ರಾಜರಾಜೇಶ್ವರಿ ನಗರದಲ್ಲಿ ವರದಕ್ಷಿಣೆ ಕಿರುಕುಳಕ್ಕೆ ಗೃಹಿಣಿ ಬಲಿ

Posted By:
Subscribe to Oneindia Kannada

ಬೆಂಗಳೂರು, ಜನವರಿ 11: ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್ ಬಡಾವಣೆಯಲ್ಲಿ ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತರನ್ನು 24 ವರ್ಷ ವಯಸ್ಸಿನ ನಿರ್ಮಲಾ ಎಂದು ಗುರುತಿಸಲಾಗಿದೆ.

ಒಂದೂವರೆ ವರ್ಷದ ಹಿಂದೆ ಚಿತ್ರದುರ್ಗ ಮೂಲದ ವಿಶ್ವನಾಥ್​​​ ಜತೆ ವಿವಾಹವಾಗಿದ್ದ ನಿರ್ಮಲಾ ಅವರು ತಮ್ಮ ಸಾವಿಗೆ ಅತ್ತೆ -ಮಾವನ ಕಿರುಕುಳವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟಿದ್ದಾರೆ. ಪತಿ ವಿಶ್ವನಾಥ್ ಅವರು ಆಗಾಗ ಕೆಲಸದ ನಿಮಿತ್ತ ಜಪಾನ್ ಗೆ ಹೋಗುತ್ತಿರುತ್ತಾರೆ ಎಂದು ತಿಳಿದು ಬಂದಿದೆ.

A housewife commits suicide in Rajarajeshwari Nagar

ಕಳೆದೆರಡು ದಿನದ ಹಿಂದಷ್ಟೆ ಪತಿ ಬೆಂಗಳೂರಿಗೆ ಬಂದಿದ್ದ ವಿಶ್ವನಾಥ್ ಅವರು ಜಪಾನ್ ​​ಗೆ ತೆರಳಿದ ಬಳಿಕ ಬುಧವಾರ ರಾತ್ರಿ ವೇಳೆ ನಿರ್ಮಲಾ ಅವರು ರೂಮಿನಲ್ಲಿರುವ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

'ನಿರ್ಮಲಾ ಆತ್ಮಹತ್ಯೆಗೂ ಮುನ್ನ ಬರೆದಿರುವ ಡೆತ್​​​​​ನೋಟ್ ಹರಿಯಲಾಗಿದ್ದು, ಕಸದ ಬುಟ್ಟಿಗೆ ಎಸೆಯಲಾಗಿತ್ತು. ಮೃತರ ಅತ್ತೆ ಮಾವ ಅವರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ವರದಕ್ಷಿಣೆ ಕಿರುಕುಳದ ಆರೋಪದ ಬಗ್ಗೆ ತನಿಖೆ ನಂತರ ತಿಳಿದು ಬರಲಿದೆ ಎಂದು ರಾಜರಾಜೇಶ್ವರಿ ನಗರ ಪೊಲೀಸರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A 24-year-old housewife committed suicide by hanging herself at her residence in Rajarajeshwari Nagar on Wednesday. The deceased has been identified as Nirmala wife of Vishwanth. In-laws are blamed in her suicide and Rajarajeshwari Nagar police have detained accused and investigating about alleged dowry harassment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ