ಬೆಂಗಳೂರಿನಲ್ಲಿ 907 ಮದ್ಯಂಗಡಿ ತೆರೆಯಲು ಸರ್ಕಾರದಿಂದ ಅನುಮತಿ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 09 : ಬೆಂಗಳೂರು ನಗರ ಜಿಲ್ಲೆಯಲ್ಲಿ ಒಟ್ಟು 907 ಮದ್ಯದಂಗಡಿಯನ್ನು ಆರಂಭಿಸಲು ಅನುಮತಿ ನೀಡಿರುವುದಾಗಿ ಅಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ ತಿಳಿಸಿದ್ದಾರೆ.

ಗುರುವಾರ ವಿಧಾನಪರಿಷತ್ತಿನಲ್ಲಿ ಮಾತನಾಡಿದ ಅವರು, 2017-18 ನೇ ಸಾಲಿನಲ್ಲಿ 907 ಮದ್ಯದಂಗಡಿ ತೆಗೆಯಲು ಅನುಮತಿ ನೀಡಲಾಗಿದೆ. ನಗರ ಮತ್ತು ಪಟ್ಟಣ ಪ್ರದೇಶದಲ್ಲಿ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗೆ ಹೊಂದಿಕೊಂಡರುವಂತೆ ಇರುವ 3566 ಮದ್ಯಂದಂಗಡಿ ಪರವಾನಗಿ ನವೀಕರಿಸಿ ಅನುಮತಿ ನೀಡಲಾಗಿದೆ ಎಂದರು.

ಬೇಕೇ ಬೇಕು ಬಾರ್ ಬೇಕು, ಮದ್ಯದಂಗಡಿಗಾಗಿ ಪ್ರತಿಭಟನೆ

ಸುಪ್ರೀಂಕೋರ್ಟ್ ಆದೇಶವು ಮುನ್ಸಿಪಲ್ ಪ್ರದೇಶಗಳಿಗೆ ಅನ್ವಯವಾಗುವುದಿಲ್ಲ ಎಂದು ಆದೇಶಿಸಿರುವ ಹಿನ್ನೆಲೆಯಲ್ಲಿ ಪರವಾನಗಿ ನವೀಕರಿಸಲಾಗಿದೆ ಎಂದು ತಿಳಿಸಿದರು. ಕಳೆದ 2016-17 ನೇ ಸಾಲಿನಲ್ಲಿ 440 ಎಂಎಸ್ ಐ ಎಲ್ ಶಾಪ್ 2017-18 ರಲ್ಲಿ 3893 ಮದ್ಯದಂಗಡಿ ಮತ್ತು ಎಂಎಸ್ ಐಎಲ್ ಶಾಪ್ ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಹೇಳಿದರು.

907 new liquor shop in Bengaluru

ಬೆಂಗಳೂರು ನಗರ ಜಿಲ್ಲೆ ಪೂರ್ವ 2017 , ಬೆಂಗಳೂರು ನಗರ ಜಿಲ್ಲೆ ಪಶ್ಚಿಮ 231 , ಬೆಂಗಳೂರು ನಗರ ಜಿಲ್ಲೆ ಉತ್ತರ 224 ಹಾಗೂ ಬೆಂಗಳೂರು ನಗರ ಜಿಲ್ಲೆ ದಕ್ಷಿಣ 245 ಮದ್ಯದಂಗಡಿ ತೆರೆಯಲು ಅನುಮತಿ ನೀಡಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Excise minister RB Thimmapur said that the government has given 907 permission for new liquor shops in Bengaluru urban districts in this financial year.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ