ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೇಸಿಗೆ ರಜೆ: ಪ್ರಯಾಣಿಕರ ಸಂದಣಿ ನೀಗಿಸಲು 62 ವಿಶೇಷ ರೈಲು

|
Google Oneindia Kannada News

ಬೆಂಗಳೂರು, ಮಾರ್ಚ್ 28: ಬೇಸಿಗೆ ಕಾಲದ ರಜೆ. ಹಬ್ಬ ಮತ್ತಿತರ ಕಾರಣದಿಂದ ಪ್ರಯಾಣಿಕರ ಸಂದಣಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ಮಧ್ಯ ರೈಲ್ವೆ ಯಶವಂತಪುರ- ವಿಶಾಖಪಟ್ಟಣಂ ನಡುವೆ 62 ವಿಶೇಷ ರೈಲುಗಳ ಸಂಚಾರ ಕಾರ್ಯಾಚರಣೆ ನಡೆಸಲು ನಿರ್ಧರಿಸಿದೆ.

ಭಾರತೀಯ ರೈಲ್ವೆಗೆ ಐಡಿಯಾ ಕೊಡಿ, 10 ಲಕ್ಷ ರುಪಾಯಿ ಗೆಲ್ಲಿ ಭಾರತೀಯ ರೈಲ್ವೆಗೆ ಐಡಿಯಾ ಕೊಡಿ, 10 ಲಕ್ಷ ರುಪಾಯಿ ಗೆಲ್ಲಿ

ಯಶವಂತಪುರ-ವಿಶಾಖಪಟ್ಟಣಂ-ಯಶವಂತಪುರ ವೀಕ್ಲಿ ತತ್ಕಾಲ್ ವಿಶೇಷ ರೈಲು ಯಶವಂತಪುರ ನಿಲ್ದಾಣದಿಂದ ಪ್ರತಿ ಶುಕ್ರವಾರ ಸಂಜೆ 6.35ಕ್ಕೆ ಹೊರಟು ಮರುದಿನ ಮಧ್ಯಾಹ್ನ 2.35ಕ್ಕೆ ವಿಶಾಖಪಟ್ಟಣಂ ತಲುಪಲಿದೆ. ಇದೇ ರೈಲು ಪ್ರತಿ ಭಾನುವಾರ ಮಧ್ಯಾಹ್ನ 1.45ಕ್ಕೆ ವಿಶಾಖಪಟ್ಟಣಂನಿಂದ ಹೊರಟು ಮರುದಿನ ಬೆಳಗ್ಗೆ 9.05ಕ್ಕೆ ಯಶವಂತಪುರ ತಲುಪಲಿದೆ. ಬರುವ ಮೇ 27ರವರೆಗೆ ಒಟ್ಟು 26 ಬಾರಿ ಈ ರೈಲು ಸಂಚರಿಸಲಿದೆ.

62 special trains to meet summer rush

ಇನ್ನು ಕಾಕಿನಾಡ ಟೌನ್-ರಾಯಚೂರು ವಿಶೇಷ ರೈಲು ಪ್ರತಿ ಶನಿವಾರ ಕಾಕಿನಾಡದಿಂದ ಮಧ್ಯಾಹ್ನ 1.40ಕ್ಕೆ ಹೊರಟು ಮರುದಿನ ಬೆಳಗ್ಗೆ 8.15ಕ್ಕೆ ರಾಯಚೂರು ತಲುಪುವುದು. ಇದೇ ರೈಲು ಪ್ರತಿ ಭಾನುವಾರ ಸಂಜೆ 5.30ಕ್ಕೆ ರಾಯಚೂರಿನಿಂದ ಹೊರಟು ಮರುದಿನ ಬೆಳಗ್ಗೆ 11.25ಕ್ಕೆ ಕಾಕಿನಾಡ ತಲುಪುವುದು.

1 ಲಕ್ಷ ರೈಲ್ವೇ ಉದ್ಯೋಗಕ್ಕೆ 2 ಕೋಟಿ ಅರ್ಜಿ! 1 ಲಕ್ಷ ರೈಲ್ವೇ ಉದ್ಯೋಗಕ್ಕೆ 2 ಕೋಟಿ ಅರ್ಜಿ!

ಅಲ್ಲದೇ ವಿಜಯವಾಡ-ರಾಯಚೂರು ವಿಶೇಷ ರೈಲು ಪ್ರತಿ ಗುರುವಾರ ರಾತ್ರಿ 11.10ಕ್ಕೆ ವಿಜಯವಾಡದಿಂದ ಹೊರಟು ಮರುದಿನ ಬೆಳಗ್ಗೆ 11.30ಕ್ಕೆ ರಾಯಚೂರು ತಲುಪುವುದು.

English summary
The South Central Railway will operate 62 special trains between Yesvantpur, vishakapatnam, kakinada-Raichur and Vijayavada-Raichur- for the next two months inorder to deal with the increased demand for rail tickets from passengers.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X