ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಸ್ರೇಲ್ ನಲ್ಲಿ ಮೈಸೂರು ಲ್ಯಾನ್ಸರ್ಸ್ ಸಾಹಸಗಾಥೆ

By Prasad
|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 23 : ಇಂದಿಗೆ 99 ವರ್ಷಗಳ ಹಿಂದೆ ಕನ್ನಡದ ಕಟ್ಟಾಳುಗಳ ಸೈನ್ಯವೊಂದು ಇಸ್ರೇಲಿನ ಒಂದು ನಗರವನ್ನು ಶತ್ರುಗಳಿಂದ ವಶಪಡಿಸಿಕೊಂಡು ಮರಳಿ ಇಸ್ರೇಲಿನ ಮಡಿಲಿಗೆ ಸೇರಿಸಿದ ಕತೆ ಗೊತ್ತಾ?

3 ನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ!3 ನೇ ಮಹಾಯುದ್ಧ ನಡೆದರೆ ಅದು ನೀರಿಗಾಗಿಯೇ!

ಈ ಮೈನವಿರೇಳಿಸುವಂಥ ಘಟನೆಯು ನಡೆದಿದ್ದು 23ನೇ ಸೆಪ್ಟೆಂಬರ್ 1918ರಂದು. ಸರಿಯಾಗಿ 99 ವರ್ಷಗಳ ಹಿಂದೆ. ಈ ಘಟನೆಯ ಸ್ಮರಣಾರ್ಥವಾಗಿ ಬೆಂಗಳೂರಿನ ಜೆಸಿ ನಗರದಲ್ಲಿ ಮೈಸೂರು ಲ್ಯಾನರ್ಸ್ ಸ್ಮಾರಕವನ್ನು ನಿರ್ಮಿಸಲಾಗಿದೆ. ಮುಂದಿನ ವರ್ಷ ಈ ಐತಿಹಾಸಿಕ ಘಟನೆಯ ಶತಮಾನೋತ್ಸವ.

99th victory day celebration of Mysore Lancers

ಮೊದಲನೇ ವಿಶ್ವ ಯುದ್ಧ(1914-18)ದಲ್ಲಿ ಬ್ರಿಟಿಷರ ಸೈನ್ಯದ ಭಾಗವಾಗಿ ಹೋರಾಡಿದ ಕನ್ನಡದ ಕಟ್ಟಾಳುಗಳ ಸೈನ್ಯವೇ "ಮೈಸೂರು ಲ್ಯಾನ್ಸರ್ಸ್". ಅಂದು ಇಸ್ರೇಲ್ ಸೈನ್ಯದ ಪರ ಹೋರಾಡುತ್ತಾ ಮೈಸೂರ್ ಲ್ಯಾನ್ಸರ್ಸ್ ಸೈನ್ಯವು ಅಟೋಮನ್ ಟರ್ಕರ ಮತ್ತು ಜರ್ಮನ್ನರ ಸೈನ್ಯವನ್ನು ಸೋಲಿಸಿ ಹೈಫಾ ನಗರವನ್ನು ವಶಪಡಿಸಿಕೊಂಡು ಇಸ್ರೇಲಿನ ಸುಪರ್ದಿಗೆ ನೀಡುತ್ತದೆ.

ವಿಶ್ವಯುದ್ಧ II ವಿಜಯೋತ್ಸವ ದಿನ ರಾಣಿ ಎಲಿಜಬೆತ್ ಗೆ ಕಟಂಕವಿಶ್ವಯುದ್ಧ II ವಿಜಯೋತ್ಸವ ದಿನ ರಾಣಿ ಎಲಿಜಬೆತ್ ಗೆ ಕಟಂಕ

99th victory day celebration of Mysore Lancers

ಅಂದು ಬ್ರಿಟಿಷ್ ಜನರಲ್ ಆಗಿದ್ದ ಸರ್ ಎಡ್ಮಂಡ್ ಅಲೆನ್ಬಾಯ್ ಅವರು ಕೂಡಾ ತಮ್ಮ ಪುಸ್ತಕದಲ್ಲಿ ಹೈಫಾ ಸಿಟಿಯನ್ನು ವಶಪಡಿಸಿಕೊಳ್ಳುವಲ್ಲಿ ಮೈಸೂರು ಲ್ಯಾನ್ಸರ್ಸ್ ತೋರಿದ ಶೌರ್ಯವನ್ನು ವಿಶೇಷವಾಗಿ ಉಲ್ಲೇಖಿಸಿದ್ದಾರೆ.

99th victory day celebration of Mysore Lancers

ಅಂದು ಬ್ರಿಟಿಷರ ಸಾಮಂತ ರಾಜ್ಯವಾಗಿದ್ದ ಮೈಸೂರು ಸಂಸ್ಥಾನವೂ, ಬ್ರಿಟಿಷರ ಪರ ಮೊದಲನೇ ಮಹಾಯುದ್ಧದಲ್ಲಿ ಹೋರಾಡಲೆಂದು ಅಂದಿನ ಮೈಸೂರು ಸಂಸ್ಥಾನದ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜೇಂದ್ರ ವೊಡೆಯರ್ ಅವರು 5000 ಸೈನಿಕರನ್ನು, 50 ಲಕ್ಷ ನಗದನ್ನು ಬ್ರಿಟಿಷರಿಗೆ ನೀಡಿದ್ದರು.

ಭಾರತದ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರು ತಮ್ಮ ಇತ್ತೀಚಿನ ಇಸ್ರೇಲ್ ಭೇಟಿ ಸಂದರ್ಭದಲ್ಲಿ, ಇಸ್ರೇಲಿನ ಹೈಫಾ ನಗರದಲ್ಲಿರುವ ಭಾರತೀಯ ಸೈನಿಕರ ಸ್ಮಾರಕಕ್ಕೇ ಭೇಟಿ ನಮಸ್ಕರಿಸಿದ್ದನ್ನು ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

99th victory day celebration of Mysore Lancers

ಇಂದು ಹೈಫಾ ನಗರದ ವಿಮೋಚನೆಯ 99ನೇ ವರ್ಷಾಚರಣೆ ಅಂಗವಾಗಿ, ಬೆಂಗಳೂರಿನ ಜೆಸಿ ನಗರದಲ್ಲಿರುವ ಮೈಸೂರು ಲ್ಯಾನರ್ಸ್ ಸ್ಮಾರಕವನ್ನು ವಿಎಚ್ಎಸ್ (ವಿರಾಟ್ ಹಿಂದೂಸ್ತಾನ್ ಸಂಗಮ) ಸಂಘಟನೆಯ ಸದಸ್ಯರು ಬಣ್ಣ ಬಳಿದು, ಸ್ವಚ್ಛಗೊಳಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು.

ಕಾರ್ಯಕ್ರಮದಲ್ಲಿ ಸ್ಥಳೀಯ ಹೆಬ್ಬಾಳದ ಶಾಸಕ ವೈ.ಎನ್. ನಾರಾಯಣಸ್ವಾಮಿ, ಕಾರ್ಪೋರೇಟರ್ ಗಣೇಶ್ ರಾವ್ ಮಾನೆ ಮತ್ತು ವಿಎಚ್ಎಸ್ ನ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ನಾಗರೀಕರೂ ಭಾಗವಹಿಸಿದ್ದರು.

English summary
99th victory day celebration of Mysore Lancers of Maharaja of Mysuru in the liberation of Haifa City in Israel during first world war. Virat Hindustan Sangam Karnataka cleaned the memorial built in JC Nagar in Bengaluru to mark the historical occasion.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X