ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಮ್ಮ ಮೆಟ್ರೋಗೆ ಪರೋಕ್ಷವಾಗಿ ತಟ್ಟಿದೆ ಬಂದ್ ಬಿಸಿ!

|
Google Oneindia Kannada News

ಬೆಂಗಳೂರು, ಜನವರಿ 25 : ಮಹಾದಾಯಿ ನದಿ ವಿವಾದ ಇತ್ಯರ್ಥಕ್ಕಾಗಿ ಕನ್ನಡಪರ ಸಂಘಟನೆಗಳು ಕರೆ ನೀಡಿದ ಕರ್ನಾಟಕ ಬಂದ್ ಬಹುತೇಕ ಯಶಸ್ವಿಯಾಗಿದೆ. ಕೆಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದ್ದರೂ ಮೆಟ್ರೋಗೆ ಬಂದ್ ನ ಬಿಸಿ ಅಷ್ಟಾಗಿ ತಟ್ಟಿಲ್ಲ.

ನಮ್ಮ ಮೆಟ್ರೋ ಸಾರ್ವಜನಿಕರಿಗೆ ಸಹಾಯವಾಗಲೆಂದು ಎಂದಿನಂತೆ ಸಂಚಾರ ಪ್ರಾರಂಭಿಸಿತ್ತು. ಆದರೆ ಪ್ರಯಾಣಿಕಕರ ಸಂಖ್ಯೆ ಕಡಿಮೆಯಿತ್ತು. ಕಳೆದ ವಾರ ಜನವರಿ 18 ನೇ ತಾರೀಕಿನ ಗುರುವಾರಕ್ಕೆ ಹೋಲಿಸಿದೆ ಕೇವಲ ಶೇ.50 ರಷ್ಟು ಮಂದಿ ಗುರುವಾರ ಮೆಟ್ರೋ ಬಳಕೆ ಮಾಡಿದ್ದಾರೆ. ಜನವರಿ18 ರಂದು ಬೆಳಗ್ಗೆ 5 ರಿಂದ ಮಧ್ಯಾಹ್ನ1 ಗಂಟೆಯವರೆಗೆ 1,48,308 ಮಂದಿ ಮೆಟ್ರೋ ಬಳಕೆ ಮಾಡಿದ್ದರು. ಶೇ.50 ರಷ್ಟು ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆಎಂದು ನಮ್ಮ ಮೆಟ್ರೋದ ಪ್ರಧಾನ ವ್ಯವಸ್ಥಾಪಕ ಯು.ಎ.ವಸಂತರಾವ್ ತಿಳಿಸಿದ್ದಾರೆ.

50 percent dip in Metro commuters

Recommended Video

ಮಹದಾಯಿಗಾಗಿ ಕರ್ನಾಟಕ ಬಂದ್ | ಕರ್ನಾಟಕದ ಎಲ್ಲಾ ಭಾಗಗಳಲ್ಲಿ ಬಂದ್ ಆಚರಣೆ | Oneindia kannada

ಆದರೆ ಗುರುವಾರ ಬೆಳಗ್ಗೆ 5 ರಿಂದ ಮಧ್ಯಾಹ್ನ1 ರವರೆಗೆ ಎರಡೂ ಮಾರ್ಗಗಳು ಸೇರಿ ಒಟ್ಟು ಕೇವಲ 69,394 ಮಂದಿ ಪ್ರಯಾಣ ಮಾಡಿದ್ದಾರೆ. ಕರ್ನಾಟಕ ಬಂದ್ ನೇರವಾಗಿ ನಮ್ಮ ಮೆಟ್ರೋ ಮೇಲೆ ಪರಿಣಾಮ ಬೀರದಿದ್ದರೂ ಪರೋಕ್ಷವಾಗಿ ಬಂದ್ ನ ಬಿಸಿ ನಮ್ಮ ಮೆಟ್ರೋಗೂ ತಟ್ಟಿದೆ.

English summary
Namma metro service hit by bandh call and witnessed 50 percent dip in commuters comparing to last Thursday between morning to 1pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X