ಗಿನ್ನಿಸ್ ದಾಖಲೆ ಅಳಿಸಿಹಾಕಿದ ಬೆಂಗಳೂರಿನ ಬಾಲಕ

Written By:
Subscribe to Oneindia Kannada

ಬೆಂಗಳೂರು,ಜುಲೈ, 18: ಬೆಂಗಳೂರಿನ ಆರು ವರ್ಷದ ಬಾಲಕನೊಬ್ಬ ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ. ಭಾನುವಾರ ಜುಲೈ, 17 ರಂದು ಬಾಲಕ ಸಾಧನೆ ಮೆರೆದಿದ್ದಾನೆ.

35 ಕಾರುಗಳ ಕೆಳಗೆ ಸ್ಕೇಟಿಂಗ್ ಮಾಡಿದ ಬಾಲಕ ಓಂ ಪ್ರಕಾಶ್ ಗೌಡ ಸುಮಾರು 65 ಮೀಟರ್ ದೂರ ಸಂಚರಿಸಿ ಗಿನ್ನಿಸ್ ದಾಖಲೆ ಬರೆದ ಬಾಲಕ. ಭೂಮಿಯಿಂದ ಕೆಲವೇ ಇಂಚುಗಳ ಅಂತರದಲ್ಲಿ ಮುಖ ಇಟ್ಟುಕೊಂಡು ಇಡೀ ದೇಹವನ್ನು ಬಗ್ಗಿಸಿ ಸಾಗಿದ ದೃಶ್ಯ ರೋಮಾಂಚನ ಮೂಡಿಸಿತ್ತು.[ಗಿನ್ನಿಸ್ ದಾಖಲೆ ಸೇರಿದ ಬಳ್ಳಾರಿಯ ಪ್ರವಳಿಕಾ]

bengaluru

2012 ರಲ್ಲಿ 48.21 ಮೀಟರ್ ಸಂಚರಿಸಿ ತಾನೇ ಮಾಡಿದ್ದ ದಾಖಲೆಯನ್ನು ಗೌಡ ಮುರಿದಿದ್ದಾನೆ. ಒಂದುವರೆ ವರ್ಷ ವಯೋಮಾನದಿಂದಲೇ ಗೌಡ ಇಂಥ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾನೆ.[ಈಕೆ ಗಿನ್ನಿಸ್ ದಾಖಲೆ ಬರೆದ ನಟಿ]

ಇಂಥ ಸ್ಕೆಟಿಂಗ್ ನಲ್ಲಿ ಗಿನ್ನಿಸ್ ದಾಖಲೆ ಸುಲಭವಲ್ಲ. ಸ್ಕೇಟಿಂಗ್ ಮಾಡುವಾಗ ಮುಖ, ಕೈಬೆರಳು, ಕೈ ಯಾವುದು ನೆಲಕ್ಕೆ ತಾಗಬಾರದು. ಈ ಎಲ್ಲ ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡ ಬಾಲಕ ಸಾಧನೆ ಮಾಡಿದ್ದಾನೆ. ಆತನಿಗೆ ನೀವು ಒಂದು ಕಂಗ್ರಾಟ್ಸ್ ಹೇಳಿ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A six-year-old boy in Bengaluru on 17 July. 2016, Sunday set a new Guinness World Record in limbo-skating. The kid, Om Prakash Gowda, held his body parallel to the ground and skated under 35 cars in a row, covering a distance of 65 meters with his face just inches off the ground.
Please Wait while comments are loading...