ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು : ಬಲವಂತದಿಂದ 700 ವಲಸಿಗರ ಕುಟುಂಬ ಎತ್ತಂಗಡಿ

|
Google Oneindia Kannada News

ಬೆಂಗಳೂರು, ಡಿಸೆಂಬರ್ 03 : ಬೆಂಗಳೂರಿನ ಪೂರ್ವ ಭಾಗದಲ್ಲಿ ಶೆಡ್‌ಗಳಲ್ಲಿ ವಾಸಿಸುತ್ತಿದ್ದ 700ಕ್ಕೂ ಅಧಿಕ ವಲಸಿಗರನ್ನು ಎತ್ತಂಗಡಿ ಮಾಡಲಾಗಿದೆ. ಬಲವಂತವಾಗಿ ಅವರ ಗುಡಿಸಲುಗಳನ್ನು ನಾಶ ಮಾಡಲಾಗಿದ್ದು, ಮಹಿಳೆಯರು, ಮಕ್ಕಳು, ವೃದ್ಧರ ಬದುಕು ಅತಂತ್ರವಾಗಿದೆ.

ದೇವರಬೀಸನಹಳ್ಳಿ, ವರ್ತೂರು, ಕರಿಯಮ್ಮನ ಅಗ್ರಹಾರ, ಬೆಳ್ಳಂದೂರು ಸೇರಿದಂತೆ ಅಕ್ಕಪಕ್ಕದ ಪ್ರದೇಶಗಳಲ್ಲಿ ವಾಸವಾಗಿದ್ದ ವಲಸಿಗರನ್ನು ಬಲವಂತವಾಗಿ ಖಾಲಿ ಮಾಡಿಸಲಾಗಿದೆ. ನವೆಂಬರ್ 30ರಂದು ಜೆಸಿಬಿ ಮೂಲಕ ಗುಡಿಸಲು ನಾಶ ಮಾಡಲಾಗಿದ್ದು, ಬೇರೆ ಜಾಗಕ್ಕೆ ತೆರಳುವಂತೆ ಸೂಚನೆ ನೀಡಲಾಗಿದೆ.

ಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿಅಕ್ರಮ ಬಾಂಗ್ಲಾ ವಲಸಿಗರು, ರೋಹಿಂಗ್ಯಾ ಮುಸಲ್ಮಾನರನ್ನು ಗಡಿಪಾರು ಮಾಡಿ

ಪಶ್ಚಿಮ ಬಂಗಾಳ, ಒಡಿಸ್ಸಾ, ಬಾಂಗ್ಲಾದೇಶದಿಂದ ಬಂದ ನೂರಾರು ವಲಸಿಗರು ಗುಡಿಸಲುಗಳಲ್ಲಿ ನೆಲೆಸಿದ್ದರು. ಇವರಿಂದಾಗಿ ಈ ಪ್ರದೇಶದ ಸುತ್ತಮುತ್ತಲು ಅಪರಾಧ ಪ್ರಕರಣಗಳು ಹೆಚ್ಚಾಗಿವೆ ಎಂಬ ದೂರುಗಳಿತ್ತು. ಆದ್ದರಿಂದ, ಎಲ್ಲರನ್ನು ಎತ್ತಂಗಡಿ ಮಾಡಿಸಲಾಗಿದೆ.

ಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ಎಚ್ಡಿಕೆ ಕೊಟ್ಟ ವಿವರಬೆಂಗಳೂರಲ್ಲಿ ಅಕ್ರಮ ಬಾಂಗ್ಲಾ ವಲಸಿಗರು, ಎಚ್ಡಿಕೆ ಕೊಟ್ಟ ವಿವರ

700 migrant families evicted from labour sheds

ಸುಮಾರು 700 ಕುಟುಂಬಗಳಲ್ಲಿ 7 ಸಾವಿರಕ್ಕೂ ಅಧಿಕ ಜನರಿದ್ದರು. ಮಹಿಳೆಯರು, ಮಕ್ಕಳು, ವೃದ್ಧರು ಸಹ ಸೇರಿದ್ದರು. ವಿಧಾನಸಭೆ ಚುನಾವಣೆ ಸಮಯದಲ್ಲಿ ಇವರಿಗೆ ವೋಟರ್ ಐಡಿ ನೀಡಿ, ನಕಲಿ ಮತದಾನವನ್ನು ಮಾಡಿಸಲಾಗಿದೆ ಎಂಬ ಆರೋಪವೂ ಇದೆ.

ಅಕ್ರಮ ಶಸ್ತ್ರಾಸ್ತ್ರ: ಬೆಂಗಳೂರಲ್ಲಿ 13 ಬಾಂಗ್ಲರ ಬಂಧನಅಕ್ರಮ ಶಸ್ತ್ರಾಸ್ತ್ರ: ಬೆಂಗಳೂರಲ್ಲಿ 13 ಬಾಂಗ್ಲರ ಬಂಧನ

ವಿಧಾನಸಭೆ ಚುನಾವಣೆಯಲ್ಲಿ ಇವರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿದ್ದರು ಎಂಬ ವಿಚಾರ ಸ್ಥಳೀಯ ಬಿಜೆಪಿ ನಾಯಕರಿಗೆ ತಿಳಿದಿತ್ತು. ಇದರಿಂದ ಆಕ್ರೋಶಗೊಂಡ ಸ್ಥಳೀಯ ನಾಯಕರು ಅವರನ್ನು ಎತ್ತಂಗಡಿ ಮಾಡಿಸಿದ್ದಾರೆ ಎಂಬ ದೂರುಗಳು ಇವೆ.

700 migrant families evicted from labour sheds

ನವೆಂಬರ್ 30ರಂದು ಸಂಜೆ ಜೆಸಿಬಿಗಳ ಸಹಾಯದಿಂದ ಗುಡಿಸಲುಗಳನ್ನು ನಾಶ ಮಾಡಲಾಗಿದ್ದು, ಅಕ್ಕ-ಪಕ್ಕದ ಶೆಡ್‌ಗಳಲ್ಲಿ ಉಳಿದುಕೊಂಡು ಜನರು ರಾತ್ರಿ ಕಳೆದಿದ್ದಾರೆ. ಸೋಮವಾರದ ಬಳಿಕ ಈ ಸ್ಥಳದಲ್ಲಿ ಇರಬಾರದು ಎಂದು ಎಚ್ಚರಿಕೆಯನ್ನು ನೀಡಲಾಗಿದೆ.

English summary
700 migrant families from West Bengal, Odisha and Bangladesh living in labour sheds at East Bengaluru have been forcefully evicted. migrant staying in Devarabeesanahalli, Varthur, Kariyammana Agrahara, Munekolala and Bellandur.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X