿದ್ದಾರೆ. ಪ್ರಿಯಕರ ದೀಪಕ್ ನನ್ನು ಶ್ರೀರಾಂಪುರ ಪೊಲೀಸರು ತನಿಖೆಗೆ ಒಳಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A lover Deepak fired his girl friend Meghana's house in Bengaluru. Srirampura police arrested accused on Friday, March 11th. Meghana and her family very injured admitted at Saint Johns hospital, Bengaluru. Meghana is the engineering student.
Please Wait while comments are loading...