ಭೀಮರತಿ ಶಾಂತಿ ಕಾರ್ಯಕ್ರಮದಲ್ಲಿ ಡಾ.ಜಿ. ಪರಮೇಶ್ವರ

Posted By:
Subscribe to Oneindia Kannada

ಬೆಂಗಳೂರು. ಡಿಸೆಂಬರ್ 22: ಗುರುವಾರ ಬೆಳ್ಳಂಬೆಳಗ್ಗೆ ಜಯನಗರದ ಕುಚಲಾಂಬಾಳ್ ಕಲ್ಯಾಣ ಮಹಲ್ ಬಳಿ ಪೊಲೀಸರೇ ಪೊಲೀಸರು. ಗೃಹಸಚಿವರು ಬರ್ತಾರ ಎಂದು ಜನರು ಮಾತನಾಡಿಕೊಳ್ಳುತ್ತಿದ್ದರು. ತಮ್ಮ ಸ್ನೇಹಿತರ ಕಾರ್ಯಕ್ರಮಕ್ಕೆ ಬರದೇ ಇರ್ತಾರ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದರು. ಇದ್ದಕ್ಕಿದ್ದಂತೆ ಆಗಮಿಸಿದ ಗೃಹಸಚಿವ ಡಾ. ಜಿ ಪರಮೇಶ್ವರ ಡಾ,ಎಂ.ಎಸ್ ಪ್ರಕಾಶ್ ಮತ್ತು ಸುನಿತಾ ಪ್ರಕಾಶ್ ದಂಪತಿಗಳ 70ನೇ ವರ್ಷದ ಭೀಮರತಿ ಶಾಂತಿ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಜಯನಗರ ನಾಲ್ಕನೇ ಬ್ಲಾಕಿಗೆ ಹೋಗುವ ದಾರಿಯಲ್ಲೆಲ್ಲಾ ಪೊಲೀಸರೇ ಪೊಲೀಸರು. ವಾಹನದ ಓಡಾಟಕ್ಕೆ ತುಸು ಕಷ್ಟವೇ ಆಗಿತ್ತು. ಮೊದಲೇ ಇರುವ ಟ್ರಾಫಿಕ್ ನೊಂದಿಗೆ ಪೊಲೀಸರು ನಮಗೆ ಕಾಟ ಕೊಡ್ತಾರೆ ಎಂದು ಸಾರ್ವಜನಿಕರು ಬೇಸರಿಸಿಕೊಂಡರು.[ಸಿದ್ದರಾಮಯ್ಯ ಸಂಪುಟ ಸೇರುವ ಡಾ.ಜಿ.ಪರಮೇಶ್ವರ ಪರಿಚಯ]

70 year Bharati Worship Program Participant G. Parameshwar

ಕಾರ್ಯಕ್ರಮ ಏನು?
ಆರ್ ವಿ ಇನ್ ಸ್ಟಿಟ್ಯೂಟ್ ನ ಬೋರ್ಡ್ ಚೇರ್ಮನ್, ಬೆಂಗಳೂರು ಹಾಪ್ ಕಾಮ್ಸ್ ನಿರ್ದೇಶಕ, ಮಕ್ಕಳ ತಜ್ಞ ಡಾ. ಎಂ.ಎಸ್ ಪ್ರಕಾಶ್ ಮತ್ತು ಸುನಿತಾ ಪ್ರಕಾಶ್ ದಂಪತಿಗಳಿಗೆ 70ನೇ ವರ್ಷದ ಭೀಮರತಿ ಶಾಂತಿ ಕಾರ್ಯಕ್ರಮವನ್ನು ಕುಚಲಾಂಬಾಳ್ ಕಲ್ಯಾಣ ಮಹಲಿನಲ್ಲಿ ಏರ್ಪಡಿಸಲಾಗಿತ್ತು. ಸುಮಾರು 25 ವರ್ಷದ ಸ್ನೇಹಿತರಾಗಿದ್ದ ಡಾ. ಪ್ರಕಾಶ್ ಮತ್ತು ಜಿ.ಪರಮೇಶ್ವರ ಅವರು ತಮ್ಮ ಸ್ನೇಹದ ಆಮಂತ್ರಣವನ್ನು ಸ್ವೀಕರಿಸಿ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಿ ಶುಭ ಕೋರಿದರು. ಜೊತೆಯಲ್ಲಿ ಸಂಸದ ಮುದ್ದಹನುಮೇಗೌಡರು ಪ್ರಕಾಶ್ ದಂಪತಿಗಳ ಕ್ಷೇಮ ಸಮಾಚಾರ ವಿಚಾರಿಸಿದರು.

70 year Bharati Worship Program Participant G. Parameshwar

ಪೂಜಾ ಕಾರ್ಯಕ್ರಮ
ಜ್ಯೋತಿಷಿ ಡಾ. ಎಸ್.ಆರ್. ನರಸಿಂಹಮೂರ್ತಿಯವರ ನೇತೃತ್ವದಲ್ಲಿ ಎಪತ್ತು ವರ್ಷ ತುಂಬಿದ ಪ್ರಕಾಶ್ ದಂತಿಗಳಿಗೆ ಎಪತ್ತು ಕಲಶಗಳ ಪ್ರತಿಷ್ಠಾಪಿಸಿ ಶಾಂತಿ ಹೋಮ, ನವಗ್ರಹ ಹೋಮ, ಮೃತ್ಯುಂಜಯ ಹೋಮ, ಪ್ರಾಯಶ್ಚಿತ ಹೋಮ, ಸೂರ್ಯನಮಸ್ಕಾರ, ಮೃತ್ಯುಂಜಯ ಜಪ, ಶತರುದ್ರಾಭಿಷೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.

70 year Bharati Worship Program Participant G. Parameshwar

ಪ್ರಧಾನವಾಗಿ ಡಾ. ಎಸ್. ಆರ್. ನರಸಿಂಹಮೂರ್ತಿ, ಪ್ರೊ. ಕೃಷ್ಣಮೂರ್ತಿ ಬಾಯವಿ, ಪುತ್ತೂರಿನ ವಿದ್ವಾನ್ ನಾರಾಯಣ ಜೋಯಿಸ್ ಗೋಕರ್ಣದಿಂದ ಆಗಮಿಸಿದ್ದ ಚಂದ್ರಶೇಖರ ಭಟ್ಟ ಮಲಳೆಯವರು ಪುರೋಹಿತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
70 year Bharati Worship Program Participant G. Parameshwar

ಇನ್ನು ಕಾರ್ಯಕ್ರಮಕ್ಕೆ ಕಾರಸಗೋಡು ಎಡನೀರು ಮಠದ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ, ತಲಕಾಡು ಬಾಲಕೃಷ್ಣ ಮಠದ ಶ್ರೀ ಗೋವಿಂದಾನಂದ ಶ್ರೀಗಳು, ಮಾಜಿ ಸಚಿವ ಶ್ಯಾಮನೂರು ಶಿವಶಂಕರಪ್ಪ, ಕೇಂದ್ರ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಮುಂತಾದವರು ಆಗಮಿಸುವರು ಎಂದು ಜ್ಯೋತಿಷಿ ಎಸ್.ಆರ್. ನರಸಿಂಹಮೂರ್ತಿ ತಿಳಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
DR. praksh's family 70 year Bharati Worship Program Participant G. Parameshwar in kuchalambal kalyana mahal, jayanagara in bengaluru.
Please Wait while comments are loading...