ಬೆಂಗಳೂರು: ಸೌತ್ ಎಂಡ್ ವೃತ್ತದ ಬಳಿ ಮುರಿದು ಬಿದ್ದ ಮರ

Written By:
Subscribe to Oneindia Kannada

ಬೆಂಗಳೂರು, ಮೇ. 13: ಶುಕ್ರವಾರ ಬೆಂಗಳೂರಲ್ಲಿ ಮಳೆ ಇಲ್ಲ, ಗಾಳಿ ಇಲ್ಲ. ಆದರೆ ಜಯನಗರದ ಸೌತ್ ಎಂಡ್ ವೃತ್ತದ ಸಮೀಪ ಮರದ ಟೊಂಗೆಯೊಂದು ಮುರಿದು ಬಿದ್ದ ಪರಿಣಾಮ ಸಂಚಾರ ಅಸ್ತವ್ಯಸ್ತವಾಗಿತ್ತು.

ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸೌತ್ ಎಂಡ್ ಮತ್ತು ರಾಮಕೃಷ್ಣ ಆಸ್ಪತ್ರೆ ನಡುವಿನ ಜಾಗದಲ್ಲಿ ಅಂದರೆ ವಿಜಯಾ ಕಾಲೇಜು ಎದುರಿನ ಮರದ ಕೊಂಬೆಯೊಂದು ಮುರಿದು ಬಿದ್ದಿದೆ. ಮೂರು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದು ಟ್ರಾಫಿಕ್ ಪೊಲೀಸರು ಬದಲಿ ಮಾರ್ಗದ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ.[ಅಬ್ಬಾ,,ಮಳೆಗಾಲಕ್ಕೂ ಮುನ್ನವೇ ಎಚ್ಚೆತ್ತ ಬಿಬಿಎಂಪಿ]

bengaluru

ತಕ್ಷಣ ಸ್ಥಳಕ್ಕೆ ಆಗಮಿಸಿರುವ ಬೆಸ್ಕಾಂ ಅಧಿಕಾರಿಗಳು ಮರ ತೆರವು ಮಾಡಿ ವಿದ್ಯುತ್ ತಂತಿಗಳನ್ನು ಸುಸ್ಥಿತಿಗೆ ತರುತ್ತಿದ್ದಾರೆ. ಶನಿವಾರ ಬೆಂಗಳೂರಿನಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.[ವರುಣ ಈ ಬಾರಿ ಬೇಗನೆ ಬರುತ್ತಿದ್ದಾನೆ, ಸ್ವಾಗತ ಕೋರಿರಿ]

ಸಿಗ್ನಲ್ ನಿಂತಾಗ ಮರದ ಕೊಂಬೆ ಮುರಿದು ಬಿದ್ದಿದ್ದೆ. ಮಧ್ಯಾಹ್ನದ ಸಮಯವಾದ್ದರಿಂದ ಹೆಚ್ಚಿನ ವಾಹನ ಸಂಚಾರ ಇರಲಿಲ್ಲ. ಹಾಗಾಗಿ ಯಾವುದೇ ಅಪಾಯ ಸಂಭವಿಸಿಲ್ಲ.

-
-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: A branch of a tree has fallen near south end circle on 13th May evening. Bengaluru Police and BESCOM took solution quickly .
Please Wait while comments are loading...