ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಾಜರಾತಿ ಕೊರತೆ: ಎಂವಿಜೆ ಕಾಲೇಜಿನ 67 ವಿದ್ಯಾರ್ಥಿಗಳ ಪರೀಕ್ಷೆಗೆ ತಡೆ

ಬೆಂಗಳೂರಿನ ವೈಟ್ ಫೀಲ್ಡ್ ನ ಎಂ ವಿ ಜೆ (ಎಂ.ವಿ.ಜಯರಾಮ) ಇಂಜಿನಿಯರಿಂಗ್ ಕಾಲೇಜಿನ 67 ವಿದ್ಯಾರ್ಥಿಗಳ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ತಡೆನೀಡಿದೆ.

|
Google Oneindia Kannada News

ಬೆಂಗಳೂರು, ಜೂನ್ 2: ಹಾಜರಾತಿ ಕಡಿಮೆ ಇರುವ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂಬ ಕಾರಣಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದ, ಬೆಂಗಳೂರಿನ ವೈಟ್ ಫೀಲ್ಡ್ ನ ಎಂ ವಿ ಜೆ (ಎಂ.ವಿ.ಜಯರಾಮ) ಇಂಜಿನಿಯರಿಂಗ್ ಕಾಲೇಜಿನ 67 ವಿದ್ಯಾರ್ಥಿಗಳ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ತಡೆನೀಡಿದೆ.

ತರಗತಿಗೆ ಹಾಜರಾಗುವಂತೆ ಹಲವು ಬಾರಿ ಎಚ್ಚರಿಕೆ ನೀಡಿದರೂ ಹಾಜರಾಗದ ವಿದ್ಯಾರ್ಥಿಗಳಿಗೆ ಹಾಜರಾತಿ ಕೊರತೆಯ ಕಾರಣದಿಂದ ಪರೀಕ್ಷೆ ಬರೆಯಲು ಅವಕಾಶ ನೀಡಿರಲಿಲ್ಲ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಪ್ರತಿಭಟನೆ ಆರಂಭಿಸಿದ್ದರು.[ವಿಟಿಯು ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ]

67 students of MVJ college of engineering detained by college management

ಈ ಸಮಯದಲ್ಲಿ ಕಾಲೇಜು ಚೇರ್ ಮನ್ ವಿದ್ಯಾರ್ಥಿಯೊಬ್ಬರ ಮೇಲೆ ಶೂ ಎಸೆದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದರು, ಅದಕ್ಕೆಂದೇ ನಾವು ರೊಚ್ಚಿಗೆದ್ದಿದ್ದೇವೆ ಎಂಬುದು ವಿದ್ಯಾರ್ಥಿಗಳ ಸಮಜಾಯಿಷಿ.

ಘಟನೆಗೆ ಸಂಬಂಧಿಸಿದಂತೆ ಕಾಲೇಜಿನ 6 ಸಿಬ್ಬಂದಿಗಳನ್ನು ಕಾಲೇಜು ಆಡಳಿತ ಮಂಡಳಿಯಿಂದ ಹೊರಹಾಕಲಾಗಿದ್ದು, ಏರೋನಾಟಿಕಲ್ ಇಂಜಿನಿಯರಿಂಗ್ ವಿಭಾಗದ 67 ವಿದ್ಯಾರ್ಥಿಗಳ ಪರೀಕ್ಷೆಗೆ ಕಾಲೇಜು ಆಡಳಿತ ಮಂಡಳಿ ತಡೆನೀಡಿದೆ.

English summary
67 aeronautical engineering students of MVJ college of engineering, White field Bengaluru have detained by college management. Students are protesting against college management's rule of not giving permission to write examination for the students who have low attendance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X