7 ಕೇಜಿ ಚಿನ್ನ, 11 ಲಕ್ಷದಷ್ಟು ಬೆಳ್ಳಿ, 4 ಕೋಟಿ ನಗದು ವಶಕ್ಕೆ

Posted By: ಒನ್ಇಂಡಿಯಾ ಡೆಸ್ಕ್
Subscribe to Oneindia Kannada

ಬೆಂಗಳೂರು, ಏಪ್ರಿಲ್ 11: ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳ ಬಗ್ಗೆ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಂದ ಸಂಗ್ರಹಿಸಿದ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸಲಾಗಿದೆ.

ಅಂದಹಾಗೆ, 1,156 ಫ್ಲೈಯಿಂಗ್ ಸ್ಕ್ವಾಡ್ಸ್ ಮತ್ತು 1,255 ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಕಳೆದ 24 ಗಂಟೆಗಳಲ್ಲಿ 9,12,130 ರುಪಾಯಿ ನಗದು, ರು. 1,70,80,000 ಮೌಲ್ಯದ 7 ಕೆ.ಜಿ. 303 ಗ್ರಾಂ ಚಿನ್ನ, ರು. 11,47,200 ಮೌಲ್ಯದ ಬೆಳ್ಳಿ, 54 ಸೀರೆ, ರು. 9,00,000 ಮೊತ್ತದ 2 ವಾಹನಗಳನ್ನು ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ವಶಪಡಿಸಿಕೊಂಡಿವೆ.

ಕರ್ನಾಟಕ ಚುನಾವಣೆ : ಬಿಜೆಪಿ ಅಭ್ಯರ್ಥಿಗಳ ಪಟ್ಟಿ

ಒಟ್ಟಾರೆಯಾಗಿ ಸ್ಟಾಟಿಕ್ ಸರ್ವೆಲೆನ್ಸ್ ತಂಡಗಳು ರು. 4,16,95,070 ನಗದು, ರು. 1,70,80,000 ಮೌಲ್ಯದ 7 ಕೆ.ಜಿ. 303 ಗ್ರಾಂ ಚಿನ್ನ, ರು. 11,47,200 ಮೌಲ್ಯದ ಬೆಳ್ಳಿ, 4.5 ಲೀಟರ್ ಮದ್ಯ, ವಾಹನಗಳು ಮತ್ತಿತರ ವಸ್ತುಗಳು ಸೇರಿದಂತೆ ರು. 13,23,2,772 ಮೌಲ್ಯದ ವಸ್ತುಗಳನ್ನು ಮುಟ್ಟುಗೋಲು ಹಾಕಿಕೊಂಡಿವೆ.

Cash

ಇನ್ನು ಕಳೆದ 24 ಗಂಟೆಗಳಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಗಳು ರು. 4,79,900 ನಗದು, ರು.16,132 ಮೌಲ್ಯದ 50.140 ಲೀಟರ್ ಮದ್ಯ, ರು. 1,38,600 ಮೌಲ್ಯದ 2 ವಾಹನ ಮತ್ತು ಕುಕ್ಕರ್ ಬಾಕ್ಸ್ ಗಳನ್ನು ಮತ್ತು ರು.10,000 ಮೌಲ್ಯದ ಕರಪತ್ರಗಳನ್ನು ವಶಪಡಿಸಿಕೊಂಡಿವೆ.

ಒಟ್ಟಾರೆಯಾಗಿ ರು.59,32,250 ನಗದು, 523.785 ಲೀಟರ್ ಮದ್ಯ ಮತ್ತು ರು.9,98,05,100 ಮೌಲ್ಯದ ಇತರೆ ವಸ್ತುಗಳು, ರು. 92,96,560 ಮೌಲ್ಯದ 27 ವಾಹನಗಳನ್ನು ವಶಪಡಿಸಿಕೊಂಡಿವೆ.

ಇತರೆ ಪೊಲೀಸ್ ಪ್ರಾಧಿಕಾರಗಳು ರು.7,00,000 ನಗದು, 10 ಸೀರೆ, 160 ಲ್ಯಾಪ್ ಟಾಪ್ ಮತ್ತು 485 ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದೆ. ಒಟ್ಟಾರೆ ಫ್ಲೈಯಿಂಗ್ ಸ್ಕ್ವಾಡ್ ಗಳ ತಂಡ ಇತರೆ ಪೊಲೀಸ್ ಪ್ರಾಧಿಕಾರಗಳು ರು. 4,83,27,320 ನಗದನ್ನು ವಶಪಡಿಸಿಕೊಂಡಿವೆ.

ಫ್ಲೈಯಿಂಗ್ ಸ್ಕ್ವಾಡ್ ಗಳ ತಂಡ ಮತ್ತು ಇತರೆ ಪೊಲೀಸ್ ಪ್ರಾಧಿಕಾರಗಳು ನೀತಿ ಸಂಹಿತೆ ಉಲ್ಲಂಘನೆಗೆ ಸಂಬಂಧಿಸಿದಂತೆ ಕಳೆದ 24 ಗಂಟೆಗಳಲ್ಲಿ 10 ಪ್ರಕರಣಗಳಲ್ಲಿ ಎಫ್‍ ಐಆರ್ ದಾಖಲಿಸಿವೆ. ಒಟ್ಟಾರೆಯಾಗಿ ಫ್ಲೈಯಿಂಗ್ ಸ್ಕ್ವಾಡ್ ಗಳು 216 ಪ್ರಕರಣಗಳಲ್ಲಿ ಎಫ್‍ ಐಆರ್ ದಾಖಲಿಸಿದೆ. ಎಸ್‍ ಎಸ್‍ ಟಿಗಳು ನಗದು ಮತ್ತಿತರ ವಸ್ತುಗಳಿಗೆ ಸಂಬಂಧಿಸಿದಂತೆ 6 ಪ್ರಕರಣಗಳೂ ಸೇರಿದಂತೆ ಒಟ್ಟು 53 ಪ್ರಕರಣಗಳಲ್ಲಿ ಎಫ್‍ ಐಆರ್ ದಾಖಲಿಸಿವೆ.

1293 ಪರವಾನಗಿ ಹೊಂದಿದ ಶಸ್ತ್ರಾಸ್ರ್ತಗಳನ್ನು ವಶಕ್ಕೆ ಪಡೆಯಲಾಗಿದೆ. ಕಳೆದ 24 ಗಂಟೆಗಳಲ್ಲಿ 1079 ಮಂದಿಯಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ ಹಾಗೂ 1864 ಜಾಮೀನು ರಹಿತ ವಾರೆಂಟ್ ಗಳನ್ನು ಹೊರಡಿಸಲಾಗಿದೆ. ಸಿಆರ್ ಪಿಸಿ ಕಾಯ್ದೆಯಡಿ 629 ಪ್ರಕರಣಗಳನ್ನು, 858 ನಾಕಾಗಳನ್ನು ಕಾರ್ಯ ನಿರ್ವಹಿಸುವಂತೆ ಮಾಡಲಾಗಿದೆ. ಒಟ್ಟಾರೆ 63,178 ಶಸ್ತ್ರಾಸ್ರ್ತಗಳನ್ನು ವಶಪಡಿಸಿಕೊಳ್ಳಲಾಗಿದೆ.

4 ಶಸ್ತ್ರಾಸ್ತ್ರದ ಪರವಾನಗಿ ರದ್ದುಪಡಿಸಿದ್ದು, ಒಟ್ಟು 95,329 ಶಸ್ತ್ರಾಸ್ತ್ರಗಳ ಪೈಕಿ 94,455 ಶಸ್ತ್ರಾಸ್ತ್ರಗಳನ್ನು ಈವರೆಗೆ ವಶಕ್ಕೆ ಪಡೆದಿದ್ದು, 50 ಶಸ್ತ್ರಾಸ್ರ್ತಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. 4 ಶಸ್ತ್ರಾಸ್ತ್ರ ಪರವಾನಗಿಯನ್ನು ರದ್ದುಗೊಳಿಸಲಾಗಿದ್ದು, ಸಿಆರ್ ಪಿಸಿ ಕಾಯ್ದೆಯಡಿಯಲ್ಲಿ 10,537 ಪ್ರಕರಣಗಳನ್ನು ದಾಖಲಿಸಲಾಗಿದೆ ಹಾಗೂ 8840 ವ್ಯಕ್ತಿಗಳಿಂದ ಮುಚ್ಚಳಿಕೆಯನ್ನು ಪಡೆಯಲಾಗಿದೆ. 17,917 ಜಾಮೀನು ರಹಿತ ವಾರೆಂಟ್ ಗಳನ್ನು ಈವರೆಗೆ ಹೊರಡಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Assembly Elections 2018: 7 KG gold, more than 4 crore cash, 11 lakhs worth of silver seized for election code of conduct violation. FIR registered. Election Commission provide all the information to media.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ