ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಇನ್ನೂ ಇವೆ 940 ನರಕ ಸದೃಶ ರಸ್ತೆ ಗುಂಡಿಗಳು

By Nayana
|
Google Oneindia Kannada News

ಬೆಂಗಳೂರು, ಜು.19: ಬೆಂಗಳೂರಿನಲ್ಲಿ 14 ಸಾವಿರ ಕಿ.ಮೀ ಉದ್ದದ 93 ಸಾವಿರ ರಸ್ತೆಗಳಿವೆ. ಈ ರಸ್ತೆಗಳಲ್ಲಿ ಮುಚ್ಚಲು ಬಾಕಿ ಇರುವ ಗುಂಡಿಗಳು ಕೇವಲ 940 ಮಾತ್ರ, ಬೆಂಗಳೂರು ನಗರದಲ್ಲಿ ರಸ್ತೆಗುಂಡಿಗಳ ಬಗ್ಗೆ ಬೃಹತ್ ಅಭಿಯಾನದ ನಂತರ ಗುಂಡಿಗಳನ್ನು ಮುಚ್ಚುವ ಮೂಲಕ ಗುಂಡಿ ಮುಕ್ತ ರಸ್ತೆ ನಿರ್ಮಾಣ ಮಾಡುವತ್ತ ಬಿಬಿಎಂಪಿ ಹೆಜ್ಜೆ ಇಟ್ಟಿದೆ.

ಈ ಕುರಿತು ನಗರಾಭಿವೃದ್ಧಿ ಸಚಿವ ಡಾ.ಜಿ. ಪರಮೇಶ್ವರ್ ಅವರು ಮುಚ್ಚಿರುವ ರಸ್ತೆ ಗುಂಡಿಗಳ ಅಂಕಿ ಅಂಶ ನೀಡಿದ್ದಾರೆ. ಕಳೆದ ಜೂನ್ 15 ರಂದು ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರೇ ಬಿಬಿಎಂಪಿಗೆ ನೇರ ದೂರು ನೀಡಲು ಸಹಾಯವಾಣಿ ತೆರೆಯಲಾಗಿತ್ತು.

ಬೆಂಗಳೂರಲ್ಲಿ 6 ಸಾವಿರ ರಸ್ತೆಗುಂಡಿ 10 ದಿನಗಳಲ್ಲಿ ಬಂದ್! ಬೆಂಗಳೂರಲ್ಲಿ 6 ಸಾವಿರ ರಸ್ತೆಗುಂಡಿ 10 ದಿನಗಳಲ್ಲಿ ಬಂದ್!

ಸಾಮಾಜಿಕ ಜಾಲತಾಣದಲ್ಲೂ ರಸ್ತೆಗುಂಡಿಗಳ ಚಿತ್ರ ತೆಗೆದು ಬಿಬಿಎಂಪಿ ನೀಡಿದ್ದ ಸಹಾಯವಾಣಿ ಹಾಗೂ ವಾಟ್ಸ್‌ಅಪ್ ಸಂಖ್ಯೆಗೆ ದೂರು ಸಲ್ಲಿಸಲು ಮನವಿ ಮಾಡಲಾಗಿತ್ತು. ಈ ಮೂಲಕ ರಸ್ತೆಗುಂಡಿ ಮುಂಚಿಸುವ ದೊಡ್ಡ ಮಟ್ಟದ ಆಂದೋಲನವನ್ನೇ ಮಾಡಲಾಗಿತ್ತು. ಎಂದಿದ್ದಾರೆ.

94 percent potholes filled in B’luru, says DCM

ಆಂದೋಲನಕ್ಕೆ ಸಾಕಷ್ಟು ಸಾರ್ವಜನಿಕರು ಸ್ಪಂದಿಸಿದ್ದರು. ಸಾಕಷ್ಟು ಫೋಟೋಗಳು ಹಾಗೂ ದೂರುಗಳು ದಾಖಲಾಗಿದ್ದವು. ಈ ಎಲ್ಲವನ್ನು ಬಿಬಿಎಂಪಿ ಅಧಿಕಾರಿಗಳು ಸ್ವೀಕರಿಸಿ ಗುಂಡಿ ಮುಚ್ಚುವ ಕೆಲಸದಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ. ಈ ಹಿಂದೆ ಒಟ್ಟು 4944 ಗುಂಡಿಗಳನ್ನು ಮುಚ್ಚಿದ ಅಂಕಿ ಅಂಶ ನೀಡಲಾಗಿತ್ತು. ಈಗ

ಈ ಒಂದು ತಿಂಗಳ ಅವಧಿಯಲ್ಲಿ ಸಂಖ್ಯೆಯ ಗುಂಡಿಗಳನ್ನು ಮುಚ್ಚುವಲ್ಲಿ ಅಧಿಕಾರಿಗಳು ಹೆಚ್ಚು ಶ್ರಮವಹಿಸಿ, ಬಹುತೇಕ ಗುಂಡಿ ಮುಚ್ಚಿದ್ದಾರೆ. ಮಳೆಗಾಲದ ಸಂದರ್ಭದಲ್ಲಿ ರಸ್ತೆ ಗುಂಡಿಗಳ ಬಗ್ಗೆ ಸಾರ್ವಜನಿಕರು ದೂರು ಹೆಚ್ಚುತ್ತದೆ. ಹೀಗಾಗಿ ಇದಕ್ಕು ಮುನ್ನವೇ ಗುಂಡಿ ಮುಚ್ಚುವ ಕೆಲಸವನ್ನು ಮಾಡಲಾಗುತ್ತಿದೆ.‌ ನಗರದ ಬಹುತೇಕ ಕಡೆ ಗುಂಡಿ ಬಿದ್ದಿದ್ದ ಬಗ್ಗೆ ಬಿಬಿಎಂಪಿಗೆ ದೂರುಗಳು ಬಂದಿವೆ. ಎಲ್ಲವನ್ನೂ ಕ್ರೂಢಿಕರಿಸಿ ಗುಂಡಿ ಮುಚ್ಚುವ ಕೆಲಸಕ್ಕೆ ಪ್ರಗತಿ ನೀಡಲಾಗಿದೆ ಎಂದಿದ್ದಾರೆ.

ನಗರದ ಬಹುತೇಕ ಕಡೆ ರಸ್ತೆ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಶಾಶ್ವತ ಪರಿಹಾರಕ್ಕೆ ಡೆಂಡರ್‌ಶ್ಯೂರ್; ರಸ್ತೆ ಗುಂಡಿಗಳನ್ನು‌ ಮುಚ್ಚುವುದು ಒಂದೆಡೆಯಾದರೆ, ಗುಂಡಿ ಬೀಳದಂಥ ರಸ್ತೆ ನಿರ್ಮಾಣ ಕಾರ್ಯ ಕೂಡ ನಡೆಯುತ್ತಿದೆ.

ಈಗಾಗಲೇ 12 ರಸ್ತೆಗಳನ್ನು ಡೆಂಡರ್‌ಶ್ಯೂರ್ ಯೋಜನೆಯಡಿ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ.‌ ಕಾಂಕ್ರಿಟ್ ರಸ್ತೆಯಿಂದ ಎಷ್ಟೇ ಮಳೆಯಾದರೂ ಬಹಳ ವರ್ಷ ರಸ್ತೆ ಹಾಳಾಗುವುದಿಲ್ಲ.‌ ಈ ಯೋಜನೆ ಎಲ್ಲ ರಸ್ತೆಗಳಲ್ಲೂ ನಿರ್ಮಾಣ ಮಾಡಲಾಗುತ್ತದೆ.‌ಅಲ್ಲಿಯವರೆಗೂ ಗುಂಡಿಗಳನ್ನು ಸಂಪೂರ್ಣ ಮುಚ್ಚುವ ಕೆಲಸವೂ ಪ್ರಗತಿಯಲ್ಲಿ ಇರಲಿದೆ.

ಎಲ್ಲಿಯಾದರೂ ರಸ್ತೆ ಗುಂಡಿಗಳು ಕಂಡು ಬಂದರೆ ಅದರ ಫೋಟೋ ತೆಗೆದು ಬಿಬಿಎಂಪಿಯ ಗಮನಕ್ಕೆ ತರಬಹುದು .

ಈವರೆಗೂ ಮುಚ್ಚಿರುವ ರಸ್ತೆ ಗುಂಡಿಗಳ ಅಂಕಿಅಂಶ
ಸ್ಥಳ - ಗುಂಡಿ - ಮುಚ್ಚಲಾದ ಗುಂಡಿಗಳು
ದಾಸರಹಳ್ಳಿ 945 - 905
ಪಶ್ಚಿಮ. 663 - 628
ಯಲಹಂಕ. 3902 - 3862
ಪೂರ್ವ. 2422 - 2263
ಮಹದೇವಪುರ. 839 - 501
ದಕ್ಷಿಣ. 3045 - 2910
ರಾಜರಾಜೇಶ್ವರಿ ನಗರ. 1587 - 1519
ಬೊಮ್ಮನಹಳ್ಳಿ 1836 - 1711

English summary
Bengaluru development minister G Parameshwara on Wednesday claimed 94% potholes in the city have been filled. Announcing the status of BBMP’s pothole-clearance drive across the city, he said the Palike has filled 14,299 of the 15,239 potholes identified.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X