ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಗ್ಯಾಡ್ಗೆಟ್ಜ್ ಎಕ್ಸ್ ಪೋ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 10: ಭಾರತದ ಅತ್ಯಂತ ದೊಡ್ಡ ಕನ್ಸೂಮರ್ ಟೆಕ್ನಾಲಜಿ ಶೋ ಇಂಡಿಯಾ ಗ್ಯಾಡ್ಗೆಟ್ಜ್ ಎಕ್ಸ್‍ಪೋ(ಐಜಿಇ) ಬೆಂಗಳೂರಿನಲ್ಲಿ ಅಕ್ಟೋಬರ್ 14 ರಿಂದ 16 ವರೆಗೆ ನಡೆಯಲಿದೆ. ಈ ಎಕ್ಸ್‍ಪೋದ ಪ್ರಮುಖ ಉದ್ದೇಶ ತಂತ್ರಜ್ಞಾನದಲ್ಲಿ ಆಸಕ್ತಿ, ಉತ್ಸಾಹ ಹೊಂದಿರುವವರಿಗೆ ಗ್ರಾಹಕ ತಂತ್ರಜ್ಞಾನದಲ್ಲಿನ ಇತ್ತೀಚಿನ ಆವಿಷ್ಕಾರಗಳು, ಸಂಶೋಧನೆಗಳ ಬಗ್ಗೆ ತಿಳಿ ಹೇಳುವುದಾಗಿದೆ.

ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿರುವ ಕರ್ನಾಟಕ ಟ್ರೇಡ್ ಪ್ರಮೋಶನ್ ಆರ್ಗನೈಸೇಷನ್ ಕನ್ವೇನ್ಷನ್ ಸೆಂಟರ್(ಕೆಪಿಟಿಒ)ದಲ್ಲಿ ಈ ಇಂಡಿಯಾ ಗ್ಯಾಡ್ಗೆಟ್ಜ್ ಎಕ್ಸ್‍ಪೋ ನಡೆಯುತ್ತಿದೆ. ಗ್ರಾಹಕ ತಾಂತ್ರಿಕತೆಗಳೂ, ಗ್ಯಾಡ್ಗೆಟ್ಜ್ ಗಳು ಮತ್ತು ಜಿಝ್ಮೋಸ್ ಗಳನ್ನು ಒಂದೇ ಸೂರಿನಡಿ ನೋಡುವ ಮತ್ತು ಅನುಭವಿಸುವ ಅವಕಾಶ ಈ ಮೂರು ದಿನಗಳ ಕಾಲ ಇರಲಿದೆ. ಈ ವರ್ಷದ ಎಕ್ಸ್‍ಪೋದ ವಿಷಯವೆಂದರೆ ''ಫ್ಯೂಚರ್ ಈಸ್ ನೌ' (ಭವಿಷ್ಯವನ್ನು ಇಂದೇ ನೋಡಿ).

ಐಜಿಇ 2016 ಭವಿಷ್ಯದ ಕನ್ಸೂಮರ್ ಟೆಕ್ನಾಲಜಿಯನ್ನು ಅನಾವರಣ ಮಾಡಲಿದ್ದು, ಈ ಮೂಲಕ ದೇಶದ ಉದ್ಯಮಿಗಳು, ಕೈಗಾರಿಕೆ ತಜ್ಞರು ಮತ್ತು ಗ್ಯಾಡ್ಗೆಟ್ಜ್ ಉತ್ಸಾಹಿಗಳ ನಡುವೆ ಪರಸ್ಪರ ಸಂಪರ್ಕ ಕಲ್ಪಿಸಲಿದೆ. ವಿವಿಧ ಗ್ರಾಹಕ ತಂತ್ರಜ್ಞಾನ, ಭವಿಷ್ಯದ ಆವಿಷ್ಕಾರಕ ವಿಚಾರಗಳ ಕುರಿತು ಚರ್ಚೆ ನಡೆಸುವ ವೇದಿಕೆಯನ್ನು ಈ ಐಜಿಇ ಒದಗಿಸಲಿದೆ.

A consumer electronics tech show IGE 2016 in KTPO Bengaluru

ಮೊದಲ ದಿನ: ಈ ದಿನ ಎಕ್ಸ್‍ಪೋಗೆ ಚಾಲನೆ ದೊರೆಯಲಿದ್ದು, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಅಪ್ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರ ಪಾತ್ರ ಕುರಿತಾದ ಅರ್ಥಪೂರ್ಣ ಚರ್ಚೆಗಳು ನಡೆಯಲಿವೆ. ಇದರ ಜತೆಗೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೆಸರುಗಳಿಸಿರುವ ಸಾಧಕರೊಂದಿಗೂ ಸಂವಾದ ನಡೆಸಬಹುದು.

2 ನೇ ದಿನ: ಹೊಸ ಯುಗದ ಮಾರುಕಟ್ಟೆ, ವಿದೇಶಿ ಸ್ಟಾರ್ಟ್ ಅಪ್ ಸೇರಿದಂತೆ ಮತ್ತಿತರೆ ವಿಚಾರಗಳ ಬಗ್ಗೆ ಸಂವಾದಗಳು ನಡೆಯಲಿವೆ. ಇದಾದ ನಂತರ ಇನ್ಸ್ ಸ್ಪೈರಿಂಗ್ ಇಂಡಿಯನ್ ಇನ್ನೋವೇಶನ್ ಅವಾರ್ಡ್ಸ್ (13) ಕಾರ್ಯಕ್ರಮ ಇರಲಿದೆ. ಇದು ತಂತ್ರಜ್ಞಾನ ಕ್ಷೇತ್ರದಲ್ಲಿ ಇರುವವರಿಗೆ ನಡೆಯುವ ಸ್ಪರ್ಧೆಯಾಗಿದ್ದು, ಈ ಮೂಲಕ ಸಾಧಕರನ್ನು ಗುರುತಿಸಿ ಗೌರವಿಸಲಾಗುತ್ತದೆ.

3 ನೇ ದಿನ: ವಾಹನ ತಂತ್ರಜ್ಞಾನ, ಹಾಟೆಸ್ಟ್ ಟ್ರೆಂಡ್ಸ್ ಮತ್ತು ಕ್ರೌಡ್ ಫಂಡಿಂಗ್ ಬಗ್ಗೆ ವಿಚಾರ ಮಂಥನ ನಡೆಯಲಿದೆ. ಈ ಮೂರೂ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳ ಚಟುವಟಿಕೆಗಳು ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಬೆಳವಣಿಗೆಗಳ ಬಗ್ಗೆಯೂ ಪ್ರಾತ್ಯಕ್ಷಿಕೆ ಮತ್ತು ಚರ್ಚಾಗೋಷ್ಠಿಗಳು ಇರಲಿವೆ.

ಈ ವರ್ಷದ ಎಕ್ಸ್‍ಪೋಗೆ ಒಂದು ಲಕ್ಷಕ್ಕೂ ಅಧಿಕ ವೀಕ್ಷಕರು ಬರುವ ನಿರೀಕ್ಷೆ ಇದೆ. ಈ ಪೈಕಿ 20,000 ದಷ್ಟು ಬಿ2ಬಿ, 70,000 ಗ್ರಾಹಕರು ಮತ್ತು 10,000 ಮಂದಿ ಪ್ರತಿನಿಧಿಗಳು ಪಾಲ್ಗೊಳ್ಳುವ ನಿರೀಕ್ಷೆ ಇದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
India Gadgetz Expo 2016 (IGE 2016) on 14th to 16th October 2016 at Karnataka Trade Promotion Organization (KTPO) trade center, Whitefield, Bengaluru, India.
Please Wait while comments are loading...