ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನಲ್ಲಿ ಟ್ರಾಫಿಕ್ ಪೊಲೀಸರಿಗಾಗಿ 530 ಚೌಕಿ ನಿರ್ಮಾಣ

|
Google Oneindia Kannada News

ಬೆಂಗಳೂರು, ಮಾರ್ಚ್ 2: ಬಿಬಿಎಂಪಿಯು ಖಾಸಗಿ ಸಹಭಾಗಿತ್ವದಲ್ಲಿ ನಗರದ 530 ಸ್ಥಳಗಳಲ್ಲಿ ಪೊಲೀಸ್ ಚೌಕಿ ನಿರ್ಮಿಸಲು ಮುಂದಾಗಿದೆ.

ಬಿಸಿಲು ಮಳೆ ಎನ್ನದೆ ಹಗಲಿರುಳು ರಸ್ತೆಯಲ್ಲಿ ಹೊಗೆ ಸೇವಿಸುತ್ತ ಸಂಚಾರ ನಿಯಂತ್ರಣ ಮಾಡುವ ಪೊಲೀಸರಿಗೆ ನೆರವಾಗಲು ಈ ಪೊಲೀಸ್ ಚೌಕಿ ನಿರ್ಮಿಸಲಾಗುತ್ತಿದೆ. ಪೊಲೀಸ್ ಇಲಾಖೆಯ ಬಹುವರ್ಷಗಳ ಬೇಡಿಕೆ ಬಳಿಕ ಬಿಬಿಎಂಪಿ ಕೊನೆಗೂ ಪೊಲೀಸ್ ಅಂಬ್ರೆಲಾ ನಿರ್ಮಾಣಕ್ಕೆ ಮುಂದಾಗಿದೆ.

ಬಿಬಿಎಂಪಿ ಪೊಲೀಸ್ ಚೌಕಿ ನಿರ್ಮಿಸಲು ಶೀಘ್ರವೇ ಟೆಂಡರ್ ಕರೆಯಲಿದ್ದು ಈಗಾಗಲೇ ಬಿಬಿಎಂಪಿಯು ಜನಾಗ್ರಹ( ಎನ್ ಜಿಓ )ಸಹಾಯದೊಂದಿಗೆ ಪೊಲೀಸ್ ಚೌಕಿಯ ವಿನ್ಯಾಸವನ್ನು ಅಂತಿಮಗಳಿಸಿದೆ. ಬಿಬಿಎಂಪಿ ಅಧಿಕಾರಿಗಳ ಪ್ರಕಾರ ಪೊಲೀಸ್ ಚೌಕಿ ಎಂದರೆ ಒಂದು ಕ್ಯಾಬಿನ್ ನಿರ್ಮಿಸಲಾಗುತ್ತದೆ ಅದರೊಳಗೆ ಮೂವರು ಪೊಲೀಸ್ ಕುಳಿತುಕೊಳ್ಳಬಹುದಾಗಿದೆ. ಒಂದು ಎಲ್ ಇಡಿ ಡಿಸ್‌ ಪ್ಲೇ ಇರುತ್ತದೆ. ಮೈಕ್, ಲೌಡ್ ಸ್ಪೀಕರ್ ಜತೆಗೆ ಫ್ಯಾನ್ ಕೂಡ ಅಳವಡಿಸಲಾಗುತ್ತದೆ.

530 police chowky come up in Bengaluru soon

ಒಂದು ವಾರದೊಳಗೆ ಟೆಂಡರ್ ಕರೆಯಲಾಗುತ್ತದೆ. ಇಲಾಖೆ ಒತ್ತಾಯದ ಮೇರೆಗೆ 530 ಪೊಲೀಸ್ ಚೌಕಿಗಳನ್ನು ನಿರ್ಮಿಸಲು ಬಿಬಿಎಂಪಿ ಸಮ್ಮತಿ ನೀಡಿದೆ. ಇದರಿಂದಾಗಿ ಪೊಲೀಸರು ಇನ್ನೂ ಉತ್ತಮ ಕೆಲಸಗಳನ್ನು ಮಾಡಲು ಸಹಕಾರಿಯಾಗಲಿದೆ. ಹೆಚ್ಚುವರು ಪೊಲೀಸ್ ಆಯುಕ್ತ ಆರ್ ಹಿತೇಂದ್ರ ತಿಳಿಸಿದ್ದಾರೆ.

ಈ ಮೊದಲು ಬಿಬಿಎಂಪಿಯು 430 ಚೌಕಿಯನ್ನು ನಿರ್ಮಿಸಲು ಆಲೋಚಿಸಿತ್ತು. ಮೊದಲ ಹಂತದಲ್ಲಿ 130 ಚೌಕಿಯನ್ನು ನಿರ್ಮಿಸಲಾಗುತ್ತದೆ ಎಂದು ತಿಳಿಸಿತ್ತು. ಆದರೆ ಪೊಲೀಸ್ ಇಲಾಖೆ ಜತೆಗೆ ಬಿಬಿಎಂಪಿ ನಡೆಸಿದ ಸಭೆಯ ನಂತರ ಪೊಲೀಸ್ ಚೌಕಿ ಸಂಖ್ಯೆಯನ್ನು 530ಕ್ಕೆ ಏರಿಸಲಾಯಿತು ಎಂದು ಮಾಹಿತಿ ನೀಡಿದ್ದಾರೆ.

English summary
BBMP will build and upgrade chowkies for traffic police at 530 junctions under PPP model. finally, traffic cops in the city will be able to stay cool in the weather.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X