ಈ ವಿದ್ಯಾರ್ಥಿಯ ಬೈಸಿಕಲ್ ಗಿದೆ ತ್ರಿಚಕ್ರ ವಾಹನದ ನಂಬರ್ ಪ್ಲೇಟ್

By: ನಮ್ಮ ಪ್ರತಿನಿಧಿ
Subscribe to Oneindia Kannada

ಬೆಂಗಳೂರು, ಜೂನ್ 29: ಜಯನಗರ ಪ್ರತಿಷ್ಠಿತ ಶಾಲೆಯೊಂದರ ಪಾರ್ಕಿಂಗ್ ಸ್ಥಳದಲ್ಲಿ, ತುಂತುರು ಮಳೆಯಲ್ಲಿ ನೆನೆಯುತ್ತಾ ನಿಂತ ಬೈಸಿಕಲ್ ಗಮನ ಸೆಳೆಯುತ್ತದೆ. ಈ ಬೈಸಿಕಲ್ ಗೆ ನೋಂದಣಿ ಸಂಖ್ಯೆ ಇರುವುದನ್ನು ಕಂಡ ನಾಗರಿಕರೊಬ್ಬರು ಚಿತ್ರವನ್ನು ಕಳಿಸಿದ್ದಾರೆ.

ಹೀರೋ ಸೈಕಲ್ ನಲ್ಲಿ ಅಂಥದ್ದೇನಿದೆ ಎಂದರೆ, ಈ ಬೈಸಿಕಲ್ ಗೆ ವೆಹಿಕಲ್ ನೋಂದಣಿ ಸಂಖ್ಯೆ ಫಲಕ ಹಾಕಲಾಗಿದೆ. ಹಿಂಬದಿ ಚಕ್ರಕ್ಕೆ ಭಾರಿ ಬೀಗ ಕೂಡಾ ಇದೆ. [8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

ಗ್ರಿಪ್ ಇಲ್ಲದ ಹ್ಯಾಂಡಲ್ ಹೊಂದಿರುವ ಈ ಸೈಕಲ್ ನ ನೋಂದಣಿ ಸಂಖ್ಯೆ ನೋಡಿದರೆ ಇದು ಯಾವುದೋ ಬೇರೆ ವಾಹನ ಸಂಖ್ಯೆ ಎಂದು ತಕ್ಷಣಕ್ಕೆ ತಿಳಿಯುತ್ತದೆ. ಸಾಮಾನ್ಯವಾಗಿ ಪ್ರತಿ ಸೈಕಲಿಗೂ ಅದರದ್ದೇ ಆದ ಸಂಖ್ಯೆ ಇರುತ್ತದೆ. ಸೀಟಿನ ಕೆಳಭಾಗದಲ್ಲಿ ನಂಬರ್ ನಮೂದಿಸಲಾಗಿರುತ್ತದೆ.

A bicycle with Three wheeler vehicle's license number plate ,

ಆದರೆ, ಇಲ್ಲಿ ಕಂಡು ಬಂದ ಹಳದಿ ಬಣ್ಣದ ಬೋರ್ಡ್ ವುಳ್ಳ ಸಂಖ್ಯೆ KA 05 C 9377. ಈ ಸಂಖ್ಯೆಯ ಜಾಡು ಹಿಡಿದು ಬ್ರೌಸರ್ ನಲ್ಲಿ ವೆಹಿಕಲ್ ಸರ್ಚ್ ಕೊಟ್ಟಾಗ ಇದು ತ್ರಿಚಕ್ರವಾಹನವೊಂದರ ಬೋರ್ಡ್ ಎಂದು ತಿಳಿದು ಬರುತ್ತದೆ. [ಕಳೆದುಹೋದ ಬಾಲ್ಯ ಮರಳಿದರೆ ಎಷ್ಟು ಚೆನ್ನǃ]

A bicycle with Three wheeler vehicle's license number plate ,

ಬಜಾಜ್ ಆಟೋರಿಕ್ಷಾವೊಂದರ ಆರ್ ಸಿ ಅವಧಿ ಮುಗಿದು ಹೋಗಿರುವ ಈ ಬೋರ್ಡ್ ನ ಮಾಲೀಕರ ಹೆಸರು ಚಂದ್ರಯ್ಯ ಅವರ ಮಗ ಸಿದ್ದಯ್ಯ, ನೋಂದಣಿ ಮಾಡಿಸಿದ್ದು 2005ರಲ್ಲಿ ಎಂದು ತಿಳಿದು ಬರುತ್ತದೆ.


ಅದೇನೋ ಸರಿ, ಸೈಕಲ್ ಗೆ ತ್ರಿಚಕ್ರವಾಹನ ನಂಬರ್ ಪ್ಲೇಟ್ ಇದ್ದರೆ ಏನು ತೊಂದರೆ ಇಲ್ಲ, ಆದರೆ, ವಾಹನಗಳ ನಂಬರ್ ಪ್ಲೇಟ್ ದುರ್ಬಳಕೆಯಾಗದಿದ್ದರೆ ಸಾಕು ಎಂಬುದಷ್ಟೇ ನಮ್ಮ ಕಾಳಜಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A bicycle bearing a three wheeler vehicle's license number plate found today afternoon at Jayanagar. Bicycle owner is a school student having license number plate belonging to Siddaiah
Please Wait while comments are loading...