ಹುಳಿಮಾವು ಬಳಿ ಪ್ರೇಮಿ ಅರುಣ್ ಆತ್ಮಹತ್ಯೆಗೂ ಮುನ್ನ ಹೇಳಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 17: ಪ್ರೀತಿಸಿದ ಹುಡುಗಿ ಸಿಗದ ಕಾರಣ ಪ್ರೇಮಿಗಳು ಆತ್ಮಹತ್ಯೆ ಹಾದಿ ಹಿಡಿಯುವುದನ್ನು ಕೇಳಿರುತ್ತೀರಿ, ನೋಡುತ್ತೀರಿ. ಆದರೆ, ಶನಿವಾರದಂದು ಒಬ್ಬ ಪ್ರೇಮಿ ಫೇಸ್ ಬುಕ್ ನಲ್ಲಿ ವಿಡಿಯೋ ಹಾಕಿ, ತನಗಾದ ನೋವನ್ನು ಸಾರ್ವಜನಿಕವಾಗಿ ತೋಡಿಕೊಂಡ ಘಟನೆ ನಡೆದಿದೆ. ದುರದೃಷ್ಟವಶಾತ್, ವಿಡಿಯೋ ಹಾಕಿದ ಮೇಲೆ ಆ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಬನ್ನೇರುಘಟ್ಟ ರಸ್ತೆ ವೀವರ್ಸ್ ಕಾಲೋನಿ ಬಳಿ 27 ವರ್ಷ ವಯಸ್ಸಿನ ಅರುಣ್ ಕುಮಾರ್ ಎಂಬ ಯುವಕ ತನಗಾದ ಮಾನಸಿಕ ಹಾಗೂ ದೈಹಿಕ ಹಿಂಸೆ ಬಗ್ಗೆ ವಿಸ್ತಾರವಾಗಿ ಹೇಳಿಕೊಂಡಿದ್ದಾನೆ. ತಾನು ಪ್ರೀತಿಸುತ್ತಿದ್ದ 23 ವರ್ಷದ ಹುಡುಗಿ ಬಗ್ಗೆ, ಪ್ರೀತಿಯ ಬಗ್ಗೆ ಹಾಗೂ ಆಕೆಯ ಮನೆಯವರು ನೀಡಿದ ಕಿರುಕುಳದ ಬಗ್ಗೆ ಹೇಳಿ ಕಣ್ಣೀರಿಟ್ಟಿದ್ದಾನೆ.[ಆತ್ಮಹತ್ಯೆ ಮಾಡಿಕೊಂಡರೂ ಕಣ್ಣು ದಾನ ಮಾಡಿದ ಯುವಕ]

ನಾನು ಮತ್ತು ಸ್ವಾತಿ ಪರಸ್ಪರ ಪ್ರೀತಿಸುತ್ತಿದ್ದೆವು. ಆಕೆಯ ಭಾವನೇ ನಮ್ಮ ಪ್ರೀತಿ ಮುರಿದು ಬೀಳಲು ಕಾರಣ. ಆತ ಹಲವು ಭಾರಿ ರೌಡಿಗಳ ಮೂಲಕ ನನಗೆ ಬೆದರಿಕೆಯೊಡ್ಡಿದ್ದ. ಅಲ್ಲದೆ, ಸ್ವಾತಿಯನ್ನು ಪ್ರೀತಿಸಬೇಡ ಎಂದು ರೌಡಿಗಳಿಂದ ಹಲ್ಲೆ ನಡೆಸಿದ್ದ. ನನ್ನ ಸಾವಿಗೆ ಆತನೇ ನೇರ ಕಾರಣ. ಅವನಿಗೆ ಶಿಕ್ಷೆಯಾಗಬೇಕು ಎಂದು ವಿಡಿಯೋದಲ್ಲಿ ಹೇಳಿದ್ದಾನೆ.

ಇಬ್ಬರ ಪ್ರೇಮಕ್ಕೆ ವಿರೋಧ ಬಂದಿದ್ದು ಏಕೆ? ಹೆದರಿಕೆಯಿಂದ ಅರುಣ್ ಆತ್ಮಹತ್ಯೆಗೆ ಶರಣಾದನೇ? ನೇಣು ಬಿಗಿದುಕೊಂಡು ಸಾವನ್ನಪ್ಪುವುದಕ್ಕೂ ಮುನ್ನ ಅರುಣ್ ವಿಡಿಯೋದಲ್ಲಿ ಏನು ಹೇಳಿದ ಮುಂದೆ ಓದಿ...[ಭಗ್ನ ಪ್ರೇಮಿ ಅರುಣ್ ಸೂಸೈಡ್ ಸ್ಪೀಚ್ ವಿಡಿಯೋ]

ಹುಡುಗಿ ಮನೆಯವರ ವಿರುದ್ಧ ದೂರು

ಹುಡುಗಿ ಮನೆಯವರ ವಿರುದ್ಧ ದೂರು

ಹುಳಿಮಾವು ಪೊಲೀಸ್‌ ಠಾಣೆ ವ್ಯಾಪ್ತಿಯ ಬನ್ನೇರುಘಟ್ಟ ರಸ್ತೆ ಬಳಿಯ ವೀವರ್ಸ್‌ ಕಾಲೋನಿ ನಿವಾಸಿ ಅರುಣ್‌ಕುಮಾರ್‌ ಅವರು 23 ವರ್ಷ ವಯಸ್ಸಿನ ಯುವತಿಯನ್ನು ಪ್ರೀತಿಸುತ್ತಿದ್ದರು. ಆದರೆ, ಯುವತಿ ಮನೆಯಲ್ಲಿ ಇದಕ್ಕೆ ವಿರೋಧವಿತ್ತು. ಅರುಣ್‌ ಕುಮಾರ್‌ ಪೋಷಕರು ತಮ್ಮ ಪುತ್ರನ ಸಾವಿಗೆ ಯುವತಿಯ ಮನೆಯವರೇ ಕಾರಣ ಎಂದು ಆರೋಪಿಸಿ ಹುಳಿಮಾವು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಅರುಣ್ ಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗಿತ್ತು

ಅರುಣ್ ಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡಲಾಗಿತ್ತು

ಹಲವು ಬಾರಿ ಎಚ್ಚರಿಕೆ ನೀಡಿದರೂ ಇಬ್ಬರು ಪ್ರೀತಿಯನ್ನು ಮುಂದುವರೆಸಿದ್ದರು., ಇದನ್ನು ಸಹಿಸಲಾಗದೆ ಯುವತಿಯ ಭಾವ ರೇಣುಕೇಶ್‌( ಎನ್‌ಬಿಎಸ್‌ ಶಾಲೆಯ ಮಾಲೀಕರು) ಅವರು ಒಮ್ಮೆ ರೌಡಿಗಳಿಂದ ಅರುಣ್‌ ಕುಮಾರ್‌ಗೆ ರೌಡಿಗಳಿಂದ ಬೆದರಿಕೆ ಹಾಕಿಸಿದ್ದರು. ಇದರಿಂದ ತೀವ್ರವಾಗಿ ಹೆದರಿದ ಅರುಣ್ ಸಾವಿಗೆ ಶರಣಾಗಿದ್ದಾನೆ ಎಂದು ಅರುಣ್ ಮನೆಯವರು ಆರೋಪಿಸಿದ್ದಾರೆ.

ಅರುಣ್ ವಿರುದ್ಧ ದೂರು ದಾಖಲಾಗಿತ್ತು

ಅರುಣ್ ವಿರುದ್ಧ ದೂರು ದಾಖಲಾಗಿತ್ತು

ಅರುಣ್ ವಿರುದ್ಧ ಜನವರಿ 29 ರಂದು ಮೈಕೋಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಖುದ್ದು ಯುವತಿಯೇ ದೂರು ನೀಡಿದ್ದಾರೆ. ಅರುಣ್‌ ಕುಮಾರ್‌ ನನಗೆ ತೊಂದರೆ ಕೊಡುತ್ತಿದ್ದಾನೆ ಎಂದು ದೂರಿನಲ್ಲಿ ಹೇಳಲಾಗಿದೆ. ಸದ್ಯಕ್ಕೆ ಅರುಣ್‌ಕುಮಾರ್‌ ಆತ್ಮಹತ್ಯೆ ಸಂಬಂಧ ಹುಳಿಮಾವು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ಅಂತಸ್ತಿನ ಅಂತರವೇ ಕಾರಣವಾಯಿತೇ?

ಆಸ್ತಿ ಅಂತಸ್ತಿನ ಅಂತರವೇ ಕಾರಣವಾಯಿತೇ?

ನಾವು ಬಡವರು, ಹುಡುಗಿ ಮನೆಯವರು ಶ್ರೀಮಂತರು ಎಂಬುದೇ ಪ್ರೀತಿ ವಿರೋಧಿಸಲು ಕಾರಣ, ಹಲವು ಬಾರಿ ಅರುಣ್ ಗೆ ಎಚ್ಚರಿಕೆ ನೀಡಿ ಬೆದರಿಸಿದ್ದರು. ಹೀಗಾಗಿ ಅವರು ಈ ರೀತಿ ಮಾಡಿಕೊಂಡಿದ್ದಾನೆ. ಯುವತಿ ಮನೆಯವರಿಗೆ ಶಿಕ್ಷೆಯಾಗಬೇಕು. ಈ ರೀತಿ ತೊಂದರೆ ಯಾರಿಗೂ ಆಗಬಾರದು ಎಂದು ಅರುಣ್ ಅವರ ತಾಯಿ ಶಾಂತಾ ಕಣ್ಣೀರಿಟ್ಟಿದ್ದಾರೆ.

ಅರುಣ್ ಆತ್ಮಹತ್ಯೆಗೂ ಮುನ್ನ ಹೇಳಿದ್ದೇನು?

ಅರುಣ್ ಆತ್ಮಹತ್ಯೆಗೂ ಮುನ್ನ ಹೇಳಿದ್ದೇನು? ವಿಡಿಯೋ ನೋಡಿ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
A 27 year old dejected lover Arun Kumar committed suicide committed suicide by hanging himself on Saturday afternoon after posting two videos expressing, in tears, his dejection on Facebook.The deceased, identified as Arun Kumar, was a resident of Weaver’s Colony, off Bannergatta Road. Arun was in a relations
Please Wait while comments are loading...