ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ 68ಕಿ.ಮೀ ಎಲಿವೇಟೆಡ್ ರೈಲ್ವೆ ಹಳಿ : ಪಿಯೂಷ್ ಗೋಯಲ್

By Nayana
|
Google Oneindia Kannada News

ಬೆಂಗಳೂರು, ಮೇ 10: ಬೆಂಗಳೂರಿನಲ್ಲಿ 68 ಕಿ.ಮೀ ಉದ್ದದ ಎಲಿವೇಟೆಡ್ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗುತ್ತದೆ. ಅದರ ಮೂಲಕ ಉಪನಗರ ರೈಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ನಗರದಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಆದ್ದರಿಂದ ಉಪನಗರ ರೈಲ್ವೆ ಯೋಜನೆಗೆ ಅಗತ್ಯವಿರುವಷ್ಟು ಭೂಮಿ ಖರೀದಿಸಲು ಆರ್ಥಿಕ ಸಮಸ್ಯೆ ಎದುರಾಗಲಿದೆ. ಹಾಗಾಗಿ ಎಲಿವೇಟೆಡ್ ರೈಲು ಮಾರ್ಗ ನಿರ್ಮಿಸಲಾಗುತ್ತದೆ. ಈ ನಿಟ್ಟಿನಲ್ಲಿ ಸುಮಾರು 92 ಕಿ.ಮೀ ಭೂ ಮಾರ್ಗದ ಮೂಲಕ ರೈಲ್ವೆ ಹಳಿಗಳನ್ನು ನಿರ್ಮಿಸಲಾಗುತ್ತದೆ. ಉಳಿದಂತೆ 68ಕಿ.ಮೀ ದೂರ ಎಲಿವೇಟೆಡ್ ರೈಲು ಮಾರ್ಗವನ್ನು ನರ್ಮಿಸಲಾಗುವುದು ಎಂದರು.

 ಜೂನ್ ಅಂತ್ಯಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣ ವಿಸ್ತರಣೆ ಪೂರ್ಣ ಜೂನ್ ಅಂತ್ಯಕ್ಕೆ ಬೈಯಪ್ಪನಹಳ್ಳಿ ರೈಲು ನಿಲ್ದಾಣ ವಿಸ್ತರಣೆ ಪೂರ್ಣ

ನಗರಕ್ಕೆ 1994 ರಲ್ಲೇ ಉಪನಗರ ರೈಲ್ವೆ ಯೋಜನೆಯನ್ನು ಘೋಷಣೆ ಮಾಡಲಾಗಿತ್ತು. ಆದರೆ ರಾಜಕೀಯ ತೇತಾರರ ನಿರ್ಲಕ್ಷ್ಯದಿಂದಾಗಿ ಯೋಜನೆ ಅನುಷ್ಠಾನಗೊಂಡಿರಲಿಲ್ಲ. ಕಳೆದ ಎಂಟು ತಿಂಗಳ ಹಿಂದೆ ಯೋಜನೆಯನ್ನು ತ್ವರಿತವಾಗಿ ಅನುಷ್ಠಾನಗೊಳಿಸಲು ಕ್ರಮ ಕೈಗೊಂಡಿದ್ದೇವೆ.

68 km elevated rail track in Bengaluru

ಇದರ ಹಿಂದೆ ಕೇಂದ್ರ ಸಚಿವರಾದ ಡಿ.ವಿ. ಸದಾನಂದ ಗೌಡರು, ಅನಂತ ಕುಮಾರ್ ಅವರ ಪರಿಶ್ರಮವಿದೆ. ಯೋಜನೆ ಪೂರ್ಣಗೊಂಡ ನಂತರ ಈ ಮಾರ್ಗಗಳಲ್ಲಿ ಹವಾನಿಯಂತ್ರಿತ ರೈಲುಗಳ ಚಾಲನೆಗೆ ಕ್ರಮ ಜರುಗಿಸಲಾಗುವುದು ಎಂದು ಎಂದರು.

ಬೆಂಗಳೂರು ಕೇವಲ ಮಾಹಿತಿ ತಂತ್ರಜ್ಞಾನ ರಾಜಧಾನಿಯಾಗದೆ, ಹೊಸ ಆವಿಷ್ಕಾರ ರಾಜಧಾನಿ ಕೂಡ ಆಗಿದೆರ. ಜೈವಿಕ ತಂತ್ರಜ್ಞಾನ, ನ್ಯಾನೋ ತಂತ್ರಜ್ಞಾನ, ಇಂಟರ್‌ನೆಟ್‌ ಹಾಗೂ ರೋಬೋಟಿಕ್ ತಂತ್ರಜ್ಞಾನ ಸೇರಿದಂತೆ ಎಲ್ಲಾ ವೈಜ್ಞಾನಿಕ ಆವಿಷ್ಕಾರಗಳ ತಾಣ ಬೆಂಗಳೂರು ಆಗಿದೆ.

English summary
Railway minister Piyush Goyal said to avoid heavy investment in the land acquisition for suburban railway project in Bangalore city, there will be 68 kms of elevated track will be construct in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X