ಬೆಂಗಳೂರಿನಲ್ಲಿನ ವಾಹನಗಳ ಸಂಖ್ಯೆ ಎಪ್ಪತ್ತು ಲಕ್ಷ, ಏರುತ್ತಲೇ ಇದೆ ದಟ್ಟಣೆ

Posted By:
Subscribe to Oneindia Kannada

ಬೆಂಗಳೂರು, ಜುಲೈ 10: ಎಪ್ಪತ್ತು ಲಕ್ಷ- ಹೌದು, ಎಪ್ಪತ್ತು ಲಕ್ಷ. ಇದು ಖಂಡಿತಾ ಬೆಂಗಳೂರಿನ ಜನಸಂಖ್ಯೆ ಅಲ್ಲ. ಹಾಗಿದ್ದರೆ ಏನು ಅಂತೀರಾ? ಇದು ಬೆಂಗಳೂರಿನಲ್ಲಿನ ವಾಹನಗಳ ಸಂಖ್ಯೆ.

ವಾಹನಗಳ ಸಂಖ್ಯೆಯು ಈ ವರ್ಷದ ಜೂನ್‌ ಕೊನೆಗೆ 70 ಲಕ್ಷದ ಗಡಿ ದಾಟಿದೆ. ಈ ಪೈಕಿ 48 ಲಕ್ಷ ದ್ವಿಚಕ್ರ ವಾಹನಗಳಿದ್ದರೆ, 14.40 ಲಕ್ಷ ಕಾರುಗಳಿವೆ.

ಬೆಂಗಳೂರು ಟ್ರಾಫಿಕ್ ಸಮಸ್ಯೆಯ ಮೂಲ ಯಾರು ?

ಅಂದಹಾಗೆ, ಕಳೆದ ಏಳು ವರ್ಷಗಳ ಅಂಕಿ-ಅಂಶ ಗಮನಿಸಿದರೆ ಪ್ರತಿ ವರ್ಷ ವಾಹನಗಳ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಈ ಪಾಟಿ ಸಂಖ್ಯೆ ಹೆಚ್ಚಿರುವುದರಿಂದಲೇ ವಾಹನ ನಿಲುಗಡೆಯ ಹಾಗೂ ದಟ್ಟಣೆಯ ಸಮಸ್ಯೆ ವಿಪರೀತ ಜಾಸ್ತಿಯಾಗುತ್ತಿದೆ.

Traffic

ಇನ್ನು ವಾಹನಗಳ ಸಂಖ್ಯೆ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ಮೆಟ್ರೊ ಸಂಚಾರ ಶುರುವಾಗಿದ್ದರೂ 2011-12ರಲ್ಲಿ 41.56 ಲಕ್ಷದಷ್ಟಿದ್ದ ವಾಹನಗಳ ಸಂಖ್ಯೆಯು ಈ ವರ್ಷದ ಜೂನ್‌ವರೆಗೆ 70.31 ಲಕ್ಷಕ್ಕೆ ಏರಿಕೆ ಆಗಿದೆ. ಆರು ವರ್ಷದಲ್ಲಿ ಇಪ್ಪತ್ತೆಂಟು ಲಕ್ಷ ವಾಹನಗಳು ಹೆಚ್ಚಾಗಿವೆ ಎಂದು ಸಂಖ್ಯೆಯನ್ನು ತೆರೆದಿಟ್ಟಿದ್ದಾರೆ.

ಇದನ್ನು ಅನುಕೂಲಕ್ಕೆ ಎನ್ನಬೇಕಾ ಎಂಬುದನ್ನು ನೀವೆ ನಿರ್ಧರಿಸಿ. ಏಕೆಂದರೆ ಇಎಂಐ, ಕಡಿಮೆ ಬಡ್ಡಿ ದರದ ಸಾಲಗಳು ಸಿಕ್ಕು ವಾಹನಗಳ ಖರೀದಿ ಸುಲಭವಾಗಿದೆ. ಆದ್ದರಿಂದಲೇ ಜನರು ಸ್ವಂತ ವಾಹನ ಹೊಂದಲು ಬಯಸುತ್ತಿದ್ದಾರೆ. ವರ್ಷವರ್ಷಕ್ಕೂ ವಾಹನಗಳ ನೋಂದಣಿ ಪ್ರಮಾಣ ಶೇ ಹನ್ನೆರಡರಷ್ಟು  ಹೆಚ್ಚುತ್ತಲೇ ಹೋಗುತ್ತಿದೆ.

ಜತೆಗೆ ಜಿಎಸ್ ಟಿ ಜಾರಿಯಾದ ಬಳಿಕ ಕೆಲವು ಕಾರುಗಳ ದರ ಮತ್ತಷ್ಟು ಕಡಿಮೆಯಾಗಿದೆ. ಆ ಕಾರಣಕ್ಕೆ ವಾಹನಗಳ ಸಂಖ್ಯೆ ಇನ್ನಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಭಿಪ್ರಾಯ ಪಡುತ್ತಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
At the end of June 2017 Bengaluru total vehicle number crosses 70 lakhs. This data revealed by RTO.
Please Wait while comments are loading...