ಮೂರುಕೋಟಿ ಲಲಿತಾ ಸಹಸ್ರನಾಮ ಸಮರ್ಪಣಾ ಕಾರ್ಯಕ್ರಮ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 14: ಅಖಿಲ ಭಾರತ ಸತ್ಸಂಗ ಭಜನಾ ಮಹಾ ಮಂಡಳಿ ಸಭಾ 900 ದಿನಗಳಿಂದ ನಡೆಯುತ್ತಿರುವ ಮೂರು ಕೋಟಿ ಲಲಿತಾ ಸಹಸ್ರನಾಮ ವಿಷ್ಣು ಸಹಸ್ರನಾಮ, ಶಿವಸಹಸ್ರನಾಮ ಪಾರಾಯಣ, ಒಂದು ಕೋಟಿ ಹನುಮಾನ್ ಚಾಲೀಸ ಪಠಣ ಹಾಗೂ ಐದು ಲಕ್ಷ ಶಂಕರ ಅಷ್ಟೋತ್ತರ ಸಮರ್ಪಣಾ ಕಾರ್ಯಕ್ರಮವನ್ನು ಏ.16ರಂದು ಹಮ್ಮಿಕೊಂಡಿದೆ.

ಕಾರ್ಯಕ್ರಮವು ಶಂಕರಪುರಂನಲ್ಲಿರುವ ಶೃಂಗೇರಿ ಶಂಕರ ಮಠ ಆವರಣದಲ್ಲಿರುವ ವಿದ್ಯಾವಿಹಾರ ಸಭಂಗಣದಲ್ಲಿ ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಜರುಗಲಿದೆ.ಓಕಾಂರಾಶ್ರಮದ ಮಧುಸೂಧನಾನಂದಪುರಿ ಸ್ವಾಮೀಜಿ ಸಾನಿಧ್ಯವಹಿಸಲಿದ್ದಾರೆ. ಬೇಲಿಮಠದ ಚರಮೂರ್ತಿ ಶಿವರುದ್ರ ಸ್ವಾಮೀಜಿ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

900 days Lalita sahasranama will conclude on April 16

ಹೈಕೋರ್ಟ್ ನ ನಿವೃತ್ತ ನ್ಯಾಯಾಧೀಶ ನ್ಯಾ. ಎನ್. ಕುಮಾರ್, ಇಸ್ಕಾನ್ ನ ಕುಲಶೇಖರ ಚೈತನ್ಯ ದಾಸ, ಗಾಯಕ ಡಾ. ವಿದ್ಯಾಭೂಷಣ, ಅದಮ್ಯ ಚೇತನ ಅಧ್ಯಕ್ಷೆ ತೇಜಸ್ವಿನಿ ಅನಂತಕುಮಾರ್ ಕಾರ್ಯಕ್ರಮಕ್ಕೆ ಆಗಮಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿವೇಕಾನಂದ ಕೇಂದ್ರದ ವಿ ನಾಗರಾಜ್ ಮತ್ತು ವೃಂದದಿಂದ ದಶಾವತಾರ ನೃತ್ಯ ರೂಪಕ ಏರ್ಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
900 days long Lalita sahasranama will be concluded on April 16. Akhila Bharat Satsanga Bhajana Mahamandala has organised three crores sahasranama, one crore hanuman chaleesa and five lakhs Shankara's ashtottara at Shankara mutt in Shankarapuram.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ