ನಮ್ಮ ಮೆಟ್ರೋ: 38 ನಿಲ್ದಾಣಗಳಲ್ಲಿ 66 ಎಸ್‌ಬಿಐ ಎಟಿಎಂ ಅಳವಡಿಕೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಮೆಟ್ರೋ ಪ್ರಯಾಣಿಕರ ಹಾಗೂ ನಾಗರಿಕರ ಅನುಕೂಲಕ್ಕಾಗಿ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬೆಂಗಳೂರು ನಗರದ 38 ಮೆಟ್ರೋ ನಿಲ್ದಾಣಗಳಲ್ಲಿ 66 ಎಟಿಎಂಗಳನ್ನು ತೆರೆಯಲಿದೆ.

ಈ ನಿಟ್ಟಿನಲ್ಲಿ ಎಸ್‌ಬಿಐ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಮೆಟ್ರೋ ನಿಗಮದ (ನಮ್ಮ ಮೆಟ್ರೋ) ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್‌ ಹಾಗೂ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಮುಖ್ಯ ಮಹಾಪ್ರಬಂಧಕ ಎಸ್‌.ಎಂ. ಫಾರೂಕ್ ಶಾಹಬ್ ಅವರು ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ.

ನಮ್ಮ ಮೆಟ್ರೋ: 11 ಲಕ್ಷ ಸ್ಮಾರ್ಟ್ ಕಾರ್ಡ್ ಮಾರಾಟ

ಒಡಂಬಡಿಕೆ ಪತ್ರ ವಿನಿಮಯದ ನಂತರ ಮಾತನಾಡಿದ ಫಾರೂಕ್ ಶಾಹಬ್ , ಮೆಟ್ರೋ ನಿಲ್ದಾಣಗಳಲ್ಲಿ ಎಸ್‌ಬಿಐ ಒಟ್ಟು 63 ಎಟಿಎಂ ಕಿಯೋಸ್ಕ್ ಗಳನ್ನು ತೆರೆಯಲಿದೆ. ಬೆಂಗಳೂರು ನಗರದೊಳಗಿನ ಪ್ರಮುಖ ಮೆಟ್ರೋ ನಿಲ್ದಾಣಗಳಲ್ಲಿ 2ರಿಂದ 3 ಎಟಿಎಂ ಕಿಯೋಸ್ಕ್ ಗಳು ಇರಲಿವೆ ಎಂದು ತಿಳಿಸಿದ್ದಾರೆ.

66 SBI ATMs to come up at 38 Metro stations

ಪ್ರಸ್ತುತ ಎಲ್ಲ ಮೆಟ್ರೋ ನಿಲ್ದಾಣಗಳಲ್ಲಿ ಒಂದು ಎಟಿಎಂ ಮಾತ್ರ ಇದೆ. ಈ ಹಿಂದೆ ಮೆಟ್ರೋ ನಿಗಮ ಕರೆಯಲಾಗಿದ್ದ ಟೆಂಡರ್ ಅವಧಿ ಮುಕ್ತಾಯವಾಗಿತ್ತು. ಇನ್ನೊಂದು ತಿಂಗಳಲ್ಲಿ ಎಟಿಎಂ ಅಳವಡಿಸಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Namma metro commuters will soon have more options to withdraw acsh at stations as BMRCL announced the signing of a license agreement with SBI, which will now place 66 ATM's across the 38 stations.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ