ಕಂಠೀರವ ಸ್ಡುಡಿಯೋ ಬಳಿ ಬ್ಯಾಂಕ್ ಮ್ಯಾನೇಜರ್ ನಿಗೂಢ ಸಾವು

Posted By:
Subscribe to Oneindia Kannada

ಬೆಂಗಳೂರು, ಅಗಸ್ಟ್ 16 : ರಿಂಗ್ ರಸ್ತೆಯ ಕಂಠೀರವ ಸ್ಟುಡಿಯೊ ಬಳಿ ನಿಲ್ಲಿಸಿದ್ದ ಕಾರಿನಲ್ಲಿಯೇ ಬ್ಯಾಂಕ್ ಮ್ಯಾನೇಜರ್ ಒಬ್ಬರು ಅನುಮಾನಾಸ್ಪದವಾಗಿ ಸತ್ತಿರುವ ಘಟನೆ ನಡೆದಿದೆ.

ಅಮೃತ್ ಹಳ್ಳಿಯಲ್ಲಿರುವ ಖಾಸಗಿ ಕೋ ಆಪರೇಟಿವ್ ಬ್ಯಾಂಕ್ ನ ಮ್ಯಾನೇಜರ್ ಮುನಿಯಪ್ಪ(55) ಮೃತಪಟ್ಟವರು. ಹೊಸಕೋಟೆ ತಾಲ್ಲೂಕಿನ ಮುನಿಯಪ್ಪ ಆರ್.ಟಿ. ನಗರದಲ್ಲಿ ನಿವಾಸಿ ಎಂದು ಗುರುತಿಸಲಾಗಿದೆ.

A Bank Manager found dead in a Car near Kanteerava Studio

ಅಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಬ್ಯಾಂಕಿಗೆ ರಜೆ ಇದ್ದ ಕಾರಣ, ಹೊರಗಡೆ ಹೋಗಿ ಬರುವುದಾಗಿ ಮನೆಯಿಂದ ತೆರಳಿದವರು ಬುಧವಾರ ಬೆಳಗ್ಗೆ ತನಕ ಎಲ್ಲಿದ್ದಾರೆ ಎಂಬ ಸುಳಿವಿರಲಿಲ್ಲ. ಕೆಂಗೇರಿಗೆ ಹೋಗುವುದಾಗಿ ಮನೆಯವರಲ್ಲಿ ಹೇಳಿದ್ದರು.

ಗಾಬರಿಗೊಂಡ ಮನೆಯವರ ಆರ್.ಟಿ. ನಗರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಬುಧವಾರದ ಮಧ್ಯಾಹ್ನದ ವೇಳೆಗೆ ಕಂಠೀರವ ಸ್ಟುಡಿಯೋ ಬಳಿ ಕಾರಿನಲ್ಲಿ ಮುನಿಯಪ್ಪ(55) ಅವರ ಶವ ಪತ್ತೆಯಾಗಿದೆ. ಶವವಿದ್ದ ಕಾರಿನ ಪಕ್ಕದ ಸೀಟಿನಲ್ಲಿ ವಿಷದ ಬಾಟಲಿ ಕಂಡು ಬಂದಿದೆ.

ಆದರೆ, ಮನೆಯ್ವರು ಈ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು, ಮುನಿಯಪ್ಪ ಅವರಿಗೆ ಅತ್ಮಹತ್ಯೆ ಮಾಡಿಕೊಳ್ಳುವಂಥ ತೊಂದರೆ, ಸಮಸ್ಯೆ ಇರಲಿಲ್ಲ ಎಂದಿದ್ದಾರೆ.ಕಾಮಾಕ್ಷಿಪಾಳ್ಯ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕಳಿಸಿದ್ದಾರೆ. ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A Bank Manager found dead today(Aug 16) in a Car near Kanteerava Studio, Bengaluru. The deceased is identified as Muniyappa, manager of Amrithahalli private co operative bank. His family had lodged a missing person complaint yesterday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X