ಬೆಂಗಳೂರು: ಪೆಪ್ಪರ್ ಸ್ಪ್ರೇ ಎರಚಿ ರೂ.6 ಲಕ್ಷ ದರೋಡೆ!

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 2: ನಾಲ್ಕು ಜನ ದುಷ್ಕರ್ಮಿಗಳ ತಂಡ ಗೃಹೋಪಯೋಗಿ ವಸ್ತುಗಳನ್ನು ಡೆಲಿವರಿ ಮಾಡುತ್ತಿದ್ದ ವಾಹನದ ಮೇಲೆ ದಾಳಿ ಮಾಡಿ 6ಲಕ್ಷರೂ ದರೋಡೆ ಮಾಡಿರುವ ಘಟನೆ ನಡೆದಿದೆ.

ಇಲ್ಲಿಯ ಮಾರತ್ ಹಳ್ಳಿ ಸಮೀಪದ ಸಿ.ಕೆ.ಬಿ. ಲೇಔಟ್ ನಲ್ಲಿ ಸೋಮವಾರ ರಾತ್ರಿ ಗೃಹಪಯೋಗಿ ವಸ್ತುಗಳನ್ನು ಪೂರೈಸುವ ವಾಹನವನ್ನು ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಸುತ್ತುವರಿದು ಪೆಪ್ಪರ್ ಸ್ಪ್ರೇ ಎರಚಿ ರೂ ಆರು ಲಕ್ಷ ದರೋಡೆ ಮಾಡಿದ್ದಾರೆ.

A four men gang uses pepper spray and rob rs.6 lakh

ಹೆಚ್.ಎ.ಎಲ್ ಲೇಔಟ್ ವ್ಯಾಪ್ತಿಯಲ್ಲಿ ಗೃಹಪಯೋಗಿ ವಸ್ತುಗಳನ್ನು ಪೂರೈಸುವ ಸಂಸ್ಥೆಯ ಸಂತ್ರಸ್ತ ಸಿಬ್ಬಂದಿ ಫಯಾಜ್(18) ಮತ್ತು ಯೋಗೇಶ್ (32) ಅವರ ಹೇಳಿಕೆಗಳನ್ನು ಪೊಲೀಸರು ಪಡೆದುಕೊಂಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಈ ಸಂತ್ರಸ್ತ ಸಿಬ್ಬಂದಿ ಯುವಕರು ಸಂಸ್ಥೆಯ ವಸ್ತುಗಳನ್ನು ಮನೆಗಳಿಗೆ ತಲುಪಿಸಿ ಗ್ರಾಹಕರಿಂದ ಹಣ ಪಡೆದು ಸಂಸ್ಥೆಗೆ ಒಪ್ಪಿಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಸೋಮವಾರ ನಗರದ ಇತರ ಭಾಗಗಳಲ್ಲಿ ವಸ್ತುಗಳನ್ನು ಪೂರೈಸಿ ಸಿಬ್ಬಂದಿಯು ಸಿ.ಕೆ.ಬಿ. ಬಡಾವಣೆ ಮೂಲಕ ಸಂಸ್ಥೆಗೆ ಹಿಂತಿರುಗುತ್ತಿದ್ದರು. ಫಯಾಜ್ ಬಳಿ ಹಣವಿತ್ತು, ಯೊಗೇಶ್ ವಾಹನ ಚಲಾಯಿಸುತ್ತಿದ್ದರು.

ಈ ವೇಳೆ ಎರಡು ಬೈಕ್ ಗಳಲ್ಲಿ ಬಂದ ಕಳ್ಳರು ವಾಹನವನ್ನು ಸುತ್ತುವರಿದು ಪೆಪ್ಪರ್ ಸ್ಪ್ರೇ ಎರಚಿ ಹಣ ದೋಚಿದ್ದಾರೆ. ಎಂದು. ಸಂತ್ರಸ್ತ ಸಿಬ್ಬಂದಿ ಹೇಳಿಕೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೂಡಲೇ ಸಿಬ್ಬಂದಿಯು ಸಂಸ್ಥೆಯ ಮ್ಯಾನೇಜರ್ ವಿಷಯ ತಿಳಿಸಿದ್ದು, ಹೆಚ್.ಎ.ಎ.ಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ತನಿಖೆ ಕೈಗೊಂಡಿರುವ ಪೊಲೀಸರು ವಾಹನ ಒಡಾಡಿರುವ ಸ್ಥಳಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಇದೇ ವಿಧಾನದಲ್ಲಿ ದರೋಡೆ ಮಾಡುವ ಕಳ್ಳರ ಪಟ್ಟಿಯನ್ನು ಪೊಲೀಸರು ಪಟ್ಟಿಮಾಡಿದ್ದು, ತನಿಖೆ ಕೈಗೊಂಡಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Four men on two bikes surrounded a van and used pepper spray on its occupants at C.K.B. Layout on Monday night. In the ensuing confusion, the men stole Rs. 6 lakh from the victims.
Please Wait while comments are loading...