ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು ಏರ್ ಪೋರ್ಟ್: 3 ತಿಂಗಳಲ್ಲಿ 80 ಲಕ್ಷ ಮಂದಿ ಪ್ರಯಾಣ

By Nayana
|
Google Oneindia Kannada News

ಬೆಂಗಳೂರು, ಆಗಸ್ಟ್ 7: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಸ ದಾಖಲೆ ಸೃಷ್ಟಿಸಿದೆ. ಈ ಸಾಲಿನ ಮೊದಲ ಮೂರು ತಿಂಗಳಲ್ಲಿ ಬರೋಬ್ಬರಿ 80 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ.

ಈ ಹಿಂದಿನ ಮೂರು ತಿಂಗಳಲ್ಲಿ 66 ಲಕ್ಷ ಮಂದಿ ಪ್ರಯಾಣಿಸಿದ್ದರು,ಶೇ.32.9ರ ಏರಿಕೆ ಕಂಡಿದೆ. ಅದೇ ರೀತಿ ಕಾರ್ಗೋ ನಿರ್ವಹಣೆಯಲ್ಲೂ ಶೇ.16.6ರಷ್ಟು ಏರಿಕೆಯಾಗಿದೆ. ಈ ಬಾರಿ 69 ಲಕ್ಷ ದೇಶೀಯ ಹಾಗೂ 11 ಲಕ್ಷ ಅಂತಾರಾಷ್ಟ್ರೀಯ ಪ್ರಯಾಣಿಸಕರು ಸೇರಿ 80 ಲಕ್ಷ ಮಂದಿ ಪ್ರಯಾಣ ಮಾಡಿದ್ದಾರೆ.

ಹೊಸ ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣಹೊಸ ದಾಖಲೆ ನಿರ್ಮಿಸಿದ ಕೆಂಪೇಗೌಡ ವಿಮಾನ ನಿಲ್ದಾಣ

ಅದರಲ್ಲೂ ಜೂನ್‌ 30ರಂದು ಒಂದೇ ದಿನ 98,869 ಮಂದಿ ಈ ಏರ್‌ಪೋರ್ಟ್‌ ಮೂಲಕ ಪ್ರಯಾಣಿಸಿದ್ದು ಸಾರ್ವಕಾಲಿಕ ದಾಖಲೆಯಾಗಿದೆ. ಬೇಸಿಗೆ ರಜೆ ಹಿನ್ನೆಲೆಯಲ್ಲಿ ಏರ್‌ಲೈನ್ಸ್‌ ಕಂಪನಿಗಳು ಅನೇಕ ಕೊಡುಗೆಗಳನ್ನು ನೀಡಿದ್ದವು, ಹೀಗಾಗಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾಗಿದೆ ಎನ್ನಲಾಗಿದೆ.

80 lakhs passengers traveled through KIAL in three months only

ಕಾರ್ಗೋ ಸಾಗಣೆಯಲ್ಲೂ ಏರಿಕೆ ಕಂಡಿದ್ದು, 3 ತಿಂಗಳಲ್ಲಿ 97,486 ಮೆಟ್ರಿಕ್‌ ಟನ್‌ ಸರಕು ಸಾಗಣೆಯಾಗಿದೆ. ಕಳೆದ ಸಾಲಿನಲ್ಲಿ 83,584 ಮೆಟ್ರಿಕ್‌ ಟನ್‌ ಇತ್ತು. ಇದೇ ವೇಳೆ ಏರ್‌ ಟ್ರಾಫಿಕ್‌ ಮೂವ್‌ಮೆಂಟ್‌ನಲ್ಲೂ ಶೇ.32.9ರಷ್ಟು ಪ್ರಗತಿ ಕಂಡಿದೆ.

58,054 ವಿಮಾನಗಳು ಟೇಕ್‌ ಆಫ್‌, ಲ್ಯಾಂಡಿಂಗ್‌ ಆಗಿವೆ. ಹೊಸ ತಂತ್ರಜ್ಞಾನದ ಮೂಲಕ ನಿರ್ವಹಣೆಯನ್ನು ಸರಳಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಹೊಂದಲಿದ್ದೇವೆ ಎಂದು ಏರ್‌ಪೋರ್ಟ್‌ ಸಿಇಒ ಹರಿ ಮರಾರ್‌ ತಿಳಿಸಿದ್ದಾರೆ.

English summary
Kempegowda international airport has recorder 32 percent of growth cooperatively last year in the first quarter of 2018-19. Around 80 lakhs passengers have traveled through KIAL in three months only, report said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X