ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿದೆ 'ಅಟಲ್‌ ಸಾರಿಗೆ' :ವಿಶೇಷತೆ ಏನು ಗೊತ್ತಾ?

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 16: ಅಟಲ್‌ ಬಿಹಾರಿ ವಾಜಪೇಯಿಗೂ ಹಾಗೂ ಕನ್ನಡಿಗರಿಗೂ ಅಷ್ಟು ಅವಿನಾಭಾವ ಸಂಬಂಧವೇಕೆ, ಬೆಂಗಳೂರಿನಲ್ಲಿ ಅಟಲ್‌ ಹೆಸರಿನಲ್ಲಿ ಬಸ್‌ ಸಂಚರಿಸಲು ಕಾರಣವೇನು? ಇದರ ಬಗ್ಗೆ ತಿಳಿಯಲು ಮುಂದೆ ಓದಿ...

ಬೆಂಗಳೂರಿನ ಹಲವೆಡೆ ಅಟಲ್‌ ಬಸ್‌ಗಳು ಸಚರಿಸುತ್ತಿವೆ, ಈ ಬಸ್‌ಗಳಿಗೆ ಅಟಲ್‌ ಸಾರಿಗೆ ಎಂದು ಹೆಸರು ಬರಲು ಕಾರಣವೇನು ಎಂದು ಎಲ್ಲರಿಗೂ ತಿಳಿದಿಲ್ಲ. 2009ರಲ್ಲಿ ಯಡಿಯೂರಪ್ಪ ಬಿಜೆಪಿ ಸರ್ಕಾರವು ಬಿಎಂಟಿಸಿ ಬಸ್‌ಗೆ ಅಟಲ್‌ ಸಾರಿಗೆ ಎಂದು ನಾಮಕರಣ ಮಾಡಿತ್ತು.

ಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರಅಜಾತಶತ್ರು ಅಟಲ್ ಬಿಹಾರಿ ವಾಜಪೇಯಿ (1924-2018) ವ್ಯಕ್ತಿಚಿತ್ರ

ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ಇಡೀ ದೇಶದಲ್ಲಿ ಗೋಲ್ಡನ್ ಕ್ವಾಡ್ರಾಂಗಲ್ ರೋಡ್ ನಿರ್ಮಾಣ ಮಾಡಿ ಕ್ರಾಂತಿ ಹರಿಕಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು. ಇಂತಹ ಮಹಾನ್ ನಾಯಕನಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಅಟಲ್ ಸಾರಿಗೆ ಎಂದು ಹೆಸರಿಡಲಾಗಿತ್ತು.

A decade old Atal Sarige service in Bengaluru

ಜನರ ಅನುಕೂಲಕ್ಕಾಗಿ ಅಟಲ್‌ ಸಾರಿಗೆ ಬಸ್‌ ಓಡಿಸಲಾಗುತ್ತಿದೆ. ಕಳೆದ ದಶಕಗಳಿಂದ ಈ ಸಾರಿಗೆ ವ್ಯವಸ್ಥೆ ಇದೆ ಈಗ ದಿನದಿಂದ ದಿನಕ್ಕೆ ಅಟಲ್‌ ಬಸ್‌ಗಳು ಕಡಿಮೆಯಾಗುತ್ತಿದೆ. ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಸಂದರ್ಭದಲ್ಲಿ ಬೆಂಗಳೂರಿನ ನಿವಾಸಿಗಳು ಹಾಗೂ ಬಡವರ್ಗದ ಜನರಿಗೆ ಕೊಡುಗೆ ನೀಡಲು ನಿರ್ಧರಿಸಿತ್ತು.

ಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳುಭಾರತ ಪ್ರಕಾಶಿಸುವಂತೆ ಮಾಡಿದ ವಾಜಪೇಯಿಯ 5 ನಿರ್ಣಯಗಳು

ಕೊಳಗೇರಿ ಹಾಗೂ ಕೆಳ ವರ್ಗದ ಜನರಿಗೆ ರಿಯಾಯಿತಿ ದರದಲ್ಲಿ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸಲು ಅಟಲ್ ಸಾರಿಗೆ ಹೆಸರಿನ 25 ಬಸ್ ಗಳನ್ನುಆರಂಭಿಸಿದ್ದರು. ಇದಕ್ಕಾಗಿ ವಿಶೇಷ ಮಿನಿ ಬಸ್ ಗಳನ್ನು ವಿನ್ಯಾಸಗೊಳಿಸಲಾಗಿದ್ದು, ಪ್ರಯಾಣ ದರದಲ್ಲಿ ಶೇ. 50 ರಷ್ಟು ರಿಯಾಯಿತಿಯನ್ನೂ ಕೂಡ ನೀಡಿದ್ದರು. ಕಡಿಮೆ ಶುಲ್ಕ ,ಬಸ್ ಭಾರತೀಯ ತ್ರಿಕೋನ ಬಣ್ಣ ವಿಶಿಷ್ಟ ಬಣ್ಣವನ್ನು ಹೊಂದಿದೆ.

English summary
Chief minister B.S. Yeddyurappa was introduced Atal Sarige in the name of former prime minister Atal Bihari Vajpayee in 2009 in Bengaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X