ಟ್ರಾಫಿಕ್ ನಿಯಂತ್ರಣಕ್ಕೆ ಬೆಂಗಳೂರಿನ 8 ಶಾಲೆಗಳ ಹಣ

Written By:
Subscribe to Oneindia Kannada

ಬೆಂಗಳೂರು, ಆಗಸ್ಟ್ 27: ಬೆಂಗಳೂರಿನ ಎಂಟು ಶಾಲೆಗಳು ಒಟ್ಟಾಗಿ ಮಾದರಿ ಕಾರ್ಯಕ್ರಮವೊಂದನ್ನು ಕೈಗೆತ್ತಿಕೊಂಡಿವೆ. ವರ್ತೂರು ಸಮೀಪದ ಶಾಲೆಗಳು ತಲಾ ಮೂರು ಲಕ್ಷ ರು. ದೇಣಿಗೆ ನೀಡಿ ಟ್ರಾಫಿಕ್ ಸಿಗ್ನಲ್ ಅಳವಡಿಕೆ ಮಾಡಲು ಮುಂದಾಗಿವೆ.

ಒಟ್ಟು ಎಂಟು ಶಾಲೆಗಳು 24 ಲಕ್ಷ ರು. ಹಣವನ್ನು ಸಿಗ್ನಲ್ ಅಳವಡಿಕೆಗೆ ವೆಚ್ಚ ಮಾಡಲಿವೆ. ವರ್ತೂರು ಕೋಡಿ, ದೊಡ್ಡಬೊಮ್ಮಸಂದ್ರ ಭಾಗದ ಟ್ರಾಫಿಕ್ ನಿರ್ವಹಣೆಗೆ ಶಾಲೆಗಳೆ ಸ್ವತಃ ಮುಂದಾಗಿವೆ.[ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಮೂಲ ಯಾರು ?]

traffic

ಕ್ರಿಸಾಲಿಸ್ ಹೈ, ಡೀನ್ಸ್ ಅಕಾಡೆಮಿ, ಡಿಪಿಎಸ್ ಬೆಂಗಳೂರು ಪೂರ್ವ, ಗ್ಲೊಬಲ್ ಇಂಟರ್ ನ್ಯಾಶನಲ್ ಸ್ಕೂಲ್, ಗ್ರೀನ್ ವುಡ್ ಹೈ ಇಂಡಸ್ ಇಂಟರ್ ನ್ಯಾಶನಲ್, ಓಕ್ರಿಡ್ಜ್ ಇಂಟರ್ ನ್ಯಾಶನಲ್, ಮತ್ತು ಇನ್ವೆಂಚರ್ ಅಕಾಡೆಮಿ ಶಾಲೆಗಳು ಹಣ ತೊಡಗಿಸಲು ಮುಂದಾಗಿವೆ.[ವಾಹನ ಚಾಲನಾ ಪರವಾನಗಿ ಶುಲ್ಕದಲ್ಲಿ ಭಾರೀ ಹೆಚ್ಚಳ?]

ಬೆಂಗಳೂರಿನ ಎಂಟು ಖಾಸಗಿ ಶಾಲೆಗಳು ಮಾದರಿ ಕೆಲಸಕ್ಕೆ ಮುಂದಾಗಿದ್ದು ಇದಕ್ಕೆ ಬಿಬಿಎಂಪಿ ಆಡಳಿತ ಮತ್ತು ನಾಗರಿಕರು ಸ್ಪಂದನೆ ನೀಡಿದರೆ ಯಶಸ್ಸು ಸಿಗುವುದರಲ್ಲಿ ಅನುಮಾನವಿಲ್ಲ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru: A group of schools near Varthur have come forward to fix traffic lights. Nearly eight schools contributed Rs 3 lakh each to install signals at busy locations in the area. The signals at Varthur Kodi and Dommasandra Circle serve to regulate traffic on an important corridor through which thousands of schoolchildren pass daily. Eight schools together funded Rs 24 lakh and installed traffic signals to ease traffic movement on these important junctions.
Please Wait while comments are loading...